ಮಡಿಕೇರಿ, ಜು. ೩೦: ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್ನಲ್ಲಿ ನಿಶಾಂತ್ ವೈಲ್ಡ್ ಬೀಸ್ಟ್ ವತಿಯಿಂದ ಆಯೋಜಿಸಿದ್ದ ಡಾನ್ಸ್ ಮ್ಯಾರಥಾನ್ ಸೀಸನ್ -೧೩ ರ ಜೂನಿಯರ್ ವಿಭಾಗದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಕಿಂಗ್ಸ್ನ ನೃತ್ಯ ಸಂಯೋಜಕ ಮಹೇಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ದೀಪಿಕ್ಷಾ, ಯಶ್ವಿತಾ, ಸೋನಾಕ್ಷಿ, ವರ್ಣವಿ, ವಿವೇಕ್, ಅಕ್ಷರ, ತ್ರಿಷಾ, ತನಿಶ್, ಒಸಿಯಾನ್ ಮುತ್ತಮ್ಮ, ಮೊನಾಲಿ, ಅಕ್ಷರ, ಹಂಶಿಕ, ಕಿಶನ್, ಪ್ರಣಮ್ಯ, ಇಶಾಂತ್, ಕನ್ನಿಕೆ, ಪ್ರಜ್ಞಾ ಭಾಗವಹಿಸಿದ್ದರು.