ಮಡಿಕೇರಿ, ಆ. ೨ : ಕೊಡಗಿನ ಪರಿಸರ, ಸಂಸ್ಕೃತಿಗಳ ಸಂರಕ್ಷಣೆಗೆ ಪೂರಕವಾದ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಮೂಲಕ ಸಾಧ್ಯವಾಗುವ ಎಲ್ಲ ಸಹಕಾರಗಳನ್ನು ನೀಡಲಾಗುತ್ತದೆ. ಕೇವಲ ಅಭಿವೃದ್ಧಿಗೋಸ್ಕರ ಅಭಿವೃದ್ಧಿ ಎನ್ನುವುದಕ್ಕೆ ತನ್ನ ವಿರೋಧವಿದೆ. ಕೊಡಗು ಕೊಡಗಾಗಿಯೇ ಉಳಿಯಬೇಕೆನ್ನುವುದು ತನ್ನ ಆಶಯವಾಗಿದ್ದು, ಇದರಂತೆ ಕೇಂದ್ರದ ಅನುದಾನದೊಂದಿಗೆ ಜಿಲ್ಲೆಯ ಪ್ರಗತಿಗೆ ಬದ್ಧನಿರುವುದಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ರೆಡ್ ಬ್ರಿಕ್ಸ್ನ ಸತ್ಕಾರ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳೊAದಿಗೆ ಆಯೋಜಿತವಾಗಿದ್ದ `ಕೊಡಗು ವಿಷನ್' ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಕೊಡಗಿನ ವಿಶಿಷ್ಟ ಆತಿಥ್ಯ ಸಂಸ್ಕೃತಿಗಳನ್ನು ತಿಳಿಯಲು ಅವಕಾಶ ಒದಗಿಸುವ `ಹೋಂ ಸ್ಟೇ'ಗಳು ಸ್ಥಳೀಯ ಆರ್ಥಿಕತೆಗೂ ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ `ಐನ್ ಮನೆ' ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ಪ್ರಯತ್ನಗಳ ಮೂಲಕ ಕೊಡಗನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನ ಕಾಳಜಿಯನ್ನು ಪ್ರತಿಯೊಬ್ಬರು ವಹಿಸಬೇಕಾಗುತ್ತದೆ ಎಂದು ಸಂಸದ ಯದುವೀರ್ ನುಡಿದರು.

ಸರ್ಫೆಸಿ ಕಾಯ್ದೆ ಸಂಕಷ್ಟ

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮತ್ತು ನಿರ್ದೇಶಕ ಕೆ.ಕೆ. ವಿಶ್ವನಾಥ್ ಮನವಿ ಸಲ್ಲಿಸಿ ಮಾತನಾಡಿ, ಕಾಫಿ ಬೆಳೆಯನ್ನು `ಕೃಷಿ'ಯ ಬದಲಾಗಿ ವಾಣಿಜ್ಯ ಬೆಳೆಯಾಗಿ ಪರಿಗಣಿಸಲಾಗಿದೆ. ಇದರಿಂದ ಸರ್ಫೆಸಿ ಕಾಯ್ದೆ ಕಾಫಿ ಬೆಳೆಗಾರರಿಗೂ ಅನ್ವಯವಾಗುವ ಮೂಲಕ ಸಮಸ್ಯೆಗಳು ಸೃಷ್ಟಿಯಾಗಿವೆ. ಬ್ಯಾಂಕ್‌ಗಳಲ್ಲಿ ಇರುವ ಸಾಲದ ಹಿನ್ನೆಲೆ ಬೆಳೆಗಾರರು ತೋಟಗಳನ್ನೇ ಕಳೆದುಕೊಳ್ಳುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಕಾಫಿಗೆ ಇರುವ ವಾಣಿಜ್ಯಕ ಹಣೆಪಟ್ಟಿಯಿಂದಾಗಿ ಕಾಫಿ ಬೆಳೆಗಾರರಿಗೆ ಕೃಷಿಕರ ವಿಮಾ ಸೌಲಭ್ಯವೂ ಇಲ್ಲವೆಂದು ಬೆಳೆಗಾರರ ಸಮಸ್ಯೆಗಳನ್ನು ತೆರೆದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕಾಫಿಯನ್ನು ವಾಣಿಜ್ಯಕ ಕೃಷಿಯಿಂದ ಹೊರತರುವುದು ಕರ್ನಾಟಕ ರಾಜ್ಯ ಸರ್ಕಾರದಿಂದ ನಡೆಯಬೇಕಾಗಿರುವ ಕೆಲಸ. ಹೀಗಿದ್ದೂ ತಾವು ಲೀಡ್ ಬ್ಯಾಂಕ್ ಸಭೆಗಳಲ್ಲಿ ಸರ್ಫೆಸಿ ಕಾಯ್ದೆಯನ್ನು ಬೆಳೆಗಾರರಿಗೆ ಸಂಕಷ್ಟ ಉಂಟುಮಾಡುವ ರೀತಿಯಲ್ಲಿ ದುರ್ಬಳಕೆ ಮಾಡಕೂಡದೆಂದು ಸೂಚಿಸಿದ್ದಾಗಿ ತಿಳಿಸಿದರು. ಕಾಫಿ ಬೆಳೆಗೆ ವಿಮಾ ಸೌಲಭ್ಯದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಂಸದರು ಭರವಸೆ ನೀಡಿದರು.

