ಹೆಚ್.ಜೆ. ರಾಕೇಶ್
ಮಡಿಕೇರಿ, ಜು. ೨೦ : ತ್ವರಿತ ನ್ಯಾಯದಾನಕ್ಕಾಗಿ ಹತ್ತುಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಕಾಯಿದೆ-ಕಾನೂನುಗಳಲ್ಲಿಯೂ ತಿದ್ದುಪಡಿಯೂ ಆಗುತ್ತಿದೆ. ಇವೆಲ್ಲದರ ನಡುವೆ ನ್ಯಾಯಾಂಗ ತನ್ನ ಪರಿದಿಯಿಂದ ಹೊರಬಂದು ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಅದಕ್ಕೆ ಲೋಕ್ ಅದಾಲತ್ ಎಂಬ ಕಾರ್ಯಕ್ರಮ ಸಾಕ್ಷಿಯಾಗಿದೆ.
ಹಲವು ವರ್ಷಗಳಿಂದ ಬಗೆಹರಿಯದ ಅದೆಷ್ಟೋ ಪ್ರಕರಣಗಳು ಲೋಕ್ ಅದಾಲತ್ನಲ್ಲಿ ಪರಿಹಾರವಾಗಿವೆ. ಜುಲೈ ೧೨ ರಂದು ಮಡಿಕೇರಿ, ಪೊನ್ನಂಪೇಟೆ, ಕುಶಾಲನಗರ, ಸೋಮವಾರಪೇಟೆ ಹಾಗೂ ವೀರಾಜಪೇಟೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಏಕಕಾಲದಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಒಟ್ಟಾರೆಯಾಗಿ ೪,೯೬೧ ಪರಿಗಣಿಸಲ್ಪಟ್ಟ ಪ್ರಕರಣಗಳ ಪೈಕಿ ೨,೬೦೬ ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥಗೊಂಡು ದಾಖಲೆ ಬರೆದಿದೆ. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ದೀರ್ಘಕಾಲದ ಪ್ರಕರಣಗಳು ಅಂತ್ಯಕAಡಿವೆ.
ಏನಿದು ಲೋಕ್ ಅದಾಲತ್?
ಸಾಂಪ್ರದಾಯಿಕ ನ್ಯಾಯಾಲಯ ವ್ಯವಸ್ಥೆಯ ಹೊರತಾಗಿ ವಿವಾದಗಳು ಹಾಗೂ ಕುಂದುಕೊರತೆಗಳನ್ನು ಪರಿಹರಿಸಲು ಭಾರತದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ಲೋಕ್ ಅದಾಲತ್ಅನ್ನು ರಚಿಸಲಾಗಿದೆ.
ಲೋಕ್ ಅದಾಲತ್ ಒಂದು ಪರ್ಯಾಯ ಪರಿಹಾರ ವ್ಯವಸ್ಥೆ. ಇದು ನ್ಯಾಯಾಲಯದಲ್ಲಿ ಅಥವಾ ವ್ಯಾಜ್ಯಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳನ್ನು ಸೌಹಾರ್ಧಯುತವಾಗಿ ಇತ್ಯರ್ಥಪಡಿಸಲು ವೇದಿಕೆಯಾಗಿದೆ.
ಲೋಕ್ ಅದಾಲತ್ಗಳಲ್ಲಿ ಮಾಡಿದ ತೀರ್ಪು ಸಿವಿಲ್ ನ್ಯಾಯಾಲಯದ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ತೀರ್ಪು ವಿರುದ್ಧ ಯಾವುದೇ ಔಪಚಾರಿಕ ಮೇಲ್ಮನವಿ ಯಾವುದೇ ನ್ಯಾಯಾಲಯದ ಮುಂದೆ ಇರುವುದಿಲ್ಲ. ಆದಾಗ್ಯೂ, ಲೋಕ್ ಅದಾಲತ್ನ ತೀರ್ಪು ತೃಪ್ತವಾಗದಿದ್ದರೆ, ಸೂಕ್ತ ನ್ಯಾಯವ್ಯಾಪ್ತಿಯ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಮುಂದುವರೆಸಲು ಅವಕಾಶಗಳಿವೆ.
ಲೋಕ್ ಅದಾಲತ್ನ ಮುಖ್ಯ ಉದ್ದೇಶವೆಂದರೆ ವಿವಾದಗಳನ್ನು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಇತ್ಯರ್ಥಪಡಿಸುವುದು, ಇದರಿಂದ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರದೆಯೇ ಪರಿಹಾರ ಪಡೆಯುವುದಾಗಿದೆ.
