ಮಡಿಕೇರಿ ಜು. ೩೧: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲುವಿನ ನಾಲ್ನಾಡ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಹಾಗೂ ಕೊಡವ ಸಮಾಜ ರಿಕ್ರಿಯೇಷನ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಆಗಸ್ಟ್, ೭ ರಂದು ಕೊಡವ ಹಾಗೂ ಕೊಡವ ಭಾಷಿಕ ಜನಾಂಗದವರಿಗೆ, ಬಿದ್ದಾಟಂಡ ಓಟ್ ಯಾಕದಲ್ಲಿ ಐಪಣಿರ ಅಯಿಮೆ ಮತ್ತು ಕಳಿ ಪೈಪೋಟಿ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮ ದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಸಾರ್ವಜನಿಕರಿಗೆ ಮತ್ತು ಮಹಿಳೆ ಯರಿಗೆ ವಿವಿಧ ಪೈಪೋಟಿಗಳನ್ನು ಹಮ್ಮಿಕೊಳ್ಳಲಾಗಿದೆ. ನಾಟಿ ಓಟ, ಕೊಡಿನಾಟಿ ಇಡುವುದು, ಉಯ್ಯಾಪಾಟ್, ಪೈಪೋಟಿಗಳು ಇದ್ದು, ಹಗ್ಗ ಜಗ್ಗಾಟ ಮತ್ತು ಇತರ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ, ಕಂಬೆಯAಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿ ಗಾಗಿ ೯೯೦೧೦೧೪೬೦೭ ಅಥವಾ ೯೭೪೨೭೨೮೮೦೫ ನ್ನು ಸಂಪರ್ಕಿ ಸಬಹುದೆಂದು ಅಕಾಡೆಮಿ ತಿಳಿಸಿದೆ.