ಭೂಕುಸಿತದಿಂದ ಜಿಲ್ಲೆಯಲ್ಲಿ ಬೆಳೆಗಾರರು ನಷ್ಟಕ್ಕೆ ಒಳಗಾಗುತ್ತಿದ್ದು, ಭೂ ಕುಸಿತಕ್ಕೂ ವಿಮೆ ಸಿಗುವಂತಾಗಬೇಕು ಎಂದು ನಂದಾ ಬೆಳ್ಯಪ್ಪ ಸಂಸದರ ಗಮನ ಸೆಳೆದರು.

ರೈಲ್ವೆಗೆ ರಾಜ್ಯದ ಭೂ ಸ್ವಾಧೀನ ತೊಡಕು

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯ ಬೆಳೆಗಾರರು ಸೇರಿದಂತೆ ಎಲ್ಲರಿಗೂ ಅನುಕೂಲ ಕಲ್ಪಿಸುವ ರೈಲ್ವೆ ಯೋಜನೆ ಇನ್ನೂ ಜಾರಿಯಾಗದಿರುವುದು ವಿಷಾಧನೀಯ ಎಂದರಲ್ಲದೇ ಕಾರ್ಮಿಕರು ಹೆಚ್ಚಾಗಿರುವ ಕೊಡಗು ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಇಲ್ಲದಿರುವ ವಿಚಾರಗಳನ್ನು ಸಂಸದರ ಗಮನಕ್ಕೆ ತಂದರು.

ಕುಶಾಲನಗರ ಸಮೀಪ ವಿಮಾನ ನಿಲ್ದಾಣ ಸ್ಥಾಪನೆ, ಜಿಲ್ಲೆಯಲ್ಲಿ Iಖಿಃಖಿ ಸಂಸ್ಥೆಗಳನ್ನು ಸ್ಥಾಪಿಸುವಂತಾಗಬೇಕು ಎಂದು ಸಂಸದರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ್ ಅವರು, ಜಿಲ್ಲೆಗೆ ರೈಲ್ವೆ ಸಂಪರ್ಕ ಒದಗಿಸುವ ಮಾರ್ಗಗಳ ಸರ್ವೇ ಕಾರ್ಯ ಅಂತಿಮಗೊAಡಿದ್ದು, ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಅಗತ್ಯವಾಗಿ ನಡೆಯಬೇಕಾದ `ಜಮೀನು ಸ್ವಾಧೀನ' ಪ್ರಕ್ರಿಯೆ ನಡೆಯಬೇಕು. ಈ ಕಾರ್ಯ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿರುವುದೇ ಶ್ರೀರಂಗಪಟ್ಟಣ ಕುಶಾಲನಗರ ರೈಲ್ವೇ ಯೋಜನೆ ನಿಗಧಿತ ಸಮಯದಲ್ಲಿ ಕಾರ್ಯಗತವಾಗದಿರುವುದಕ್ಕೆ ಕಾರಣವಾಗುತ್ತಿದೆ. ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಡೆಸಿಕೊಟ್ಟಲ್ಲಿ ರೈಲ್ವೆ ಸಂಪರ್ಕಕ್ಕೆ ಕೇಂದ್ರ ಅಗತ್ಯ ಕ್ರಮ ವಹಿಸಲಿದೆ. ಇದೇ ರೀತಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೋಸ್ಕರ ಕೇಂದ್ರದ ಸಿವಿಲ್ ಏವಿಯೇಷನ್ ಸಚಿವರೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸಲಾಗುತ್ತದೆ ಎಂದರು.

