ಮಡಿಕೇರಿ, ಜು. ೨೧: ರೂ. ೫ ಸಾವಿರ ಮೌಲ್ಯದ ಶೂಗಾಗಿ ಸ್ನೇಹಿತನಿಗೆ ಸವಾಲು ಹಾಕಿ ನದಿಗೆ ಹಾರಿದ ಯುವಕನ ವಿರುದ್ಧ ಇದೀಗ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ದುಸ್ಸಾಹಸ ಮಾಡಿದ ಕುಂಜಿಲ ಗ್ರಾಮದ ಎಂ.ಎನ್. ಸಲ್ಮಾನ್ (ಚೆಲ್ಲು-೨೪) ವಿರುದ್ಧ ಬಿಎನ್‌ಎಸ್ ೨೦೨೩ ಸೆಕ್ಷನ್ ೧೨೫ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ಕಕ್ಕಬ್ಬೆ ಸೇತುವೆ ಮೇಲಿನಿಂದ ನದಿಗೆ ಸಲ್ಮಾನ್ ಹಾರಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.