ಮಡಿಕೇರಿ, ಆ. ೨: ಗಣೇಶೋತ್ಸವ ಆಚರಣೆಗೆ ಸಂಬAಧಿಸಿದAತೆ ಸುರಕ್ಷಿತ ಗಣೇಶೋತ್ಸವ ಆZರಣೆಯ ಉದ್ದೇಶದಿಂದ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ರೂಪಿಸಿದ್ದು, ಉತ್ಸವ ಸಮಿತಿಗಳು ಅವುಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.
ಪ್ರತಿಷ್ಠಾಪನೆಗೆ ಅನುಸರಿಸಬೇಕಾದ ಕ್ರಮಗಳು
* ಗೌರಿ-ಗಣೇಶ ಸಮಿತಿಯವರು ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ, ಮೆರವಣಿಗೆ ಕಾರ್ಯಕ್ರಮಗಳಿಗೆ ಕೂಡ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು.
* ಸಂಬAಧಪಟ್ಟ ಪಾಲಿಕೆ / ನಗರಸಭೆ / ಪುರಸಭೆ, ಚೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬAಧಪಟ್ಟ ಇಲಾಖೆಗಳಿಂದ ಗೌರಿ ಗಣೇಶ ಪ್ರತಿಷ್ಠಾಪನೆ ಸ್ಥಳ, ಬ್ಯಾನರ್, ಬಂಟಿAಗ್ಸ್ ಅಳವಡಿಕೆಯ ಬಗ್ಗೆ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು.
* ಗೌರಿ ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಠಾಣೆಗೆ ಮಾಹಿತಿ ನೀಡಬೇಕು.
* ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ/ವಿಸರ್ಜನೆ ಹಾಗೂ ಕಾರ್ಯಕ್ರಮಗಳ ವೇಳೆ ಸಮಿತಿಯ ಸದಸ್ಯರು ಹಾಗೂ ಸ್ವಯಂ ಸೇವಕರನ್ನು ನೇಮಿಸಿಕೊಂಡು ಅವರನ್ನು ಗುರುತಿಸುವ ಸಲುವಾಗಿ ಸಮವಸ್ತ್ರ ಹಾಗೂ ಬ್ಯಾಡ್ಜ್ ವ್ಯವಸ್ಥೆ ಮಾಡಿಕೊಳ್ಳಬೇಕು.
* ಸ್ವಯಂ ಸೇವಕರ / ಸಮಿತಿ ಸದಸ್ಯರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯುಳ್ಳ ಪಟ್ಟಿಯನ್ನು ಠಾಣೆಗೆ ನೀಡಬೇಕು.
* ಭದ್ರತೆಯ ದೃಷ್ಟಿಯಿಂದ ಪೆಂಡಾಲುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಸೆರೆ ಹಿಡಿಯಲು ಸಿ.ಸಿ.ಟಿ.ವಿಯನ್ನು ಅಳವಡಿಸಿಕೊಳ್ಳಬೇಕು.
* ಗೌರಿ ಗಣೇಶ ವಿಗ್ರಹ, ಶಾಮಿಯಾನ/ ಪೆಂಡಾಲುಗಳನ್ನು ದಿನದ ೨೪ ಗಂಟೆಗಳ ಕಾಲ ಕಾವಲು ಸಮಿತಿ ಸದಸ್ಯರನ್ನು ನೇಮಿಸಿಕೊಂಡು ಮುಂಜಾಗ್ರತೆ ಕ್ರಮವಹಿಸಬೇಕು.
* ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಜಾಗದಲ್ಲಿ ಅಗ್ನಿ ಅವಘಡಗಳನ್ನು ತಡೆಯಲು ಮರಳು, ನೀರು ಹಾಗೂ ಅಗ್ನಿಶಾಮಕ ಸಲಕರಣೆಗಳನ್ನು ಸಂಗ್ರಹಿಸಿಡಬೇಕು.
