ಮಡಿಕೇರಿ, ಆ. ೩: ಸ್ಕೌಟ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ವತಿಯಿಂದ ಬುಡಕಟ್ಟು ದಿನ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಪಾಲೆಮಾಡುವಿನಲ್ಲಿ ಸಂಸ್ಥೆ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ತಾ.೯ ರಂದು ಬುಡಕಟ್ಟು ದಿನ ಆಚರಿಸುವಂತೆ ತೀರ್ಮಾನಿಸಲಾಯಿತು. ಬುಡಕಟ್ಟು ಸಮುದಾಯದ ಸ್ಥಿತಿ ಗತಿ ಬಗ್ಗೆ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಇದೇ ಸಂದರ್ಭ ಸ್ಕೌಟ್ ಸ್ಕಾರ್ಫ್ ದಿನವನ್ನೂ ಆಚರಿಸಲಾಯಿತು. ಸಭೆಯಲ್ಲಿ ಸಂಸ್ಥೆಯ ತರಬೇತಿ ಆಯುಕ್ತ ರಂಜಿತ್, ಉಪಾಧ್ಯಕ್ಷರುಗಳಾದ ನೀಲಮ್ಮ, ಅರುಣ್ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್, ಕಾರ್ಯದರ್ಶಿ ನಳಿನಿ, ಗುಲ್ಷನ್, ಸ್ಥಳೀಯರಾದ ಹೆಚ್.ಕೆ. ಮೊಣ್ಣಪ್ಪ ಇತರರು ಪಾಲ್ಗೊಂಡಿದ್ದರು.