ಮಡಿಕೇರಿ, ಜು. ೩೦: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಇದ್ದ ಮಳೆ - ಗಾಳಿಯ ಆರ್ಭಟ ಇದೀಗ ಒಂದಷ್ಟು ಇಳಿಮುಖವಾಗಿದೆ. ಮಂಜಿನ ನಗರಿ ಮಡಿಕೇರಿಯ ವ್ಯಾಪ್ತಿಯಲ್ಲಿ ಮಾತ್ರ ಆಗಾಗ್ಗೆ ಸಣ್ಣ ಪ್ರಮಾಣದ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಇತರೆಡೆಗಳಲ್ಲಿ ಬಿಸಿಲಿನ ಕಿರಣಗಳೂ ಕಂಡುಬರುತ್ತಿವೆ. ಆದರೂ ಮುಂಗಾರಿನ ಸನ್ನಿವೇಶದ ಲಕ್ಷಣಗಳು ಮುಂದುವರಿದಿದ್ದು, ಹೆಚ್ಚಾಗಿ ಮೋಡದ ವಾತಾವರಣವಿದೆ.

ಈ ತನಕದ ಮಳೆ - ಗಾಳಿಯಿಂದಾಗಿ ಹಾನಿಗೀಡಾಗಿರುವ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸದಲ್ಲಿ ಸೆಸ್ಕ್ನ ಸಿಬ್ಬಂದಿ ಕಾರ್ಯತತ್ಪರರಾಗಿದ್ದಾರೆ. ಜಿಲ್ಲೆಯಲ್ಲಿನ ಶಾಲಾ - ಕಾಲೇಜುಗಳಿಗೆ ಬುಧವಾರದಂದೂ ರಜೆ ನೀಡಲಾಗಿತ್ತು. ಈಗಿನ ಪುಷ್ಯ ಮಳೆ ಇನ್ನೂ ಎರಡು ದಿನಗಳ ಕಾಲ ಇದ್ದು, ನಂತರ ಆಶ್ಲೇಷ ಮಳೆ ಆರಂಭಗೊಳ್ಳಲಿದೆ.

ಸುAಟಿಕೊಪ್ಪ : ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ಜಗದೀಶ್ ಎಂಬವರ ಮನೆಯ ಗೋಡೆಯು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ, ಗ್ರಾಮ ಪಂಚಾಯಿತಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸುಂಟಿಕೊಪ್ಪದಿAದ ಮಾದಾಪುರ - ಸೋಮವಾರ ಪೇಟೆಗೆ ಹಾದು ಹೋಗಿರುವ ೬೬ ವಿದ್ಯುತ್ ಮುಖ್ಯವಾಹಕ ಟವರ್ ಮೇಲೆ ಮರ ಬಿದ್ದ ಪರಿಣಾಮ ಟವರ್ ಸಂಪೂರ್ಣ ಹಾನಿಗೀ ಡಾಗಿದ್ದು, ಸೋಮವಾರ ಪೇಟೆ ಮತ್ತು ಮಾದಾಪುರ ಭಾಗಗಳಿಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಕೆಪಿಟಿಸಿಎಲ್ ಸಹಾಯಕ ಅಭಿಯಂತರ ರಮೇಶ್, ಸೆಸ್ಕ್ ಕಿರಿಯ ಅಭಿಯಂತರ ಲವಕುಮಾರ್ ಮತ್ತು ಸಿಬ್ಬಂದಿಗಳೊAದಿಗೆ ತೆರಳಿ ಪರಿಶೀಲಿಸಿ ಹಾನಿಗೀಡಾದ ಟವರ್ ದುರಸ್ತಿಗೆ ಮುಂದಾಗಿದ್ದಾರೆ.

