ಸೋಮವಾರಪೇಟೆ, ಆ. ೧: ಅಧಿಕ ಭಾರದ ಭಾರೀ ವಾಹನಗಳ ಓಡಾಟಕ್ಕೆ ತಡೆಯಿದ್ದರೂ ಸಹ ಸೋಮವಾರಪೇಟೆ ಭಾಗದಲ್ಲಿ ಅವ್ಯಾಹತವಾಗಿ ವಾಹನಗಳ ಸಂಚಾರವಿದ್ದು, ಇದರಿಂದಾಗಿ ರಸ್ತೆಗಳಿಗೆ ಸಂಚಕಾರ ಎದುರಾಗಿದೆ. ತಕ್ಷಣ ಇಂತಹ ವಾಹನಗಳ ಓಡಾಟಕ್ಕೆ ಪೊಲೀಸ್, ಆರ್‌ಟಿಓ ಇಲಾಖೆ ತಡೆಯೊಡ್ಡಬೇಕೆಂದು ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.

ಎಂ.ಸ್ಯಾAಡ್, ಜಲ್ಲಿಕಲ್ಲು, ಕಾಫಿ, ಟಿಂಬರ್, ಸಿಮೆಂಟ್‌ಗಳನ್ನು ೬ ಚಕ್ರ ಮೇಲ್ಪಟ್ಟ ಭಾರೀ ವಾಹನಗಳು ಸಾಗಾಟಗೊಳಿಸುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಈಗಾಗಲೇ ವಾಹನದ ಭಾರವನ್ನೂ ಒಳಗೊಂಡAತೆ ೧೮ ಟನ್ ತೂಕದ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದಾರೆ. ಆದರೂ ಯಾವುದೇ ಅಡೆತಡೆಯಿಲ್ಲದೇ ವಾಹನಗಳ ಸಂಚಾರ ನಡೆಯುತ್ತಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ವಿ.ಎ. ಲಾರೆನ್ಸ್ ಆರೋಪಿಸಿದ್ದಾರೆ.

ಲೋಕೋಪಯೋಗಿ ಮತ್ತು ಪಿಆರ್‌ಇಡಿ ನಿಯಮದ ಪ್ರಕಾರ ರಾಜ್ಯ ಹೆದ್ದಾರಿಗಳಲ್ಲಿ ೧೮ ಟನ್ ಮಿತಿಯೊಳಗೆ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ೧೨ ಟನ್ ಮಿತಿಯೊಳಗೆ ವಾಹನಗಳು ಸಂಚರಿಸಬೇಕು. ಇದು ಜೂನ್‌ನಿಂದ ಆಗಸ್ಟ್ ತಿಂಗಳೊಳಗೆ ಚಾಲ್ತಿಯಲ್ಲಿರುತ್ತದೆ. ಪ್ರಸಕ್ತ ವರ್ಷ ಅಂತರ್ಜಲ ಹೆಚ್ಚಿದ್ದು, ರಸ್ತೆಗಳು ಹೆಚ್ಚು ಭಾರವನ್ನು ಹೊರುವ ಶಕ್ತಿ ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ವಾಹನಗಳ ಓಡಾಟದಿಂದ ರಸ್ತೆ ಗುಂಡಿ ಬೀಳುವ ಸಂಭವವಿದೆ ಎಂದು ಲಾರೆನ್ಸ್ ತಿಳಿಸಿದ್ದಾರೆ.

ಶಾಸಕರ ವಿಶೇಷ ಅನುದಾನ ೧೯ ಕೋಟಿಯಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡು ೩ ತಿಂಗಳಷ್ಟೇ ಕಳೆದಿದೆ. ಈ ರಸ್ತೆಗಳು ಜಿಲ್ಲಾ ಮುಖ್ಯರಸ್ತೆ ಹಾಗೂ ಗ್ರಾಮ ಸಂಪರ್ಕದ ಪ್ರಮುಖ ರಸ್ತೆಗಳಾಗಿವೆ. ಒಂದು ವೇಳೆ ಭಾರೀ ತೂಕದ ವಾಹನಗಳ ಸಂಚಾರದಿAದ ರಸ್ತೆಗಳು ಗುಂಡಿ ಬಿದ್ದರೆ, ಗುತ್ತಿಗೆದಾರರು ಕಳಪೆ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕ ಭಾರದ ವಾಹನಗಳ ಸಾಗಾಟ ಕಂಡುಬAದರೆ ಸ್ಥಳೀಯರೇ ಆಕ್ಷೇಪ ವ್ಯಕ್ತಪಡಿಸಬೇಕು.

ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆಯೂ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿ.ಎ. ಲಾರೆನ್ಸ್ ಒತ್ತಾಯಿಸಿದ್ದಾರೆ.