ಕೂಡಿಗೆ, ಜು. ೩೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಅಂದಾಜು ೩೦ ಕೆ.ಜೆ. ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭ ಬಾಣವಾರ ಉಪ ವಲಯ ಅರಣ್ಯ ಅಧಿಕಾರಿಗೆ ದೊರೆತ ಮಾಹಿತಿಯ ಮೇರೆ ದಾಳಿ ಮಾಡಿ ಆರೋಪಿ ಪ್ರತಾಪ್ ಮತ್ತು ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಸಂದರ್ಭ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶ್ರವಣಕುಮಾರ್, ಗಸ್ತು ವನಪಾಲಕ ಈರಣ್ಣ ಅಕ್ಕಿ, ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ವೇದ, ಪ್ರವೀಣ್, ಸಂತೋಷ್, ನಾಗರಾಜ್, ಸಂಜಯ್, ಧರ್ಮ ಇದ್ದರು.