ಈ ಭಾಗದಲ್ಲಿ ನಿರಂತರವಾಗಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾದ ಪರಿಣಾಮ ಗ್ರಾಮೀಣ ಭಾಗದ ಜನತೆ ಕಳೆದ ೫ ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದ್ದು ಈ ಭಾಗದ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ. ಶನಿವಾರಸಂತೆ: ಹೋಬಳಿಯಾದ್ಯಂತ ಬಿರುಗಾಳಿ-ಮಳೆ ಮುಂದುವರೆದಿದ್ದು ಅಲ್ಲಲ್ಲಿ ಮನೆಗಳು ಕುಸಿಯುತ್ತಿದ್ದು; ಮರಗಳು ಧರೆಗುರುಳುತ್ತಿವೆ. ಸಮೀಪದ ಮಾದೇಗೋಡು ಗ್ರಾಮದ ನಿವಾಸಿ ವಿಶೇಷ ಚೇತನರಾದ ಎಂ.ಎನ್.ದಿವಾಕರ್ ಅವರ ವಾಸದ ಮನೆಯ ಒಂದು ಭಾಗ ಬುಧವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಸಂಪೂರ್ಣ ಮನೆ ಬಿರುಕು ಬಿಟ್ಟಿರುತ್ತದೆ. ಮಳೆ-ಗಾಳಿ ಮುಂದುವರೆದಲ್ಲಿ ಮನೆ ನೆಲಸಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಘಟನೆಯ ಸ್ಥಳಕ್ಕೆ ನಿಡ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾನಸ, ಗ್ರಾಮ ಲೆಕ್ಕಾಧಿಕಾರಿ ರಜಾಕ್ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ದಿವಾಕರ್, ಪತ್ನಿ ಹಾಗೂ ಪುತ್ರರೊಂದಿಗೆ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದು; ಇದೀಗ ಆ ಸಂಸಾರವನ್ನು ಮನೆಯ ಹಿಂಭಾಗದ ಕೊಠಡಿಗೆ ಸ್ಥಳಾಂತರಿಸಲಾಗಿದೆ.ಸುAಟಿಕೊಪ್ಪ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಾಷ್ಟಿçÃಯ ಹೆದ್ದಾರಿಯಿಂದ ನಾಕೂರು ಶಿರಂಗಾಲ ಗ್ರಾಮಕ್ಕೆ ತೆರಳುವ ಎಮ್ಮೆಗುಂಡಿ ಸಮೀಪ ಬೆಳಗ್ಗಿನ ಸಮಯದಲ್ಲಿ ಗಾಳಿಮಳೆಗೆ ಭಾರೀ ಗಾತ್ರದ ಅತ್ತಿ ಮರವೊಂದು ಬಿದ್ದ ಪರಿಣಾಮ ಮೊಳೂರು, ನಾಕೂರು, ಅಂದಗೋವೆ, ಮಂಜಿಕೆರೆ, ನೆಟ್ಲಿಬಿ, ಗ್ರಾಮಗಳಿಂದ ಸುಂಟಿಕೊಪ್ಪ ಪಟ್ಟಣಕ್ಕೆ ಆಗಮಿಸುವ ಪ್ರಯಾಣಿಕರು ಸುಮಾರು ೨ ಗಂಟೆಗಳ ಕಾಲ ಪರದಾಡುವಂತಾಯಿತು. ನಂತರ ತೋಟ ಕಾರ್ಮಿಕರು ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಭಾಗದಲ್ಲಿ ಪ್ರತಿ ವರ್ಷ ತೋಟದ ಮಾಲೀಕರಿಗೆ ಮಳೆಗಾಲಕ್ಕೆ ಮೊದಲು ಮನೆ ಸಮೀಪವಿರುವ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿzರೂ ನಿರ್ಲಕ್ಷö್ಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಮನೆ ಸಮೀಪವಿರುವ ಬೃಹತ್ ಮರಗಳು ಗಾಳಿಮಳೆಗೆ ಮನೆಕಡೆಗೆ ವಾಲುತ್ತಿದ್ದು ದಿನ ನಿತ್ಯ ಜೀವ ಭಯದಿಂದ ದಿನ ದೂಡುವಂತಾಗಿದೆ. ಒಂದು ವೇಳೆ ಮರಗಳು ಮನೆ ಮೇಲೆ ಬಿದ್ದರೆ ಪ್ರಾಣ ಹಾನಿ ಸಂಭವಿಸುವುದು ಖಚಿತ. ಈ ಬಗ್ಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಮರವನ್ನು ತೆರವುಗೊಳಿಸಲು ತೋಟದ ಮಾಲೀಕರಿಗೆ ನೋಟೀಸ್ ಜಾರಿಮಾಡುವಂತೆ ಈ ಭಾಗದ ನಿವಾಸಿಗಳು ಮನವಿ ಮಾಡಿದ್ದಾರೆ. ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸುರೇಶ್ ರೈ ಅವರಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡಿದೆ.

ಸ್ಧಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಪರಿವೀಕ್ಷಣಾ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಪಂಚಾಯಿತಿ ಸದಸ್ಯರು ಹಾಜರಿದ್ದರು.

* ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಲಕ್ಷö್ಮಣ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡಿದೆ.

ಸ್ಧಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಣಾ ಅಧಿಕಾರಿ ಸಂತೋಷ್, ಗ್ರಾಮ ಅಡಳಿತ ಅಧಿಕಾರಿ ಗುರುದರ್ಶನ್, ಅಭಿವೃದ್ಧಿ ಅಧಿಕಾರಿ ಸಂತೋಷ್, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಟ್ಟಳ್ಳಿ : ಭಾರಿ ಗಾಳಿ ಮಳೆಯಿಂದಾಗಿ ಚೆಟ್ಟಳ್ಳಿ- ಮಡಿಕೇರಿಯ ಅಭ್ಯಾಲದಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸಮಸ್ಯೆ ಉಂಟಾಯಿತು.

ಮರ ಬಿದ್ದ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪರದಾಡಬೇಕಾದ ಸ್ಥಿತಿ ಸೃಷ್ಟಿಯಾಯಿತು. ಸ್ಥಳೀಯರಾದ ಕಡೇಮಡ ವಿನ್ಸಿ ಅಪ್ಪಯ್ಯ ಸೇರಿದಂತೆ ಸಾರ್ವಜನಿಕರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚೆಟ್ಟಳ್ಳಿ, ಜು. ೩೦: ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿ ಆಹಾರ ಪದಾರ್ಥವನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಲಾರಿ ಮಡಿಕೇರಿ ಮೂಲಕ ಮಂಗಳೂರಿಗೆ ಸಂಚರಿಸುತ್ತಿದ್ದುದಾಗಿ ತಿಳಿದು ಬಂದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.