* ಧ್ವನಿವರ್ಧಕ ಬಳಕೆಗೆ ಸಂಬAಧಪಟ್ಟವರಿAದ ಅನುಮತಿ ಪಡೆದು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಬಳಸಿ, ಧ್ವನಿವರ್ಧಕದ ಧ್ವನಿಮಟ್ಟವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಗೌರಿಗಣೇಶ ಪ್ರತಿಷ್ಠಾಪನೆ ವೇಳೆ ಸೂಕ್ತ ಬೆಳಕಿನ ಅವಶ್ಯಕತೆಗೆ ವಿದ್ಯುಚ್ಛಕ್ತಿ / ಜನರೇಟರ್ಗಳನ್ನು ಅಳವಡಿಸಿಕೊಳ್ಳಬೇಕು.
* ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದವರ ಜೊತೆ ಸಂಪರ್ಕ ಇಟ್ಟುಕೊಂಡು ನಗರ/ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಗೌರಿಗಣೇಶ ಮೂರ್ತಿಯ ಮಂಟಪಗಳಿಗೆ ನೀಡಲಾಗಿರುವ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತರಹದ ಶಾರ್ಟ್ ಸರ್ಕ್ಯೂಟ್ಸ್ -ಗಳು ಆಗದಂತೆ ಉತ್ತಮ ಉಪಕರಣಗಳನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
* ಗೌರಿ ಗಣೇಶ ಮೂರ್ತಿಯ ಸುರಕ್ಷತೆಯು ಸಮಿತಿಯವರ ಜವಾಬ್ದಾರಿಯಾಗಿದ್ದು, ಯಾವುದೇ ಅವಘಡಗಳು ಸಂಭವಿಸಿದರೆ ಸಮಿತಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಮೆರವಣಿಗೆ - ವಿಸರ್ಜನೆ ವೇಳೆ
ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ಹಾಗೂ ವಿಸರ್ಜನಾ ಸ್ಥಳಗಳಿಗೆ ಸೂಕ್ತ ಬೆಳಕಿನ ಅವಶ್ಯಕತೆಗೆ ವಿದ್ಯುಚ್ಛಕ್ತಿ / ಜನರೇಟರ್ಗಳನ್ನು ಅಳವಡಿಸಿಕೊಳ್ಳಬೇಕು.
ಗೌರಿ ಗಣೇಶ ವಿಸರ್ಜನೆ ವೇಳೆ ನುರಿತ ಈಜುಗಾರರನ್ನೇ ವಿಸರ್ಜನೆಗೆ ನೇಮಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಲೈಫ್ ಜಾಕೆಟ್ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
* ಗೌರಿ ಗಣೇಶ ವಿಸರ್ಜನಾ ಮೆರವಣಿಗೆಯ ಮಾರ್ಗವನ್ನು ನಿರ್ದಿಷ್ಟಪಡಿಸಿ, ಮುಂಗಡವಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಭರ್ತಿ ಮಾಡಿ ನೀಡಿದ ಮಾರ್ಗಗಳನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು.
* ಗೌರಿ ಗಣೇಶ ವಿಸರ್ಜನೆಯನ್ನು ನಿಗದಿಪಡಿಸಿದ ವೇಳೆಯೊಳಗಾಗಿ ಮಾಡಬೇಕು.
* ಪೊಲೀಸ್ ಇಲಾಖೆಯಿಂದ ನೀಡುವ ಎಲ್ಲಾ ಸಲಹೆ ಸೂಚನೆಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಅನುಸರಿಸಬಾರದ ಕ್ರಮಗಳು
* ರಸ್ತೆ, ಫುಟ್ಪಾತ್ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು.
* ಗೌರಿ ಗಣೇಶ ಪ್ರತಿಷ್ಠಾಪನೆ / ವಿಸರ್ಜನೆಯ ಬಗ್ಗೆ ಬ್ಯಾನರ್ / ಬಂಟಿಗ್ಸ್ಗಳನ್ನು ಸಾರ್ವಜನಿಕ ವಸ್ತುಗಳ/ಕಟ್ಟಡಗಳ ಮೇಲೆ (ವಿದ್ಯುತ್ ಕಂಬ, ಸೂಚನಾ ಫಲಕಗಳು ಇತ್ಯಾದಿ) ಅಳವಡಿಸಬಾರದು. ಇಂತವುಗಳ ಮೇಲೆ ಅಳವಡಿಸಿದ್ದಲ್ಲಿ ಏಚಿಡಿಟಿಚಿಣಚಿಞಚಿ ಔಠಿeಟಿ Pಟಚಿಛಿes (Pಡಿeveಟಿಣioಟಿ oಜಿ ಆisಜಿiguಡಿemeಟಿಣ) ಂಛಿಣ ೧೯೮೧ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾವುಗುದು.
