ಸೋಮವಾರಪೇಟೆ, ಆ. ೩: ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ೧೨ ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ಎಂ. ಪ್ರಶಾಂತ್ ಅವರು, ಸರ್ಕಾರದಿಂದ ಗ್ರಾಮ ಪಂಚಾಯಿತಿಗೆ ೧೨.೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಬೇಕೆಂಬ ಸ್ಪಷ್ಟನೆ ನೀಡಿರಲಿಲ್ಲ. ಜಲಜೀವನ್ ಮಿಷನ್ ಯೋಜನೆಯ ಕಾಂಟ್ರಿಬ್ಯೂಷನ್ ಅನುದಾನ ಇರಬರಹುದೆಂದು ಭಾವಿಸಿ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ, ಕುಡಿಯುವ ನೀರು ಮತ್ತು ವಿದ್ಯುತ್ ಸಂಬAಧಿತ ಕಾಮಗಾರಿಗಳಿಗೆ ಬಳಸಲು ತೀರ್ಮಾನಿಸಲಾಗಿತ್ತು ಎಂದರು.
ಹೀಗಾಗಿ ವಾರ್ಡ್ನ ನೀರು ಮತ್ತು ನೈರ್ಮಲ್ಯ ಖಾತೆಗೆ ಹಣವನ್ನು ಹಾಕಿ, ಅಲ್ಲಿಂದ ಎಲೆಕ್ಟಾçನಿಕ್ಸ್ ಮತ್ತು ಹಾರ್ಡ್ವೇರ್ ಅಂಗಡಿಗಳಿAದ ಖರೀದಿಸಿದ ಉಪಕರಣಗಳಿಗೆ ಹಣ ನೀಡಲಾಗಿದೆ. ಎಲ್ಲಾ ವಹಿವಾಟಿಗೂ ಸೂಕ್ತ ಬಿಲ್‌ಗಳನ್ನು ಇಡಲಾಗಿದೆ ಎಂದರು.
ಈ ಮಧ್ಯೆ ಆಡಿಟ್‌ನವರು ಪಂಚಾಯಿತಿಗೆ ಆಗಮಿಸಿದ ಸಂದರ್ಭ ಅಂದಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೈರಾಗಿದ್ದರೆ, ಲೆಕ್ಕಾಧಿಕಾರಿಗಳು ದೀರ್ಘ ರಜೆಯಿದ್ದ ಕಾರಣ ಆಡಿಟ್ ಸಮಯದಲ್ಲಿ ಬಿಲ್‌ಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಲೆಕ್ಕಾಧಿಕಾರಿ ಈವರೆಗೂ ಪಂಚಾಯಿತಿಗೆ ಬಂದಿಲ್ಲ. ಬಿಲ್‌ಗಳನ್ನು ನಿರ್ವಹಣೆ ಮಾಡುವುದು ಪಿಡಿಓ ಮತ್ತು ಲೆಕ್ಕಾಧಿಕಾರಿಯ ಕರ್ತವ್ಯ ಎಂದು ಅಭಿಪ್ರಾಯಿಸಿದರು.
ರೂ. ೧೨.೫೦ ಲಕ್ಷಣ ಅನುದಾನದಲ್ಲಿ ಉಪಕರಣಗಳನ್ನು ಖರೀದಿಸಿ ಪಂಚಾಯಿತಿಯ ಗೋದಾಮಿನಲ್ಲಿ ಇಡಲಾಗಿತ್ತು. ಈ ನಡುವೆ ಜಿಲ್ಲಾ ಪಂಚಾಯತ್‌ನಿAದ ಆದೇಶ ಬಂದಿದ್ದು, ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಎನ್‌ಆರ್‌ಇಜಿಎ ಕಟ್ಟಡ ದುರಸ್ತಿಗೆ ೪.೩೧ ಲಕ್ಷ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ೧೨.೫೦ ಲಕ್ಷ ಅನುದಾನದ ಬಗ್ಗೆ ಸಂಶಯ ಬಂದು, ಖರೀದಿಸಿದ್ದ ಉಪಕರಣಗಳನ್ನು ಶ್ರೀ ಲಕ್ಷಿö್ಮÃ ಹಾರ್ಡ್ವೇರ್ ಮತ್ತು ಶ್ರೀ ಕೃಷ್ಣ ಹಾರ್ಡ್ವೇರ್‌ಗಳಿಗೆ ವಾಪಸ್ ನೀಡಿ, ಹಣವನ್ನು ಪಂಚಾಯಿತಿ ಖಾತೆಗೆ ವಾಪಸ್ ಪಡೆಯಲಾಗಿದೆ ಎಂದು ವಿವರಣೆ ನೀಡಿದರು.
