ಮಡಿಕೇರಿ, ಆ. ೧: ನಕಲಿ ಔಷಧಿ ನೀಡಿ ರೂ. ೮.೭೬ ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರಿಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ರಮೇಶ್ ಗೋವಿಂದಪ್ಪ ಗೊಲ್ಲರ್, ಭರತ್ (ದುರ್ಗಪ್ಪ) ಹಾಗೂ ರವಿ ಓಣಿಕೇರಿ ಎಂಬವರು ಶಿಕ್ಷೆಗೆ ಒಳಗಾದವರು.
ಏನಿದು ವಂಚನೆ?
ಮಡಿಕೇರಿಯ ದೇಚೂರು ನಿವಾಸಿ ಸರೋಜ ಅವರ ಪತಿ ಕಾಳಪ್ಪ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ರಮೇಶ್ ಗೋವಿಂದಪ್ಪ ಗೊಲ್ಲರ್ ಎಂಬಾತ ‘ಈ ರೀತಿ ಕಾಯಿಲೆಗೆ ಆಯುರ್ವೇದ ಔಷಧಿ ಉತ್ತಮ. ತನ್ನ ತಾಯಿಗೂ ಇದೇ ಕಾಯಿಲೆ ಇತ್ತು. ಔಷಧಿ ಬಳಸಿದ ನಂತರ ಗುಣಮುಖವಾಯಿತು. ಈ ಔಷಧಿ ಕುಶಾಲನಗರದ ಆಯುರ್ವೇದ ಅಂಗಡಿಯಲ್ಲಿ ಮಾತ್ರ ದೊರೆಯುತ್ತದೆ’ ಎಂದು ನಂಬಿಸಿದ್ದಾನೆ. ಅನಂತರ ಸರೋಜ ಹಾಗೂ ಕಾಳಪ್ಪ ಅವರನ್ನು ಕುಶಾಲನಗರಕ್ಕೆ ಕರೆದೊಯ್ದು ಭರತ್ (ದುರ್ಗಪ್ಪ) ಎಂಬಾತನನ್ನು ಭೇಟಿ ಮಾಡಿಸಿ ಔಷಧಿಗೆ ರೂ. ೮.೭೬ ಲಕ್ಷ ಖರ್ಚು ಎಂದು ಹೇಳಿ ಸರೋಜ ಅವರಿಂದ ೨ ಚೆಕ್‌ಗಳ ಮೂಲಕ ಮೊತ್ತವನ್ನು ರವಿ ಓಣಿಕೇರಿ ಎಂಬ ವ್ಯಕ್ತಿಗೆ ಹಣ ವರ್ಗಾಯಿಸಿ ಕೊಂಡಿದ್ದಾರೆ.
(ಮೊದಲ ಪುಟದಿಂದ) ಅನಂತರ ಇದು ನಕಲಿ ಔಷಧಿ ಎಂದು ತಿಳಿದುಬಂದಿದ್ದು, ಈ ಕುರಿತು ತಾ. ೨೭.೧೨.೨೦೧೯ ರಂದು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಉಪನಿರೀಕ್ಷಕಿ ಎಂ.ಟಿ. ಅಂತಿಮ ಅವರು ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಮಡಿಕೇರಿಯ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಸಿ. ವೀರಭದ್ರಯ್ಯ ಅವರು ಮೂವರು ಆರೋಪಿಗಳಿಗೆ ಕಲಂ ೪೧೭ರ ಅಪರಾಧಕ್ಕಾಗಿ ೧ ವರ್ಷ ಸಜೆ, ರೂ. ೧೦ ಸಾವಿರ ದಂಡ, ಕಲಂ ೪೨೦ ಅಡಿ ೨ ವರ್ಷ ಸಜೆ, ರೂ. ೧೦ ಸಾವಿರ ದಂಡ, ಕಲಂ ೧೯ ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಷ್ಟಾಬ್ಲಿಷ್‌ಮೆಂಟ್ ಕಾಯಿದೆಯಡಿ ೨ ವರ್ಷ ಸಜೆ ಮತ್ತು ರೂ. ೧೦ ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಹಿರಿಯ ಸರ್ಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ವಾದ ಮಂಡಿಸಿದರು.