ಭಾರತೀಯ ಗಾಲ್ಫ್ ಪ್ರತಿಭೆ ಕೊಡಗು ಜಿಲ್ಲೆಯ ಯುವತಿ ಬಲ್ಲಚಂಡ ಐದಾ ತಿಮ್ಮಯ್ಯ ಅಮೇರಿಕಾದಲ್ಲಿ ಜರುಗಿದ ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ೩ನೇ ಸ್ಥಾನ ಗಳಿಸುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ.
ವಿಶ್ವದ ದೊಡ್ಡಮಟ್ಟದ ಕ್ರೀಡೆಯಾಗಿರುವ ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್ ಅಮೇರಿಕಾದ ಉತ್ತರ ಕರೋಲಿನಾದ ಫೈನ್‌ಹರ್ಸ್ಟ್ನಲ್ಲಿ ಜರುಗಿದ್ದು, ಈ ಕ್ರೀಡಾಕೂಟದಲ್ಲಿ ಐದಾ ತಿಮ್ಮಯ್ಯ ೩ನೇ ಸ್ಥಾನದ ಸಾಧನೆಗೈದಿದ್ದಾಳೆ.
ಒಟ್ಟು ೧೧೫ ಸ್ಪರ್ಧಿಗಳಿದ್ದ ಈ ವಿಭಾಗದಲ್ಲಿ ಐದಾ ಸಾಧನೆ ಗಮನಾರ್ಹವಾಗಿದೆ. ಪ್ರತಿಷ್ಠಿತವಾದ ಯು.ಎಸ್. ಕಿಡ್ಸ್ ವರ್ಲ್ಡ್ ಚಾಂಪಿಯನ್‌ಶಿಪ್ - ೨೦೨೫ರಲ್ಲಿ ೧೧ ವರ್ಷ ವಯಸ್ಸಿನ ವಿಭಾಗದಲ್ಲಿ ಐದಾ ಭಾರತವನ್ನು ಪ್ರತಿನಿಧಿಸಿದ್ದಳು. ಖ್ಯಾತ ರ‍್ಯಾಲಿಪಟು ಕೊಡಗಿನ ಬಲ್ಲಚಂಡ ಡೆನ್ ತಿಮ್ಮಯ್ಯ ಹಾಗೂ ಸಂಜನಾ ತಿಮ್ಮಯ್ಯ ದಂಪತಿಯ ಪುತ್ರಿ ಐದಾ ಸಾಧನೆ ಗಾಲ್ಫ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಇದೀಗ ಐದಾ ವಿಶ್ವದ ಅತ್ಯುತ್ತಮ ಯುವ ಗಾಲ್ಫ್ ಆಟಗಾರ್ತಿಯರಲ್ಲಿ
ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್
ಐದಾ ತಿಮ್ಮಯ್ಯ ೩ನೇ ಸ್ಥಾನ
(ಮೊದಲ ಪುಟದಿಂದ) ಒಬ್ಬಳಾಗಿ ಗುರುತಿಸಲ್ಪಟ್ಟಿದ್ದಾರೆ. ಇದು ಒಂದು ಕನಸ್ಸು ಇದೀಗ ನನಸಾಗಿದೆ, ಭಾರತವನ್ನು ಪ್ರತಿನಿಧಿಸುವುದು ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟಾಪ್ ೫ ಸ್ಥಾನ ಗಳಿಸಿರುವುದು ಭಾವನಾತ್ಮಕ ಮತ್ತು ಮರೆಯಲಾಗದ ಅನುಭವವಾಗಿದೆ ಎಂದು ಐದಾ ಪೋಷಕರಾದ ಡೆನ್ ತಿಮ್ಮಯ್ಯ ಹಾಗೂ ಸಂಜನಾ ಪ್ರತಿಕ್ರಿಯಿಸಿದ್ದಾರೆ.
ಗಾಲ್ಫ್ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಐದಾ ಹೋಮ್ ಸ್ಕೂಲಿಂಗ್ ಮಾಡುತ್ತಿದ್ದು, ಹೆಚ್ಚಾಗಿ ಗಾಲ್ಫ್ ಆಟದಲ್ಲೇ ತೊಡಗಿಸಿಕೊಂಡಿದ್ದಾರೆ. ಗಾಲ್ಫ್ನಲ್ಲಿ ಸೌತ್ ಇಂಡಿಯಾ ಚಾಂಪಿಯನ್, ನ್ಯಾಷನಲ್ ಚಾಂಪಿಯನ್ ಆಗಿದ್ದ ಐದಾ ಇದೀಗ ಭಾರತವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸಿ ೩ನೇ ಸ್ಥಾನದೊಂದಿಗೆ ದೇಶಕ್ಕೆ ಕೀರ್ತಿ ತಂದಿದ್ದಾಳೆ. -ಶಶಿ