ವೀರಾಜಪೇಟೆ, ಜು. ೩೦ : ಜನ ಸೇವಾ ಟ್ರಸ್ಟ್ ವತಿಯಿಂದ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ ೫ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಪ್ರಮುಖರಾದ ಕಾಣತಂಡ ಬೀನಾ ಜಗದೀಶ್, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕವಾಗಿ ಸಹಾಯಹಸ್ತ ನೀಡುವ ಪರಿಪಾಠ ಬೆಳೆಸುವುದ ರೊಂದಿಗೆ ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬರ ಮನದಿಂದ ಬರುವಂತಾಗಬೇಕು ಎಂದರು.
ಜನಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಶರೀಫ್ ಅವರು ಮಾತನಾಡಿ, ಜನರ ಸೇವೆಯೇ ಮಾನವ ಧರ್ಮ ಎಂಬ ಧ್ಯೇಯೆಯಿಂದ ಸತತ ಐದು ವರ್ಷಗಳಿಂದ ಬಡ ಹೆಣ್ಣು ಮಕ್ಕಳ ಮದುವೆ, ರೋಗಿಗಳಿಗೆ ಚಿಕಿತ್ಸಾ ವೆಚ್ಚ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸಾಧಕರಿಗೆ ಸನ್ಮಾನ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ದಾನಿಗಳ ನೆರವಿನಿಂದ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರವನ್ನು ನೀಡಲಾಗುತ್ತಿದೆ. ದಾನಿಗಳ ಸ್ಪಂದನೆ, ಮತ್ತು ಪ್ರೋತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಯ್ಕೆಯಾದ ೮೦ ವಿದ್ಯಾರ್ಥಿಗಳಿಗೆ ತಲಾ ರೂ. ೩೦೦೦ ಗಳಂತೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಎಸ್.ಎಸ್.ಎಲ್.ಸಿ., ಪಿ.ಯು.ಸಿ ಪದವಿ ಹಾಗೂ ಮದ್ರಸ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆಯ ಸ್ಥಾಯಿ ಸಮಿತಿ ಅದ್ಯಕ್ಷರಾದ ಅಬ್ದುಲ್ ಜಲೀಲ್, ಮಕ್ಕಳ ತಜ್ಞ ಡಾ. ಬಾಷ, ವಕೀಲರಾದ ಬಾನು ಅಂಬಿ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಜೀರ್, ಉದ್ಯಮಿ ನಾವಫ್, ಎಸ್.ಡಿ.ಪಿ.ಐ ನಗರ ಘಟಕದ ಅಧ್ಯಕ್ಷರಾದ ಸಾಬಿತ್, ಪ್ರಮುಖರಾದ ಸಿ. ಎ. ನಾಸಿರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನ ಸೇವಾ ಟ್ರಸ್ಟ್ನ £ರ್ದೇಶಕರಾದ ಇಂತಿಯಾಜ್ ಸ್ವಾಗತಿಸಿದರು, ಆಶೀಫ್ ಅಮ್ಮತ್ತಿ ನಿರೂಪಿಸಿದರು. ಸ್ಥಾಪಕ ಅಧ್ಯಕ್ಷರಾದ ಶರೀಫ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಜನಸೇವಾ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು, ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.