ಈಗಾಗಲೇ ೯,೪೮,೯೪೨ ರೂಪಾಯಿಗಳನ್ನು ಗ್ರಾ.ಪಂ. ಖಾತೆಗೆ ವಾಪಸ್ ಪಡೆಯಲಾಗಿದೆ. ೪,೩೧,೫೫೦ ರೂಪಾಯಿಗಳನ್ನು ತಾಲೂಕು ಪಂಚಾಯಿತಿಯ ಎನ್‌ಆರ್‌ಇಜಿಎ ಕಟ್ಟಡ ದುರಸ್ತಿಗೆ ನೀಡಲಾಗಿದೆ ಎಂದರು.
ಬಜೆಗುAಡಿಯ ಪ್ರಾರ್ಥನಾ ಮಂದಿರದ ಹಿಂಭಾಗ ಇರುವ ಊರುಡುವೆ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ಬೇಳೂರು ಬಾಣೆಗೆ ಬೇಲಿ ಅಳವಡಿಸಲು ಪಂಚಾಯಿತಿಯಿAದ ಎನ್‌ಓಸಿ ನೀಡಲು ಪಂಚಾಯಿತಿ ಮೇಲೆ ಒತ್ತಡ ಇತ್ತು. ಪ್ರಾರ್ಥನಾ ಮಂದಿರ ಹಿಂಭಾಗ ಜಾಗ ಊರುಡುವೆ ಎಂದಿದ್ದು, ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ಹೀಗಾಗಿ ಎನ್‌ಓಸಿ ನೀಡಿಲ್ಲ. ಬೇಳೂರು ಬಾಣೆಯಲ್ಲಿ ಸರ್ಕಾರಿ ಪೈಸಾರಿ ಜಾಗವೂ ಇರುವುದರಿಂದ ಬೇಲಿ ನಿರ್ಮಾಣಕ್ಕೆ ಎನ್‌ಓಸಿ ನೀಡಿರಲಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ಪಂಚಾಯಿತಿ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ. ಸುದರ್ಶನ್ ಮಾತನಾಡಿ, ಪಂಚಾಯಿತಿ ಆಡಿಟ್ ಸಂದರ್ಭ ಬಿಲ್‌ಗಳು ಸಿಕ್ಕಿಲ್ಲದಿರುವ ಬಗ್ಗೆ ವರದಿಯಾದ ಹಿನ್ನೆಲೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಸದಸ್ಯರುಗಳು ದೂರು ನೀಡಿದ್ದು, ಈಗಾಗಲೇ ತಾ.ಪಂ. ಅಧಿಕಾರಿ ತನಿಖೆ ನಡೆಸಿದ್ದಾರೆ. ಆ ವರದಿ ಇನ್ನಷ್ಟೇ ಹೊರ ಬರಬೇಕಿದೆ ಎಂದರು.
ಚುನಾವಣೆ ಹತ್ತಿರ ಬರುತ್ತಿರುವಾಗ ಆಡಳಿತ ಮಂಡಳಿಯ ಮೇಲೆ ವೃಥಾ ಆರೋಪ ಮಾಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಇದು ಸರಿಯಲ್ಲ; ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಸದಸ್ಯರು ಗಳಾದ ಯೋಗೇಶ್, ಭಾಸ್ಕರ್ ಹೇಳಿದರು. ಗೋಷ್ಠಿಯಲ್ಲಿ ಪಂಚಾ ಯಿತಿ ಅಧ್ಯಕ್ಷೆ ಪಾರ್ವತಿ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.