ಕುಶಾಲನಗರ ಸಮೀಪ ವಿಮಾನ ನಿಲ್ದಾಣಕ್ಕೆ ಎರಡು ಜಾಗಗಳನ್ನು ಗುರುತಿಸಿದ್ದು, ಯಾವ ಜಾಗ ಸೂಕ್ತ ಎಂದು ನಿರ್ಧರಿಸಿ ಉಡಾನ್ ಯೋಜನೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಸಚಿವರ ಜೊತೆ ಮಾತನಾಡುವೆ ಎಂದರು.

ಜಿಲ್ಲೆಗೆ ದೊಡ್ಡ ಕೈಗಾರಿಕೆಗಳು ಬೇಡ ಇಲ್ಲಿಯ ಅಭಿವೃದ್ಧಿಗೆ ಇಲ್ಲಿನ ಪರಿಸರ ಮತ್ತು ಪ್ರಕೃತಿಯೇ ದೊಡ್ಡ ಕೊಡುಗೆಯಾಗಿದೆ ಎಂದ ಸಂಸದ ಯದುವೀರ್, ಕೇವಲ ಅಭಿವೃದ್ಧಿಗಾಗಿ ಅಭಿವೃದ್ಧಿ ಬೇಡ ಅಗತ್ಯಕ್ಕಾಗಿ ಮಾತ್ರ ಅಭಿವೃದ್ಧಿ ಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸಂಸ್ಕೃತಿಯ ಮೂಲವಾಗಿರುವ ಐನ್‌ಮನೆ, ಪ್ರಾರ್ಥನಾ ಮಂದಿರಗಳನ್ನು ಸಂರಕ್ಷಣೆ ಮಾಡಿ ಅರಣ್ಯ ರಕ್ಷಣೆಯೊಂದಿಗೆ ಕೊಡಗು ಕೊಡಗಾಗಿಯೇ ಉಳಿಯಲಿ ಎಂದು ಅವರು ಆಶಿಸಿದರು.

ಅರಣ್ಯ ರಕ್ಷಣೆಯೊಂದಿಗೆ ಜಿಲ್ಲೆಯಲ್ಲಿ ಕೂರ್ಗ್ ಟೆಕ್‌ಪಾರ್ಕ್, ಆಗ್ರಿ ಪಾರ್ಕ್, ಅಟಲ್ ರಿನೋವೇಷನ್ ಲ್ಯಾಬ್ ಇತ್ಯಾದಿಗಳ ಅನುಷ್ಠಾನ ಮಾಡಬಹುದು ಎಂದರು.

ಕೇಂದ್ರದಲ್ಲಿ ಕರ್ನಾಟಕದವರೇ ಆದ ಶೋಭಾ ಕರಂದ್ಲಾಜೆ ಅವರು ಕಾರ್ಮಿಕ ಸಚಿವರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಪರಿಸರದ ವಿಚಾರಗಳಿಂದ ತಡೆ

ಕೊಡಗು ರೆಸಾರ್ಟ್ಸ್ ಮತ್ತು ಹೊಟೇಲ್ ಅಸೋಸಿಯೇಷನ್ ಖಚಾಂಚಿ ಸಾಗರ್ ಮಾತನಾಡಿ, ಮಡಿಕೇರಿಯಿದ ಕಣ್ಣೂರು ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಮತ್ತು ಹುಣಸೂರು, ವೀರಾಜಪೇಟೆ ಮಾರ್ಗವಾಗಿ ಕಣ್ಣೂರನ್ನು ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ ನಿರ್ಮಾಣದ ಅಗತ್ಯತೆಯನ್ನು ಸಂಸದರಿಗೆ ತಿಳಿಸಿದರು. ಈ ಸಂದರ್ಭ ಸಂಸದರು, ಜಿಲ್ಲೆಯಲ್ಲಿ ಇಂತಹ ರಸ್ತೆ ಯೋಜನೆಗಳಿಗೆ ಪರಿಸರ ಸಂರಕ್ಷಣೆ ಸಂಬAಧಿತ ಪ್ರಶ್ನೆಗಳು ಪ್ರಮುಖವಾಗಿ ಅಡ್ಡಿಯನ್ನು ಉಂಟುವಾಡುತ್ತಿವೆ. ಯೋಜನೆಯ ಜಾರಿಗೆ ಅಗತ್ಯವಾದ ಜಮೀನು ಸ್ವಾಧೀನ ಪ್ರಕ್ರಿಯೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದಾಗಿರುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದಲ್ಲಿ ರಾಷ್ಟಿçÃಯ ಹೆದ್ದಾರಿ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಸಿದ್ಧವಿದೆಯೆಂದು ಸ್ಪಷ್ಟಪಡಿಸಿದರು.

