ಕುಶಾಲನಗರ, ಆ. ೩: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ೧೦೦ ಬೆಡ್ಗಳ ತಾಲೂಕು ಆಸ್ಪತ್ರೆ ನಿರ್ಮಾಣ ಉದ್ದೇಶ ಹಿನ್ನೆಲೆಯಲ್ಲಿ ಉಂಟಾಗಲಿರುವ ಸಾಧಕ-ಬಾಧಕಗಳ ಕುರಿತಾಗಿ ಕುಶಾಲನಗರದಲ್ಲಿ ಸಂಘ ಸಂಸ್ಥೆಗಳ ಪ್ರಮುಖರ ಸಭೆ ನಡೆಯಿತು.
ಶ್ರೀ ಮಹಾಗಣಪತಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ನೂರಕ್ಕೂ ಅಧಿಕ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದರು. ಗುಂಡೂರಾವ್ ಬಡಾವಣೆಯಲ್ಲಿ ಆಸ್ಪತ್ರೆ ನಿರ್ಮಾಣಗೊಂಡರೆ ಆ ಭಾಗದಲ್ಲಿ ಇದುವರೆಗೆ ನಡೆದುಕೊಂಡು ಬರುತ್ತಿರುವ ಜಾತ್ರೋತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳಿಗೆ ಅಡ್ಡಿ ಉಂಟಾಗಲಿದೆ ಎಂಬುದು ಒಂದು ಅಂಶವಾದರೆ, ಹೊಸ ಆಸ್ಪತ್ರೆ ಅಲ್ಲಿಯೇ ಆಗಬೇಕಿದೆ ಎಂಬ ಮತ್ತೊಂದು ಅಂಶದ ಕುರಿತು ಸಾಮಾಜಿಕ ಚರ್ಚೆ, ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ಸಮಗ್ರ ಸಾಧಕ-ಬಾಧಕಗಳ ಬಗ್ಗೆ ಅವಲೋಕನ ನಡೆಸಿತು. ಆಸ್ಪತ್ರೆ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಬದಲಿ ಜಾಗ ಗುರುತಿಸಬೇಕಿದೆ ಎಂಬುದು ಕೆಲವರ ಅಭಿಪ್ರಾಯವಾದರೆ, ಪಟ್ಟಣ ವ್ಯಾಪ್ತಿಯಲ್ಲಿ ಆಸ್ಪತ್ರೆ ನಿರ್ಮಾಣವಾದರೆ ಹೆಚ್ಚಿನ ಅನುಕೂಲ ಉಂಟಾಗಲಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಸAಸ್ಥೆಗಳ ಪ್ರಮುಖರು ತಮ್ಮ ಅಭಿಪ್ರಾಯ ಮಂಡಿಸಿದರು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ದೇವಾಲಯ ಸಮಿತಿ ನಿರ್ದೇಶಕ ಟಿ.ಆರ್. ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನಗಳ ಇತಿಹಾಸವಿರುವ ಜಾತ್ರೋತ್ಸವ ಕೆಪಿಟಿಸಿಎಲ್ ಘಟಕ ಸ್ಥಾಪನೆ ಹಿನ್ನೆಲೆ ಹಳೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸಂತೆ ಮಾರುಕಟ್ಟೆ ಹಾಗೂ ಜಾತ್ರೆ ಬೇರೆಡೆಗೆ ಸ್ಥಳಾಂತರಗೊAಡ ಬಗ್ಗೆ ವಿವರಿಸಿದರು.
