ಗೋಣಿಕೊಪ್ಪ ವರದಿ, ಆ. ೩: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ರಾಷ್ಟಿçÃಯ ಮಾವು ದಿನವನ್ನು ಆಚರಿಸಲಾಯಿತು. ಮಾವಿನ ಹಣ್ಣಿನ ವಿಶೇಷತೆಯನ್ನು ಶಾಲೆಯ ಬಾಲವಾಟಿಕ ವಿದ್ಯಾರ್ಥಿಗಳು ತುಂಬಾ ವಿಜೃಂಭಣೆಯಿAದ ಆಚರಿಸಿದರು. ವಿವಿಧ ಬಗೆಯ ಮಾವುಗಳ ಪರಿಚಯ ಹಾಗೂ ಮಹತ್ವವನ್ನು ಇಂಗ್ಲಿಷ್ನಲ್ಲಿ ಒಂದನೇ ತರಗತಿಯ ಹುವಿಷ್ಕಾ, ಕನ್ನಡದಲ್ಲಿ ಎರಡನೇ ತರಗತಿಯ ಆಪ್ತಿ, ಹಿಂದಿಯಲ್ಲಿ ಮೂರನೇ ತರಗತಿಯ ಶಕೀಬ್ ವಿವರಿಸಿದರು. ವಿವಿಧ ಬಗೆಯ ಮಾವುಗಳನ್ನು ಸವಿದು ಸಂಭ್ರಮಿಸಿದರು. ಶಾಲೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಹಾಗೂ ಪ್ರಾಂಶುಪಾಲ ಕೂತಂಡ ಪುಷ್ಪ ಸುಬ್ಬಯ್ಯ ಭಾಗವಹಿಸಿದ್ದರು.