ಕಡಂಗ, ಆ. ೩ : ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ವಿದ್ಯಾರ್ಥಿಗಳಿಗೆ, ಸೌಜನ್ಯ ಸೇವಾ ಶ್ರಮ ಬೆಂಗಳೂರು ಇವರ ಸಹಯೋಗದೊಂದಿಗೆ ಸ್ಥಳೀಯ ಉದ್ಯಮಿ, ಕೃಷಿಕರಾದ ಉದಿಯಂಡ ಡಿ. ಚೆಂಗಪ್ಪ ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಳೆಗಾಲಕ್ಕೆ ಉಪಯೋಗಿಸಲು ಸುಮಾರು ೮೦ ರೈನ್ ಕೋಟುಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ನರಿಯಂಡದ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್, ರಾಣಿ ಗಣಪತಿ, ನಂಬಿಯಪAಡ ವಾಣಿ, ಶಾಲಾ ಸ್ಥಳ ದಾನಿಗಳಾದ ಕಣಿಯರ ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಫಾತಿಮಾ, ಸಂಶಿಯ ಹಾಜರಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಕೆ.ಎಂ. ವಿಮಲಾ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಶಿಕ್ಷಕರಾದ ವತ್ಸಲ ಎ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.