ಆರೋಗ್ಯ ಬಹುಮುಖ್ಯ, ಅಂದಾಜು ೪೩ ಕೋಟಿ ರೂ ವೆಚ್ಚದ ಆಸ್ಪತ್ರೆ ಕಾಮಗಾರಿಯ ಯೋಜನೆ ಕುಶಾಲನಗರಕ್ಕೆ ಲಭಿಸಿದೆ. ಸರಕಾರದ ಯೋಜನೆಗಳನ್ನು ಸ್ವಾಗತಿಸಬೇಕಿದೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಪ್ರಕ್ರಿಯೆಗಳು ಆರಂಭಗೊAಡ ಹಿನ್ನೆಲೆ ತುರ್ತಾಗಿ ಅಭಿಪ್ರಾಯ ಸಂಗ್ರಹಿಸಿ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಬೇಕಿದೆ, ಕ್ರೀಡೆಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಂಗಣ ಉಳಿಸಿಕೊಳ್ಳುವ ಅಗತ್ಯವಿದೆ, ಆಸ್ಪತ್ರೆಗೆ ಇತರೆ ಸೂಕ್ತ ಜಾಗ ಗುರುತಿಸಬೇಕಿದೆ, ಶಾಸಕರ ನೇತೃತ್ವದಲ್ಲಿ ಸಭೆ ನಡೆದಲ್ಲಿ ಅನುಕೂಲವಾಗಲಿದೆ. ಪಾಳುಬಿದ್ದಿರುವ, ಬಳಕೆಯಾಗದ ಲೋಕೋಪಯೋಗಿ, ಅರಣ್ಯ ಇಲಾಖೆ, ನೀರಾವರಿ ನಿಗಮಕ್ಕೆ ಒಳಪಡುವ ಜಾಗಗಳನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಅಭಿಪ್ರಾಯಗಳು ವ್ಯಕ್ತಗೊಂಡವು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ, ದೇವಾಲಯ ಸಮಿತಿ ನಿರ್ದೇಶಕ ವಿ.ಪಿ. ಶಶಿಧರ್ ಮಾತನಾಡಿ, ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಂತಹ ವಿಶಾಲ ಜಾಗ ಸಾರ್ವಜನಿಕ ಬಳಕೆಗೆ ಅತ್ಯವಶ್ಯಕ. ಅಲ್ಲಿ ಆಸ್ಪತ್ರೆ ನಿರ್ಮಾಣಗೊಂಡಲ್ಲಿ ಸಭೆ, ಸಮಾರಂಭಗಳಿಗೆ ಖಂಡಿತ ಅಡ್ಡಿ ಎದುರಾಗಲಿದೆ. ತರಾತುರಿಯಲ್ಲಿ ಅಡ್ಡಾದಿಡ್ಡಿಯಾಗಿ ಆಸ್ಪತ್ರೆ ನಿರ್ಮಾಣಕ್ಕೆ ೪ ಎಕರೆ ಜಾಗ ಗುರುತಿಸಿರುವುದು ವಿಷಾದನೀಯ ಸಂಗತಿ. ಈ ವಿಷಯ ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ ಅವರು, ರಾಜಕೀಯಕ್ಕಿಂತ ಊರಿನ ನಾಗರಿಕರ ಹಿತಾಸಕ್ತಿ ಮುಖ್ಯವಾಗಿದೆ ಎಂದರು. ಕುಶಾಲನಗರದ ಇತಿಹಾಸ, ಪರಂಪರೆ ಕಣ್ಮರೆಯಾಗಬಾರದು. ಊರು ಬೆಳೆಯುತ್ತಿದೆ, ಪುರಸಭೆಯಿಂದ ನಗರಸಭೆಗೆ ಬಡ್ತಿಗೆ ಅವಕಾಶವಿದೆ. ಕ್ಷೇತ್ರದ ಅಭಿವೃದ್ಧಿಗೆ ಅಪಾರ ಅನುದಾನ, ಯೋಜನೆಗಳನ್ನು ತರುತ್ತಿರುವ ಶಾಸಕರಿಗೆ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ, ವಿರೋಧಗಳ ಬಗ್ಗೆ ಗಮನ ಸೆಳೆಯಬೇಕಿದೆ ಎಂದರು. ಕೇವಲ ಕೆಲವೇ ದಿನಗಳ ಅವಧಿಯಲ್ಲಿ ಜಾಗದ ಅಳತೆ ಗುರುತು ಆರ್ಟಿಸಿ ಮತ್ತಿತರ ದಾಖಲೆ ಆಗಿದ್ದು ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಕೇಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ನಿಯೋಗ ತೆರಳಿ ಸರಕಾರಿ ಯೋಜನೆಗಳು ಕೈತಪ್ಪದಂತೆ ನಾಗರಿಕರು ಅಹವಾಲು ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಅಗತ್ಯವಿದ್ದಲ್ಲಿ ತಾನು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಈ ಸಂದರ್ಭ ಮಾತನಾಡಿ, ಊರಿನ ಹಿತದೃಷ್ಟಿ, ಅಭಿವೃದ್ಧಿ ಮುಖ್ಯವೇ ಹೊರತು ರಾಜಕೀಯ ಮುಖ್ಯವಲ್ಲ ಎಂದರು. ಗುಂಡೂರಾವ್ ಬಡಾವಣೆಯಲ್ಲಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಸಮರ್ಪಕ ಮಾಹಿತಿ ತಮಗೆ ಸಿಕ್ಕಿಲ್ಲ ಎಂದು ತಿಳಿಸಿದ ಅವರು, ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ವೇದಿಕೆಯಲ್ಲಿದ್ದರು. ಕುಶಾಲನಗರ ವ್ಯಾಪ್ತಿಯ ನೂರಕ್ಕೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರಮುಖರು ಇದ್ದರು.