ಹುಣಸೂರಿನಿಂದ ಆನೆಚೌಕೂರುವರೆಗೆ ಅವೈಜ್ಞಾನಿಕವಾಗಿ ನೂರಾರು ರಸ್ತೆ ಉಬ್ಬುಗಳಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಸಾಗರ್ ಒತ್ತಾಯಿಸಿದಾಗ ಉತ್ತರಿಸಿದ ಸಂಸದರು, ಇವು ಆಯ ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂದರು.

ಆನ್‌ಲೈನ್ ಔಷಧಿ ಖರೀದಿ ಕ್ರಮ ನಿಲ್ಲಿಸಿ

ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಅಧಕ್ಷರಾದ ಅಂಬೆಕಲ್ಲು ಜೀವನ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಂದರ್ಭ ಕೇಂದ್ರ ಸರ್ಕಾರ ಆನ್ ಲೈನ್ ಮೂಲಕ ಔಷಧಿ ಖರೀದಿಗೆ ಅವಕಾಶ ಮಾಡಿಕೊಟ್ಟಿತ್ತು. ಅದೇ ಆದೇಶವನ್ನು ಆಧರಿಸಿ ಇಂದಿಗೂ ಆನ್ ಲೈನ್ ಔಷಧಿ ವ್ಯಾಪಾರ ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು, ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿಗಳ ಮಾರಾಟವು ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಔಷಧಿ ವ್ಯಾಪಾರಿಗಳ ಮೂಲಕ ಔಷಧಿ ಖರೀದಿಸಿ ಗ್ರಾಹಕರಿಗೆ ವಿತರಿಸುವ ರೀತಿಯಲ್ಲಿ ಇರಬೇಕೇ ವಿನಃ ಆನ್ ಲೈನ್ ಔಷಧಿ ಮಾರಾಟ ಸೂಕ್ತವಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸಕಾ೯ರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿಗಳ ಮಾರಾಟ ನಡೆಯುತ್ತಿದ್ದರೆ ಆ ಬಗ್ಗೆ ನಿಖರ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೊಡಗನ್ನು ಹೊರಗಿಗೂ ಪರಿಚಯಿಸಿ

ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಪ್ರವಾಸಿ ಕೇಂದ್ರವಾದ ಕೊಡಗನ್ನು ದೇಶದ ಇತರೆಡೆಗಳಲ್ಲಿಯೂ ಪ್ರವಾಸಿ ನೆಲೆಯಲ್ಲಿ ಪರಿಚಯಿಸುವ ಕಾರ್ಯ ಮಾಡುವಂತೆ ಮನವಿ ಮಾಡಿದರು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದೆಡೆಗಳಿಂದ ಕೊಡಗು ಜಿಲ್ಲೆಗೆ ಕಾರ್ಮಿಕರು ಬರುತ್ತಿದ್ದಾರೆ. ಹೀಗೆ ಮನಬಂದAತೆ ಬರುವ ಕಾರ್ಮಿಕರನ್ನು ಆಯಾ ರಾಜ್ಯಗಳಲ್ಲೆ ನೋಂದಾಯಿಸಿಕೊAಡು ಕಳುಹಿಸುವ ವ್ಯವಸ್ಥೆ ಮಾಡಿದರೆ ಒಳಿತೆಂದು ಸಲಹೆ ಮಾಡಿದರು.

ಇತ್ತೀಚೆಗೆ ಹಾಡಿ ವಿಭಾಗಗಳಲ್ಲಿ ಹೋಂಸ್ಟೇ ಮಾಡುವವರಿಗೆ ೫ ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ್ದು, ಅದನ್ನು ಹೋಂಸ್ಟೇ ನಡೆಸುವ ಮಹಿಳೆಯರಿಗೂ ನೀಡುವಂತಾಗಬೇಕು ಎಂದು ಸಲಹೆ ಇತ್ತರು.

ಹೊರ ಕಾರ್ಮಿಕರ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿರುವುದಾಗಿ ಸಂಸದರು ಉತ್ತರಿಸಿದರು.

ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ನಿಸರ್ಗ ವಿಕೋಪ ಸಂದರ್ಭ ಮಡಿಕೇರಿಯಲ್ಲಿರುವ ರೆಡ್‌ಕ್ರಾಸ್ ಭವನ ಕಾಳಜಿ ಕೇಂದ್ರವಾಗಿ ಪರಿವರ್ತಿತವಾಗಿ ಸಂತ್ರಸ್ಥರಿಗೆ ನೆರವಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿರ್ಮಾಣಕ್ಕೆ ನೆರವಾಗಿ ಎಂದು ಕೋರಿದರು. ಈ ನಿಟ್ಟಿನಲ್ಲಿ ಸ್ಪಂದಿಸುವುದಾಗಿ ಸಂಸದರು ಹೇಳಿದರು.

ಅಖಿಲ ಭಾರತ ಕಾಫಿ ಕ್ಯೂರ‍್ಸ್ ಅಸೋಸಿಯೇಷನ್ ಪರವಾಗಿ ಮಾತನಾಡಿದ ಉದ್ಯಮಿ ಎ.ಎನ್. ಪ್ರವೀಣ್, ಕೇಂದ್ರ ಸರಕಾರದಿಂದ ಕಾಫಿ ಕ್ಯೂರಿಂಗ್ ಮೇಲೆ ಶೇ. ೧೮ ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಅದನ್ನು ರದ್ದುಪಡಿಸಬೇಕು ಎಂದರು.

ಕೂಡ್ಲೂರು ಕೈಗಾರಿಕಾ ಉದ್ಯಮಿಗಳ ಸಂಘದ ಪರವಾಗಿ ಮಾತನಾಡಿದ ಭಾವನಾ ಪ್ರವೀಣ್ ಕೂಡ್ಲೂರು ಪ್ರದೇಶದಲ್ಲಿ ೨೫೦ ಎಕರೆ ಜಾಗದಲ್ಲಿ ಸುಮಾರು ೭೦ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಅನುಕೂಲಕ್ಕಾಗಿ ಬಸ್‌ಶೆಲ್ಟರ್ ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದರಲ್ಲದೇ ಸಂಘದ ಕಟ್ಟಡಕ್ಕಾಗಿ ೨೫ ಲಕ್ಷ ರೂಪಾಯಿ ಅನುದಾನ ಒದಗಿಸುವಂತೆ ವಿನಂತಿಸಿದರು.

ಕಾಫಿ ರಫ್ತುದಾರರ ಪರವಾಗಿ ಮಾತನಾಡಿದ ಆಲೆಮಾಡ ಹರೀಶ್ ಈ ಹಿಂದೆ ರಫ್ತನ್ನು ಉತ್ತೇಜಿಸಲು ಸಾಲದ ಮೇಲೆ ಶೇಕಡ ೩ರ ರಿಯಾಯಿತಿಯನ್ನು ಕೇಂದ್ರ ಸರಕಾರ ನೀಡುತ್ತಿದ್ದು, ಅದನ್ನು ಮುಂದುವರಿಸುವAತಾಗಬೇಕೆAದರು.

ಕಾಫಿಯ ಆಂತರಿಕ ಬಳಕೆಗೆ ಒತ್ತು ನೀಡಿ

ಸಂವಾದ ಕಾರ್ಯಕ್ರಮ ನಿರ್ವಹಿಸಿದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಸಲಹೆ ನೀಡಿ ಕೊಡಗಿನಲ್ಲಿ ಬೆಳೆಯುವ ಕಾಫಿಯ ಆಂತರಿಕ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಪೂರಕವಾಗಿ ಭಾರತೀಯ ಸೈನ್ಯದಲ್ಲಿ ಕಾಫಿ ಬಳಕೆಗೆ ಅವಕಾಶ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಸಂಸದರು ಕಾಫಿ ಬಳಕೆ ಉತ್ತೇಜಿಸುವುದರ ಜೊತೆಯಲ್ಲಿ ಕಾಫಿಯನ್ನು ಬಳಸಿ ತಯಾರಿಸುವ ಸಾಕಷ್ಟು ಉತ್ಪನ್ನಗಳನ್ನು ಎಲ್ಲೆಡೆ ಪರಿಚಯಿಸುವಂತಾಗಬೇಕೆAದರು. ಕೊಡಗಿನಲ್ಲಿ ಕಾಫಿ ಕೃಷಿಯೊಂದಿಗೆ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುವ ಉತ್ಸುಕತೆ ಇದ್ದರೂ ಅವುಗಳನ್ನು ಶೇಖರಿಸಿಡಲು ಕೋಲ್ಡ್ ಸ್ಟೋರೇಜ್‌ಗಳ ಅಗತ್ಯತೆಗಳಿದೆ ಎಂದು ಚಿದ್ವಿಲಾಸ್ ಸಂಸದರ ಗಮನಕ್ಕೆ ತಂದರು. ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಜಾಗ ಲಭ್ಯವಿದ್ದಲ್ಲಿ ಅದನ್ನು ಒದಗಿಸುವುದಾಗಿ ಯದುವೀರ್ ಸಭೆಗೆ ತಿಳಿಸಿದರು.

