ಮುಳ್ಳೂರು, ಆ. ೩: ಸಮೀಪದ ನಿಡ್ತ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಹಾರೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನಲ್ಲಿ ಅಭಿಯಂತರರಾಗಿರುವ ಮತ್ತು ಸಮಾಜಸೇವಕಿ ನಿತಾರ ಅರುಣ್ ಕುಮಾರ್ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಊಟದ ತಟ್ಟೆ, ಲೋಟವನ್ನು ವಿತರಿಸಿದರು.

ಸದರಿ ಗ್ರಾ.ಪಂ.ಯ ಅಧ್ಯಕ್ಷರು, ಸದಸ್ಯರು, ಪಿಡಿಓ ಸಹಿತವಾಗಿ ಶಾಲೆಗೆ ಭೇಟಿ ನೀಡಿದ ತಂಡ ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮತ್ತು ಶಾಲೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಟಿ.ಕೆ. ಅಶೋಕ್, ದಾನಿ ನಿತಾರ ಅರುಣ್‌ಕುಮಾರ್ ಅವರ ಸ್ನೇಹಿತೆ ಮತ್ತು ನಿಡ್ತ ಗ್ರಾ.ಪಂ.ಯ ಪಿಡಿಓ ಮಾನಸ ಗ್ರಾ.ಪಂ. ಸದಸ್ಯರಾದ ಕಾರ್ತಿಕ್, ರೋಹಿಣಿ ಕುಮಾರ್, ವೆಂಕಟೇಶ್, ಪುಟ್ಟಸ್ವಾಮಿ ಶಾಲಾ ಮುಖ್ಯ ಶಿಕ್ಷಕಿ ಕವಿತಾ, ಶಿಕ್ಷಕ ಪಿ.ಎನ್. ಯಶ್ವಂತ್ ಮುಂತಾದವರು ಹಾಜರಿದ್ದರು.