ಸೋಮವಾರಪೇಟೆ, ಆ. ೧: ಬೆಂಗಳೂರಿನ ಪ್ರಣವ್ ಫೌಂಡೇಷನ್ ವತಿಯಿಂದ ತಾಲೂಕಿನ ಶಾಂತಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ಫೌಂಡೇಷನ್‌ನ ಪದಾಧಿಕಾರಿಗಳಾದ ಪ್ರೇಮ್‌ಸಾಗರ್, ಸಜನ್ ಮಂದಣ್ಣ, ಕೆ.ಪಿ. ಆಶಿತ್, ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಶಾಲೆಯ ಮುಖ್ಯಶಿಕ್ಷಕ ಪರಮೇಶ್, ಸ್ಥಳೀಯರಾದ ಡಿ.ಎಸ್. ಲಿಂಗರಾಜು, ಕೆ.ಎಂ. ಕೃಷ್ಣಕುಮಾರ್, ಮಧುಕುಮಾರ್, ಧರ್ಮಪ್ಪ, ನಿಶಾಂತ್, ಕಿರಣ್ ಕುಮಾರ್ ಇದ್ದರು.