ಮಡಿಕೇರಿ, ಆ. ೨: ಕರ್ನಾಟಕದೊಳಗೆ ಪ್ರಾದೇಶಿಕ ಸ್ವಾಯತ್ತತೆಗಾಗಿ ಆದಿಮಸಂಜಾತ ಕೊಡವರ ಹಕ್ಕು ಸಂವಿಧಾನದ ಅಡಿಯಲ್ಲಿ ಸಮರ್ಥನೀಯವಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ, ಎಂ.ಎಲ್.ಸಿ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ೩೦ನೇ ವರ್ಷದ ಕಕ್ಕಡ ಹಬ್ಬ ಆಚರಣೆ ಉದ್ದೇಶಿಸಿ ಅವರು ಮಾತನಾಡಿದರು.

ಕೊಡವರು ಈ ಪ್ರದೇಶದ ಅತ್ಯಂತ ಪ್ರಾಚೀನ ಆದಿಮಸಂಜಾತ ಜನರು, ಏಕ-ಜನಾಂಗೀಯ ಆನಿಮಿಸ್ಟಿಕ್ ಸಮುದಾಯವಾಗಿರುವುದರಿಂದ ಸ್ವಾಯತ್ತ ಕೊಡವಲ್ಯಾಂಡ್, ಅವರ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರಕ್ಕಾಗಿ, ಸಾಂವಿಧಾನಿಕ ವಿಶೇಷ ಖಾತರಿಗಾಗಿ ಸಿ.ಎನ್.ಸಿ ಹೋರಾಟ ನಡೆಸುತ್ತಿದೆ ಎಂದರು.

ಕೊಡವ ಸಮುದಾಯವು ಮುಂಬರುವ ೨೦೨೬-೨೭ರ ರಾಷ್ಟಿçÃಯ ಜನಸಂಖ್ಯಾ ಗಣತಿಯಲ್ಲಿ ಪ್ರತ್ಯೇಕ ಸಂಹಿತೆ ಮತ್ತು ಕಾಲಂ ಅನ್ನು ಕೋರಬೇಕೆಂದು ಕೂಡ ಅವರು ಈ ಸಂದರ್ಭ ಹೇಳಿದರು.

ಕಕ್ಕಡ-೧೮ ಆಚರಣೆಯ ನೇತೃತ್ವ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ ೨೪೪ನೇ ವಿಧಿ ಮತ್ತು ೬ ಮತ್ತು ೮ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು

(ಮೊದಲ ಪುಟದಿಂದ) ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು ಹಾಗೂ ಇತರ ಹಕ್ಕುಗಳನ್ನು ಘೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು. ಕಕ್ಕಡ-೧೮ ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್‌ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕಕ್ಕಡ-೧೮ ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾಕ್ಷಿ, ಅಪ್ಪಚ್ಚಿರ ರೀನಾ, ಪುಲ್ಲೇರ ಸ್ವಾತಿ, ನಂದೇಟಿರ ಕವಿತಾ, ನಂದಿನೆರವAಡ ರೇಖಾ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೊಳಪಂಡ ಜ್ಯೋತಿ, ಪಚ್ಚಾರಂಡ ಶಾಂತಿ, ಐಲಪಂಡ ಪುಷ್ಪ, ಪಟ್ಟಮಾಡ ಲಲಿತಾ, ಮುದ್ದಿಯಡ ಲೀಲಾವತಿ, ತಂಬುಕುತ್ತಿರ ರೇಖಾ, ಬಲ್ಲಡಿಚಂಡ ಬೇಬಿ, ಕಲಿಯಂಡ ಪ್ರಕಾಶ್, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ, ಬಾಚರಣಿಯಂಡ ಚಿಪ್ಪಣ್ಣ, ಅಪ್ಪಚ್ಚೀರ ರಮ್ಮಿ, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಮಂದಪAಡ ಮನೋಜ್, ಅಜ್ಜಿಕುಟ್ಟಿರ ಲೋಕೇಶ್, ಕಾಂಡೇರ ಸುರೇಶ್, ಕಿರಿಯಮಾಡ ಶೆರಿನ್, ನಂದೇಟಿರ ರವಿ, ಚಂಬAಡ ಜನತ್, ಅಪ್ಪೆಯಂಗಡ ಮಾಲೆ, ಮಣವಟ್ಟಿರ ಚಿಣ್ಣಪ್ಪ, ಪೊರಿಮಂಡ ದಿನಮಣಿ, ಹಂಚೆಟ್ಟೀರ ಮನು, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ದೇವಯ್ಯ, ಪುಲ್ಲೇರ ಕಾಳಪ್ಪ, ಪೆಮ್ಮುಡಿಯಂಡ ವೇಣು, ನಂದಿನೆರವAಡ ಅಪ್ಪಯ್ಯ, ಚಂಗAಡ ಸೂರಜ್, ಬಡುವಂಡ ವಿಜು, ಐಲಪಂಡ ಮಿಟ್ಟು, ಚಂಡಿರ ರಾಜಾ, ಬೇಪಡಿಯಂಡ ಬಿದ್ದಪ್ಪ, ಅವರೆಮಾದಂಡ ಚಂಗಪ್ಪ, ಮುಕ್ಕಾಟಿರ ಕಿಟ್ಟು, ಚೊಳಪಂಡ ನಾಣಯ್ಯ, ಚಂಙAಡ ಚಾಮಿ, ತೊತ್ತಿಯಂಡ ಬೊಳ್ಯಪ್ಪ, ಮಂಡೀರ ನಂಜಪ್ಪ, ಬೊಳಕಾರಂಡ ತಿಮ್ಮಯ್ಯ, ಮಂದಪAಡ ಸೂರಜ್, ತಂಬುಕುತ್ತೀರ ಸೋಮಯ್ಯ, ಕೂಪದಿರ ಸಾಬು, ಪುದಿಯೊಕ್ಕಡ ಪೃಥ್ವಿ, ನಂದಿನೆರವAಡ ನಂದಾ, ನಂದಿನೆರವAಡ ರವಿ, ನಂದಿನೆರವAಡ ಟಿಪ್ಪು, ನಂದಿನೆರವAಡ ವರುಣ್, ಅಜ್ಜಿನಿಕಂಡ ಸನ್ನಿ, ಮಣವಟ್ಟೀರ ಸ್ವರೂಪ್, ಮಣವಟ್ಟಿರ ನಂದಾ, ಪಟ್ಟಮಾಡ ಪೃಥ್ವಿ, ಪಾರ್ವಂಗಡ ನವೀನ್, ಕೆಚ್ಚೆಟಿರ ಶಂಭು, ಸೋಮೆಂಡ ದಿಲೀಪ್, ಪಾಲೆಕಂಡ ಪ್ರತಾಪ್, ನಂದಿನೆರವAಡ ಶರಣ್, ಪೊನ್ನಕಚ್ಚಿರ ಧನು, ನಂದಿನೆರವAಡ ದಿನೇಶ್, ನಂದಿನೆರವAಡ ಮಧು ಪಾಲ್ಗೊಂಡಿದ್ದರು.