ಮಡಿಕೇರಿ, ಜು. ೩೧: ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿ ನಡುವೆ ಭೂಕುಸಿತ ತಡೆಯುವ ನಿಟ್ಟಿನಲ್ಲಿ ನಿರ್ಮಿಸಿರುವ ತಡೆಗೋಡೆಗಳಲ್ಲಿ ಬಿರುಕು ಮೂಡಿರುವ ಪ್ರದೇಶದ ಕೆಳಭಾಗದಲ್ಲಿ ನೆಲೆಸಿರುವ ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ತಡೆಗೋಡೆಯಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಡದಿಂದಾಗಿ ತಡೆಗೋಡೆಯ ಮಧ್ಯಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಮೇಲ್ವಿಚಾರಣೆ ನಡೆಯುತ್ತಿದ್ದು, ತಾಂತ್ರಿಕ ತಜ್ಞರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಭಾರೀ ವಾಹನ ನಿಷೇಧ
ಗೋಡೆಯಲ್ಲಿ ಬಿರುಕು ಇರುವದರಿಂದ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧದ ಬಗ್ಗೆಯೂ ಚಿಂತಿಸಲಾಗುತ್ತಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಬದಲಿ ರಸ್ತೆ ವ್ಯವಸ್ಥೆ ಯೊಂದಿಗೆ ಕ್ರಮ ಕೈಗೊಳ್ಳಲಾಗುವದು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ದಿಂದಲೂ ಕಾಮಗಾರಿ ಸಂಬAಧ ವರದಿ ಬಂದಿದೆ. ತಾಂತ್ರಿಕ ಪರಿಹಾರಕ್ಕೆ ಕ್ರಮವಹಿಸಲಾಗುತ್ತಿದೆ. ಜನರ ರಕ್ಷಣೆ ಮುಖ್ಯವಾಗಿದೆ. ಯಾವುದೇ ಅಪಾಯ ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಈ ಭಾಗದಲ್ಲಿರುವ ನಿವಾಸಿಗಳ ಮನವೊಲಿಸಿ ಸ್ಥಳಾಂತರಕ್ಕೂ ಮುಂದಾಗಲಾಗಿದೆ. ಈಗಾಗಲೇ ಮೂರು ಕುಟುಂಬ ಸ್ಥಳಾಂತರ ವಾಗಿರುವುದಾಗಿ ಹೇಳಿದರು. ಕೆಲವರು ಸಂಬAಧಿಕರ ಮನೆಗಳಿಗೆ ತೆರಳಿದ್ದು, ವಯಸ್ಸಾದ ದಂಪತಿ, ಸಾಕು ಪ್ರಾಣಿಗಳಿರುವವರು೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ. ಅವರ ಮನವೊಲಿಸಲಾಗುವದೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಂದರ್ಭ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಿರೀಶ್, ತಹಶೀಲ್ದಾರ್ ಶ್ರೀಧರ್, ಕಂದಾಯ ಇಲಾಖಾ ಸಿಬ್ಬಂದಿ ಗಳು, ನಗರ ಸಂಚಾರಿ ಠಾಣಾಧಿಕಾರಿಗಳಾದ ಶ್ರೀಧರ್, ತಮ್ಮಯ್ಯ, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.