ಸೋಮವಾರಪೇಟೆ, ಆ. ೧: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು - ಶೆಟ್ಟಳ್ಳಿ ಗ್ರಾಮದ ಪುಟ್ಟಮ್ಮ ಎಂಬವರ ವಾಸದ ಮನೆಯು ಅತೀಯಾದ ಗಾಳಿಯಿಂದ ಹಾನಿಗೀಡಾಗಿದೆ. ಮನೆಯ ಶೀಟ್‌ಗಳು, ಹೆಂಚುಗಳು ಹಾನಿಯಾಗಿದ್ದು, ಮಣ್ಣಿನ ಗೋಡೆ ಬಿರುಕು ಬಿಟ್ಟು ವಾಸಕ್ಕೆ ಅಯೋಗ್ಯವಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಂದಾಯ ಅಧಿಕಾರಿ ಪ್ರಹ್ಲಾದ್, ಗ್ರಾ.ಪಂ. ಅಧ್ಯಕ್ಷ ಯಶಾಂತ್‌ಕುಮಾರ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.