ಐಗೂರು, ಜು. ೩೦: ಕಳೆದ ಒಂದು ವಾರದಿಂದ ಐಗೂರು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು ಮಳೆಯ ನೀರನ್ನು ಅವಲಂಬಿಸುವAತಾಗಿದೆ. ನೀರು ಗಂಟಿಗಳು ವಿದ್ಯುತ್ತಿನ ಆಗಮನವನ್ನೇ ಕಾಯುತ್ತಿದ್ದು ಸೆಸ್ಕ್ ಸಿಬ್ಬಂದಿಗಳಿAದ ಇಂದು, ನಾಳೆ ಸರಿಯಾಗುವುದಾಗಿ ಉತ್ತರಗಳು ಬರುತ್ತಿವೆ. ಮೊಬೈಲನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಇಂದಿನ ಯುಗದ ಸ್ಥಿತಿಗೆ ಮನೆಯಲ್ಲಿ ಯುಪಿಎಸ್, ಮತ್ತು ಎಲ್ಲಾ ಚಾರ್ಜಿಂಗ್ ವ್ಯವಸ್ಥೆಗಳು ನಿಷ್ಕಿçಯವಾಗಿದೆ. ಗ್ರಾಮಸ್ಥರು ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಾಗಿ ಗ್ರಾಮದ ಬ್ಯಾಂಕುಗಳು ಮತ್ತು ಕೃಷಿ ಪತ್ತಿನ ಸಂಘ ವನ್ನು ಆಶ್ರಯಿಸಿದ್ದು, ಬೆಳಿಗ್ಗಿನಿಂದ ಸಂಜೆಯವರೆಗೆ ಒಂದು ಪ್ಲಗ್ ನ ಚಾರ್ಜಿಂಗ್ ವ್ಯವಸ್ಥೆಯ ಬಳಿ ಮೊಬೈಲ್ ಚಾರ್ಜಿಂಗ್‌ಗೆ ಜನ ಮುಗಿ ಬೀಳುತ್ತಿದ್ದು ಜನ ಜಂಗುಳಿಯಲ್ಲಿ ನೂಕು ನುಗ್ಗಲಿನ ದೃಶ್ಯ ಕಂಡು ಬಂದಿತು. ಚಾರ್ಜಿಂಗ್ ವ್ಯವಸ್ಥೆಗೆ ಸಹಕಾರ ನೀಡಿದಕ್ಕಾಗಿ ಕೃಷಿ ಪತ್ತಿನ ಸಂಘಕ್ಕೆ ಜನರು ಕೃತಜ್ಞತೆ ಸಲ್ಲಿಸಿದ್ದಾರೆ. -ಸುಕುಮಾರ್