ವೀರಾಜಪೇಟೆ, ಆ. ೩: ವೀರಾಜಪೇಟೆ ತಾಲೂಕಿನ ವಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಟಿ.ಜೆ. ಭೇಟಿ ನೀಡಿ ತರಗತಿವಾರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿದರು.
ಶಾಲಾ ಅಭಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಬುನಾದಿ ಸಾಕ್ಷರತೆ ಮತ್ತು ಸಾಂಖ್ಯ ಸಾಮರ್ಥ್ಯ, ಘಟಕ ಆಧಾರಿತ ಮೌಲ್ಯಾಂಕನ ಘಟಕ ಪರೀಕ್ಷೆ ಇವುಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಗ್ರಾಮದಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚು ಇರುವ ಕಾರಣ ಮಕ್ಕಳ ಸುರಕ್ಷತೆಗೆ ಗಮನ ಹರಿಸುವಂತೆ ತಿಳಿಸಿದರು ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಸಿ. ಗೀತಾಂಜಲಿ, ಶಿಕ್ಷಕರಾದ ಕಾವೇರಮ್ಮ, ಅತಿಥಿ ಶಿಕ್ಷಕರಾದ ಕಮಲಾಕ್ಷಿ, ಮಲ್ಲಾಜಮ್ಮ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.