ಸೋಮವಾರಪೇಟೆ, ಜು. ೨೧: ಸಮೀಪದ ಗಾಂಧಿನಗರದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕೊನೆಯ ಶುಕ್ರವಾರದಂದು ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಗಳು ನಡೆದವು. ಶ್ರೀ ದೊಡ್ಡಮಾರಿಯಮ್ಮ ದೇವಿ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ನೈವೇದ್ಯ, ಅಲಂಕಾರ,ಮಹಾಮAಗಳಾರತಿ ಪೂಜಾ ಕಾರ್ಯಗಳು ಅರ್ಚಕ ಬಸವಕುಮಾರ್ ಶಾಸ್ತಿçÃಗಳ ಪೌರೋಹಿತ್ವದಲ್ಲಿ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಚಿಂತು ಹಾಗೂ ಪದಾಧಿಕಾರಿಗಳು, ನೂರಾರು ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಪೂಜೋತ್ಸವದ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ತಾ. ೨೨ರಂದು ಕೊನೆ ಪೂಜೆ: ತಾ. ೨೨ರಂದು ಆಷಾಢ ಮಾಸದ ಕೊನೆಯ ದಿನದಂದು ದೇವಿಗೆ ವಿಶೇಷ ಪೂಜೆಗಳು ನಡೆಯಲಿವೆ. ಬೆಳಿಗ್ಗೆ ೬ ಗಂಟೆಯಿAದ ಫಲಪಂಚಾಮೃತ ಅಭಿಷೇಕ, ಸಂಜೆ ೬ ಗಂಟೆಗೆ ರಂಗ ಪೂಜೆ, ೭ ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ಅರ್ಚಕ ಬಸವಕುಮಾರ್ ಶಾಸ್ತಿçà ತಿಳಿಸಿದ್ದಾರೆ.