ಸಾರಿಗೆ ನೌಕರರ ಸಂಘದೊAದಿಗೆ ಸಿಎಂ ಸಂಧಾನ ಮಾತುಕತೆ ವಿಫಲ

ಬೆಂಗಳೂರು, ಆ. ೪ : ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಸಂಬAಧ ನೌಕರರ ಸಂಘದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಈಗಾಗಲೇ ನಿರ್ಧರಿಸಿದಂತೆ ಮುಷ್ಕರ ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಈತನ್ಮಧ್ಯೆ ಕರ್ನಾಟಕ ಹೈಕೋರ್ಟ್ ಸೋಮವಾರ ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡುವAತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜೆಎಸಿ ಗೆ ಸೂಚನೆ ನೀಡಿದೆ.ಹೈಕೋರ್ಟ್ ಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಜೆಎಸಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿದ್ದು ಈ ಬಗ್ಗೆ ಸಂಘದ ವಕೀಲರೊಂದಿಗೆ ಚರ್ಚಿಸಿ ಬಳಿಕ ಬಂದ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.ಜನವರಿ ೧, ೨೦೨೪ ರಿಂದ ಜಾರಿಗೆ ಬರುವಂತೆ ಶೇಕಡ ೨೫% ರಷ್ಟು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ.

ಸಂಸದೆಯ ಚಿನ್ನದ ಸರ ಅಪಹರಣ

ನವದೆಹಲಿ, ಆ. ೪: ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಕಾಂಗ್ರೆಸ್ ಸಂಸದೆ ಆರ್. ಸುಧಾ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಕಳ್ಳ ಪರಾರಿಯಾಗಿದ್ದಾನೆ. ತಮಿಳುನಾಡಿನ ಮೈಲಾಡುತುರೈ ಲೋಕಸಭಾ ಕ್ಷೇತ್ರದ ಸಂಸದೆ ಸುಧಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುವ ಮೂಲಕ ಈ ವಿಷಯದ ಬಗ್ಗೆ ದೂರು ನೀಡಿದ್ದಾರೆ. ಈ ಚಿನ್ನದ ಸರ ಕಳ್ಳತನ ಘಟನೆಯಲ್ಲಿ ತಮ್ಮ ಕುತ್ತಿಗೆಗೂ ಗಾಯವಾಗಿದೆ. ಈ ಘಟನೆ ರಾಜಧಾನಿಯ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾದ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ಅನೇಕ ದೇಶಗಳ ರಾಯಭಾರ ಕಚೇರಿಗಳಿವೆ. ಮಳೆಗಾಲದ ಅಧಿವೇಶನದ ಕಾರಣ ಆರ್. ಸುಧಾ ದೆಹಲಿಯಲ್ಲಿ ತಂಗಿದ್ದರು. ಆಗಸ್ಟ್ ೪ರಂದು ಬೆಳಿಗ್ಗೆ ೬:೧೫ ರಿಂದ ಬೆಳಿಗ್ಗೆ ೬:೨೦ ರ ನಡುವೆ ವಾಕಿಂಗ್ ಹೋಗಿದ್ದಾಗ ಈ ದಾಳಿ ನಡೆದಿದೆ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಅವರ ಮುಂದೆ ಬಂದು ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಹತ್ಯೆ

ಭೋಪಾಲ್, ಆ. ೪: ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು ಧಾರುಣವಾಗಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬವರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಇಲ್ಲಿನ ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವAತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸಂತ್ರಸ್ತೆ ಭಾಗ್ಯಶ್ರೀ ಮನೆಯಲ್ಲಿದ್ದಾಗ ಆಕೆಯ ಮನೆಯೊಳಗೆ ನುಗ್ಗಿದ ಶೇಖ್ ರಯೀಸ್ (೪೨) ಹಲ್ಲೆ ನಡೆಸಿ, ಆಕೆಯ ಕತ್ತು ಸೀಳಿ, ಹಲವು ಬಾರಿ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವದಿಂದಾಗಿ ಭಾಗ್ಯಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾಗ್ಯಶ್ರೀ ಸಹೋದರಿ ಸುಭದ್ರಾ ಬಾಯಿ ರಯೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ದೋಣಿ ಮುಳುಗಿ ಹಲವರು ನಾಪತ್ತೆ..!

ಅಡೆನ್, ಆ. ೪: ಯೆಮೆನ್ ಕರಾವಳಿಯಲ್ಲಿ ಘೋರ ದುರಂತವೊAದು ಸಂಭವಿಸಿದ್ದು, ಸುಮಾರು ೧೫೦ ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಟ ೫೪ ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೆಮೆನ್‌ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಅಹ್ವರ್ ಜಿಲ್ಲೆಯ ಬಳಿ ದೋಣಿ ಮಗುಚಿ ಬಿದ್ದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಹಡಗಿನಲ್ಲಿದ್ದ ಸುಮಾರು ೧೫೦ ಜನರ ಪೈಕಿ ೧೦ ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಹೇಳಿದ್ದಾರೆ. ಒಂಬತ್ತು ಇಥಿಯೋಪಿಯನ್ನರು ಮತ್ತು ಒಬ್ಬ ಯೆಮೆನ್ ಪ್ರಜೆಯನ್ನು ರಕ್ಷಿಸಲಾಗಿದೆ. ಆದರೆ, ೧೨ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ

ಲಂಡನ್: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಇಂಗ್ಲೆAಡಿನ ಓವಲ್ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಆರು ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ೫ ಪಂದ್ಯಗಳ ಸರಣಿಯಲ್ಲಿ ೨-೨ರ ಸಮಬಲದೊಂದಿಗೆ ತನ್ನ ಅಭಿಯಾನ ಮುಗಿಸಿದೆ. ೫ ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿದರು. ಗೆಲ್ಲಲು ೩೭೪ ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆAಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ ೬ ವಿಕೆಟ್ ಕಳೆದುಕೊಂಡು ೩೩೯ ರನ್ ಕಲೆಹಾಕಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆAಡ್ ಗೆಲ್ಲಲು ಕೇವಲ ೩೫ ರನ್ ಅಗತ್ಯವಿತ್ತು. ೨೮ ರನ್ ಗಳಿಸಲಷ್ಟೆ ಶಕ್ತವಾದ ಇಂಗ್ಲೆAಡ್ಬ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಪಂದ್ಯ ಪುರುಷ ಪ್ರಶಸ್ತಿಯನ್ನು ಸಿರಾಜ್ ಪಡೆದುಕೊಂಡರೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹ್ಯಾರಿ ಬ್ರುಕ್ ಹಾಗೂ ಭಾರತದ ನಾಯಕ ಶುಬ್ ಮನ್ ಗಿಲ್ ಹಂಚಿಕೊAಡರು.