ವೀರಾಜಪೇಟೆ, ಆ. ೩: ಸ್ಟೀಫನ್ ಕೋಶಿ ಸ್ಮಾರಕ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ರೇಖಾ ಬೋಪಣ್ಣ ಹಾಗೂ ವಿಮಲಾ ಸುರೇಶ್ ಸಾಧನೆ ತೋರಿದ್ದಾರೆ. ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಸ್ಟೀಫನ್ ಕೋಶಿ ಸ್ಮಾರಕ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಇಂಡಿಯಾ ಕೋರ್ಟ್ ಕುಯಿನ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕಳ್ಳಿರ ರೇಖಾ ಬೋಪಣ್ಣ ಮತ್ತು ಚಾಲೆಯಂಡ ವಿಮಲಾ ಸುರೇಶ್ ೪೫+ ಮತ್ತು ೫೦+ ವಿಭಾಗದಲ್ಲಿ ಭಾಗವಹಿಸುವುದರ ಮೂಲಕ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.