ಮಡಿಕೇರಿ, ಆ. ೩: ಕಳೆದ ೨ ವರ್ಷಗಳಲ್ಲಿ ೧೨೬೬.೩೧ ಕೋಟಿ ರೂಪಾಯಿ ಅನುದಾನವನ್ನು ವೀರಾಜಪೇಟೆ ಕ್ಷೇತ್ರಕ್ಕೆ ತಂದಿರುವ ಬಗ್ಗೆ ಶಾಸಕ ಎ.ಎಸ್. ಪೊನ್ನಣ್ಣ ಸಾರ್ವಜನಿಕ ಮಾಹಿತಿ ನೀಡಿದ್ದಾರೆ. ಒಟ್ಟು ೧೩೯೫ ಮನೆಗಳೂ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿರುವ ಬಗ್ಗೆ ಅಂಕಿ ಅಂಶ ಪ್ರಕಟಿಸಿದ್ದಾರೆ.