ಸೋಮವಾರಪೇಟೆ, ಆ. ೩: ಇಲ್ಲಿನ ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂತ ಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಅವಿನಾಶ್ ಉದ್ಘಾಟಿಸಿದರು. ಕಾಲೇಜಿನ ಅಧ್ಯಕ್ಷೆಯಾಗಿ ಎಸ್. ಹಿತೈಷಿ, ಉಪಾಧ್ಯಕ್ಷರಾಗಿ ತೀರ್ಥೇಶ್ಗೌಡ, ಶಿಸ್ತುಪಾಲಕರಾಗಿ ಕೆ. ನಿತೇಶ್, ಸಾಯಿ ಪ್ರಿಯ, ಸಾಂಸ್ಕೃತಿಕ ನಾಯಕರಾಗಿ ಡಿ.ಪಿ. ಮೋನಿಶಾ, ಟಿ.ಎಸ್. ಸೂರ್ಯ ಪ್ರಮಾಣ ವಚನ ಸ್ವೀಕರಿಸಿದರು.
ಕ್ರೀಡಾನಾಯಕರಾಗಿ ಕೆ.ಎಸ್. ತೇಜಸ್, ಎಂ.ಸಿ. ಹಂಸಿನಿ, ವಿವಿಧ ಘಟಕಗಳ ನಾಯಕರುಗಳಾಗಿ ಪಿ. ಸಾತ್ವಿಕ್, ಎಂ.ಪಿ. ಕಾರುಣ್ಯ, ಫಾತಿಮಾ ಹಮೀದ್, ಎಸ್.ಎಸ್. ಜತೀನ್, ವಯಾಲಿನ್ ಲೋಬೋ, ಜಿ.ಎನ್. ಕೌಶಿಕ್, ಸಿ.ಪಿ. ವರ್ಷಾ, ಎಂ. ಆಕಾಶ್, ಡಿ.ಪಿ. ಮೋನಿಷಾ, ಎಸ್. ಲಕಿನ್, ಎಂ. ನಿಖಿಲೇಶ್, ಎಚ್.ಎಂ. ಪೂರ್ವಿಕಾ, ಟಿ.ಎ. ಸಂಜಯ್, ಎಸ್.ಕೆ. ಚಿರಾಗ್, ಕೆ.ಆರ್. ಆದ್ಯ, ಡಿ.ಎಸ್. ದೀಪಾಲಿ, ಬಿ.ಡಿ. ಪ್ರೀತಮ್, ಪಾರ್ವತಿ, ಸಿ.ಆರ್. ಸುಪ್ರಿತಾ, ಸಿ.ಪಿ. ಶ್ರೇಯಾ, ಎಂ. ರಿತೀಶ್, ಕೆ.ಎ. ನೌಫಿಯಾ, ಎಂ.ಎ. ಆಶಿಕ್, ಜಿ.ಆರ್. ಸೋನಿಕಾ, ಎಚ್.ವಿ. ಧನ್ವಂತ್ರಿ, ಎನ್.ಜಿ. ಮೋನಿಕಾ, ಕೆ.ಯು. ಕುವಾಲ್, ಎಸ್. ಮೋನಿಷಾ, ಕೆ.ಜಿ. ದಿಶಾ, ಕೆ.ಡಿ. ಗುರುಪ್ರಸಾದ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ, ಸರ್ಕಲ್ಇನ್ಸ್ಪೆಕ್ಟರ್ ಮುದ್ದು ಮಹಾದೇವ, ಆರ್ಎಫ್ಒ ಶೈಲೇಂದ್ರ ಕುಮಾರ್, ಓಎಲ್ವಿ ಚರ್ಚ್ ಸದಸ್ಯ ವಿ.ಎ. ಲಾರೆನ್ಸ್, ಪ್ರಾಂಶುಪಾಲರಾದ ಹರೀಶ್, ಥೋಮಸ್, ಮುಖೋಪಾಧ್ಯಾಯರಾದ ಹ್ಯಾರಿಮೋರಸ್, ಕವಿತಾ ಇದ್ದರು.
ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ಆಶಾ ವಂದಿಸಿ, ವಿದ್ಯಾರ್ಥಿನಿಯರಾದ ವರ್ಷಾ, ವಯಾಲಿನ್ ಕಾರ್ಯಕ್ರಮ ನಿರೂಪಿಸಿದರು.