ಕೊಡಗಿನಲ್ಲಿ ಜಲಜೀವನ್ ಯೋಜನೆ ವಿಫಲವಾಗಿದೆ ಎಂದು ಈ ಬಗ್ಗೆ ವಿವರಣೆ ನೀಡಿದ ಚಿದ್ವಿಲಾಸ್, ಸಂಸದರು ಕೂಲಂಕಶ ತನಿಖೆ ನಡೆಸಬೇಕೆಂದರು. ಈ ವಿಷಯದ ಕುರಿತು ಹಲವಷ್ಟು ದೂರುಗಳು ಬಂದಿದ್ದು, ಸಂಬAಧಿಸಿದವರೊAದಿಗೆ ಮಾಹಿತಿ ಪಡೆಯುವುದಾಗಿ ಯದುವೀರ್ ತಿಳಿಸಿದರು.

ಸಂಸದರ ನಿಧಿಯಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯ ಒದಗಿಸುವಂತಾಗಬೇಕೆAದು ಮನವಿ ಮಾಡಿದರು. ರೈಲ್ವೇ ಟಿಕೇಟ್ ಬುಕ್ಕಿಂಗ್ ಕೇಂದ್ರವನ್ನು ಪುನರಾರಂಭಿಸುವ ಕುರಿತ ಸಲಹೆಗೆ ಸ್ಪಂದಿಸಿ ಮಾತನಾಡಿದ ಸಂಸದರು, ಶೀಘ್ರದಲ್ಲಿಯೇ ಈ ಕೇಂದ್ರ ಮತ್ತೆ ತೆರೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳದ ಲಭ್ಯತೆ ಪರಿಶೀಲಿಸಲಾಗುತ್ತಿದೆ ಎಂದು ನುಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕೊಡಗು ಪತ್ರಕರ್ತರ ಸಂಘವು ವಿಷನ್ ಕೊಡಗು ಮೂಲಕ ಕೇಂದ್ರ ಸರ್ಕಾರದ ಯಾವೆಲ್ಲಾ ಯೋಜನೆಗಳು ಕೊಡಗಿಗೆ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ವಿವಿಧ ಸಂಘಸAಸ್ಥೆಗಳು ಮತ್ತು ಸಂಸದರ ನಡುವೆ ಕೊಡಗಿನ ಪ್ರಗತಿಗಾಗಿ ಸಂವಾದದ ಮೂಲಕ ಉತ್ತಮ ಬಾಂಧವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು. ಚಿದ್ವಿಲಾಸ್ ಮತ್ತು ಸಂಧ್ಯಾ ಚಿದ್ವಿಲಾಸ್ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮತ್ತು ಸದಸ್ಯರು ಸಂಸದ ಯದುವೀರ್ ಒಡೆಯರ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ನಗರಸಭಾ ಸದಸ್ಯರಾದ ಉಮೇಶ್ ಸುಬ್ರಮಣಿ, ಕವನ್, ಸಬಿತಾ, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ.ಎಂ. ರವಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ನಾಯಕ್, ಬಿ.ಎಸ್.ಎನ್.ಎಲ್ ಅಧಿಕಾರಿ ಪ್ರದೀಪ್, ಕಾಫಿ ಮಂಡಳಿ ಅಧಿಕಾರಿ ಚಂದ್ರಶೇಖರ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಸಂತೋಷ್ ಅಣ್ವೇಕರ್, ನಿರ್ದೇಶಕ ಎಂ. ಧನಂಜಯ್ ಹಾಗೂ ಇತರರು ಪಾಲ್ಗೊಂಡಿದ್ದರು.