ಸೋಮವಾರಪೇಟೆ, ಆ. ೧: ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಮೂಲಕ ನಿಯೋಜಿಸಿರುವ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸೆಕ್ಷನ್-೫ ನೋಟಿಫಿಕೇಷನ್ ಅನ್ವಯ ಜಕ್ಕನಳ್ಳಿ ಗ್ರಾಮಕ್ಕೆ ಸಂಬAಧಿಸಿದAತೆ ಸುತ್ತೋಲೆ ಹೊರಡಿಸಿರುವುದರಿಂದ ತಾಲೂಕು ರೈತ ಹೋರಾಟ ಸಮಿತಿಯ ವತಿಯಿಂದ ಗ್ರಾಮದಲ್ಲಿ ಜಾಗೃತಿ ಸಭೆ ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಸೇರಿದಂತೆ ಪದಾಧಿಕಾರಿಗಳು ಜಕ್ಕನಳ್ಳಿ ಗ್ರಾಮಕ್ಕೆ ಸೆಕ್ಷನ್-೫ಗೆ ಸಂಬAಧಿಸಿದAತೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈಗಾಗಲೇ ಸಿ ಮತ್ತು ಡಿ ಜಾಗ, ಅರಣ್ಯ ಇಲಾಖೆಯ ಸೆಕ್ಷನ್೪, ಸೆಕ್ಷನ್ ೫ಗೆ ಸಂಬAಧಿಸಿದAತೆ ಹೋರಾಟಗಳು ನಡೆಯುತ್ತಿದ್ದು, ಈ ಬಗ್ಗೆ ಗ್ರಾಮದ ಪ್ರತಿಯೋರ್ವರೂ ಸಹ ಸಂಬAಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ತಕರಾರು ಅರ್ಜಿಗಳನ್ನು ಸಲ್ಲಿಸಬೇಕೆಂದು ಮನವಿ ಮಾಡಿದರು. ಈಗಾಗಲೇ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಾನೂನಿನ ಮೂಲಕವು ಹೋರಾಟವನ್ನು ಮುಂದುವರೆಸಿದ್ದು, ಯಾರೂ ಸಹ ಭಯಭೀತರಾಗದೆ ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಯಾವುದೇ ರೈತರಿಗೆ ತೊಂದರೆ ಯಾದರೂ ರೈತ ಹೋರಾಟ ಸಮಿತಿ ಮುಂದೆ ನಿಂತು ಹೋರಾಟ ಸಂಘಟಿ ಸಲಿದೆ ಎಂದರು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪೃಥ್ವಿ ಗೌಡಳ್ಳಿ, ಹರಗ ಆದಿತ್ಯ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.