ಇತ್ಯರ್ಥಕ್ಕೆ ಸಾಧ್ಯವಿರುವ ಪ್ರಕರಣಗಳು
ಲೋಕ್ ಅದಾಲತ್ನಲ್ಲಿ ಸಂಕೀರ್ಣಗೊಳಿಸಬಹುದಾದ ಕ್ರಿಮಿನಲ್ ಅಪರಾಧಗಳು, ಭೂವಿವಾದ, ನೆಗೋಶಿಯೇಬಲ್ ಇನ್ಸುಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ ೧೩೮ ರ ಅಡಿಯಲ್ಲಿ ಪ್ರಕರಣಗಳು, ಹಣದ ಮರುಪಾವತಿಗೆ ಸಂಬAಧಿಸಿದ ಸಮಸ್ಯೆಗಳು, ಚೆಕ್ಬೌನ್ಸ್, ಭಾರತೀಯ ಮೋಟಾರು ವಾಹನ ಕಾಯ್ದೆ, ೧೯೮೮ರ ಅಡಿಯಲ್ಲಿನ ಸಮಸ್ಯೆಗಳು, ಕಾರ್ಮಿಕ ವಿವಾದಗಳಿಗೆ ಸಂಬAಧಿಸಿದ ವಿಷಯಗಳು, ರಾಜಿ ಮಾಡಿಕೊಳ್ಳಲಾಗದ ಅಪರಾಧಗಳನ್ನು ಹೊರತುಪಡಿಸಿ, ವಿದ್ಯುತ್ ಅಥವಾ ನೀರಿನಂತಹ ಸಾರ್ವಜನಿಕ ಉಪಯುಕ್ತ ಬಿಲ್ಗಳಿಗೆ ಸಂಬAಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಇದರೊಂದಿಗೆ ದಾಂಪತ್ಯಕ್ಕೆ ಸಂಬAಧಿಸಿದ ಸಮಸ್ಯೆಗಳು, ನ್ಯಾಯಾಲಯದಲ್ಲಿ ಸಲ್ಲಿಸಲು ಯೋಜಿಸಲಾಗಿರುವ ಆದರೆ ವಿಚಾರಣೆಗೆ ಬಾರದ ವಿವಾದ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ಸಲ್ಲಿಸಬಹುದಾಗಿದೆ. ರಾಜಿ ಮಾಡಿಕೊಳ್ಳಲಾಗದ ಅಪರಾಧಗಳನ್ನು ಹೊರತುಪಡಿಸಿ, ಸಿವಿಲ್ ವಿವಾದಗಳು, ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ಕ್ರಿಮಿನಲ್ ರಾಜಿ ಮಾಡಿಕೊಳ್ಳ ಬಹುದಾದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಲೋಕ್ ಅದಾಲತ್ ವೇದಿಕೆಯಾಗಿದೆ. ಕೋರ್ಟ್ ಮೆಟ್ಟಿಲೇರುವ ಮುನ್ನವೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಲೋಕ್ ಅದಾಲತ್ ಪರಿಹರಿಸಿಕೊಳ್ಳಬಹುದಾಗಿದೆ. ಇದರಿಂದ ತ್ವರಿತ ನ್ಯಾಯದಾನ ದೊರೆಯುತ್ತದೆ ಎಂಬ ವ್ಯಾಖ್ಯಾನವಿದೆ.
ದಶಕಗಳ ಪ್ರಕರಣಗಳು ರಾಜಿಲೋಕ್ ಅದಾಲತ್ನಲ್ಲಿ ೧೦-೨೦ ವರ್ಷಗಳಿಂದ ವಿವಾದದಲ್ಲಿದ್ದ ಅದೆಷ್ಟೋ ಪ್ರಕರಣಗಳು ರಾಜಿಗೊಂಡಿವೆ. ೨೦೦೫ರಲ್ಲಿ ವ್ಯಕ್ತಿಯೊಬ್ಬರು ಮಹಾರಾಷ್ಟç ಅಪೆಕ್ಸ್ ಸಂಸ್ಥೆಯಿAದ ಲಾರಿ ಖರೀದಿ ಉದ್ದೇಶಕ್ಕೆ ರೂ. ೨.೧೦ ಲಕ್ಷ ಸಾಲ ಪಡೆದಿದ್ದರು. ಕೆಲ ಸಮಯದಲ್ಲಿ ಅವರು ಸಾವನ್ನಪ್ಪಿದ ಹಿನ್ನೆಲೆ ಸಾಲದ ಕಂತು ಪಾವತಿಸದ ಕಾರಣ ಬಡ್ಡಿ ಬೆಳೆದು ರೂ. ೩೬ ಲಕ್ಷ ತಲುಪಿತ್ತು. ಈ ವ್ಯಾಜ್ಯ ಮಡಿಕೇರಿಯ ಕೋರ್ಟ್ ಮೆಟ್ಟಿಲೇರಿ ಅದೆಷ್ಟೋ ಸಮಯ ಕಳೆದಿತ್ತು. ಅನಂತರ ಲೋಕ್ ಅದಾಲತ್ನಲ್ಲಿ ಇತ್ಯರ್ಥಗೊಂಡು ಪಡೆದ ರೂ. ೨.೧೦ ಲಕ್ಷ ಅಸಲು ಹಣವನ್ನು ನೀಡುವಂತೆ ತೀರ್ಪು ಪ್ರಕಟಗೊಂಡು ಪರಸ್ಪರ ಒಪ್ಪಿಗೆ ದೊರೆತು ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ.
ಅದೇ ರೀತಿ ವಿಚ್ಛೇದನ ಪಡೆಯಲು ಮುಂದಾಗಿದ್ದ ೬ ಜೋಡಿಗಳು ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಒಂದಾಗಿವೆ. ಈ ರೀತಿ ಹಲವು ಪ್ರಕರಣ ಅದಾಲತ್ನಲ್ಲಿ ಬಗೆಹರಿದಿದೆ.