ಮಡಿಕೇರಿ, ಆ. ೪: ಕೇರಳದಿಂದ ಅಕ್ರಮವಾಗಿ ನಿಷೇಧಿತ ಮದ್ಯ ತರಲು ಪ್ರಯತ್ನಿಸುತ್ತಿದ್ದ ಜಿಲ್ಲೆಯ ಈರ್ವರು ವ್ಯಕ್ತಿಗಳನ್ನು ವಶಪಡಿಸಿಕೊಂಡಿರುವ ಕೇರಳ ಪೊಲೀಸರು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಾ.೩ರಂದು ಕೇರಳದ ಪಾಲ್ಚುರಂನಿAದ ಮಾನಂದವಾಡಿ ಕಡೆಗೆ ತೆರಳುತ್ತಿದ್ದ ಕಾರನ್ನು ಕರ್ತವ್ಯ ದಲ್ಲಿದ್ದ ಪೊಲೀಸರು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ೫ ಪ್ಲಾಸ್ಟಿಕ್ ಗಳಲ್ಲಿ ಕೇರಳದ ನಿಷೇಧಿತ ಸ್ಥಳೀಯ ಮದ್ಯ (ಕಳ್ಳಭಟ್ಟಿ) ಇರುವದು ಪತ್ತೆಯಾಗಿದೆ. ಈ ಸಂಬAಧ ಕ್ರಮ ಕೈಗೊಂಡಿರುವ ತಲಪ್ಪುಳ ಪೊಲೀಸರು ಪೊನ್ನಂಪೇಟೆ ತಾಲೂಕಿನ ಬಾಡಗರ ಕೇರಿ, ಪೋರಾಡು ಗ್ರಾಮದ ಬ.ಎ. ಬಾನು ಹಾಗೂ ಬಿ.ಕೆ. ಸಂಪತ್ ಅವರುಗಳನ್ನು ವಶಕ್ಕೆ ಪಡೆದು ಅವರುಗಳ ವಿರುದ್ಧ ಕೇರಳ ಅಬಕಾರಿ ಕಾಯ್ದೆಯಡಿ ೪೮೪/೨೦೨೫ ಯು ಎಸ್ ೮(೧), ೮(೨), ೬೭(ಬಿ) ಕಲಂನಡಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.