* ಗೌರಿ ಗಣೇಶ ಪ್ರತಿಷ್ಠಾಪನೆ / ವಿಸರ್ಜನತೆ ಬಗ್ಗೆ ಬ್ಯಾನರ್ / ಬಂಟಿAಗ್ಗಳ ಬಗ್ಗೆ ಸಂಬAಧಪಟ್ಟ ಆರ್.ಟಿ.ಓ ಇಲಾಖೆ ಅನುಮತಿ ಪಡೆಯದೇ ಯಾವುದೇ ವಾಹನಗಳ ಮೇಲೆ ಅಳವಡಿಸಬಾರದು. ಅನುಮತಿ ಪಡೆಯದೇ ವಾಹನಗಳ ಮೇಲೆ ಅಳವಡಿಸಿದರೆ ಖಿhe ಒoಣoಡಿ ಗಿehiಛಿಟes ಂಛಿಣ ೧೯೮೮ ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ಯಾವುದೇ ಸಂಘ - ಸಂಸ್ಥೆ, ಖಾಸಗಿ ಅಥವಾ ವೈಯಕ್ತಿಕವಾಗಿ ಗಣಪತಿ ಪ್ರತಿಷ್ಠಾಪನೆ ಸಂಬAಧ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲು ಮಾಡಬಾರದು.
* ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿ.ಜೆ. ಸೌಂಡ್ ಸಿಸ್ಟಮ್ ಅನ್ನು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಬಳಸಬಾರದು.
* ಗೌರಿ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸಿಡಿಮದ್ದು, ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಅನ್ಯ ಧರ್ಮೀಯವರಿಗೆ / ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿ ಹಾಗೂ ಚರ್ಚ್, ಮಸೀದಿ, ದೇವಸ್ಥಾನಗಳ ಮುಂದೆ ಮತ್ತು ಜನಸಂದಣಿ ಪ್ರದೇಶಗಳ ೫೦ ಮೀಟರ್ ಸುತ್ತಮತ್ತಲಿನ ಪ್ರದೇಶದಲ್ಲಿ ಸಿಡಿಸಬಾರದು.
* ಗೌರಿ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅನ್ಯ ಧರ್ಮದವರಿಗೆ ಕಿರುಕುಳ/ತೊಂದರೆ ಆಗುವ ರೀತಿ ಯಾವುದೇ ಕಾರ್ಯಕ್ರಮ/ಭಾಷಣ/ಧ್ವನಿವರ್ಧಕ ಬಳಕೆಯನ್ನು ಮಾಡುವಂತಿಲ್ಲ.
* ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ವೇಳೆ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದAತೆ ಸಮಿತಿಯವರು ಎಚ್ಚರ ವಹಿಸಬೇಕು.
* ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆಯಿAದ ಬೆಳಿಗ್ಗೆ ೬ ಗಂಟೆಯವರೆಗೆ ಯಾವುದೇ ರೀತಿ ಧ್ವನಿವರ್ಧಕ ಬಳಕೆ ಮಾಡಬಾರದು.
* ಗೌರಿ ಗಣೇಶ ವಿಸರ್ಜನೆಯ ಸಮಯದಲ್ಲಿ ಈಜು ಬಾರದವರನ್ನು ಮತ್ತು ಮಕ್ಕಳನ್ನು ನೀರಿಗೆ ಇಳಿಸಬಾರದು.
* ಅನಧಿಕೃತವಾಗಿ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಕಂಬಗಳಿAದ ಪಡೆಯಬಾರದು.