ಮಡಿಕೇರಿ, ಆ. ೪: ಬಹು ವರ್ಷಗಳ ಅಂತರದ ಬಳಿಕ ಭಾರತ ಮುಖ್ಯ ಹಾಕಿ ತಂಡದಲ್ಲಿ ಕ್ರೀಡಾಜಿಲ್ಲೆ ಖ್ಯಾತಿಯ ಕೊಡಗಿನ ಆಟಗಾರ ಚಂದೂರ ಬಿ.ಪೂವಣ್ಣ ಅವರು ಆಯ್ಕೆಗೊಂಡಿದ್ದಾರೆ. ಈ ಹಿಂದೆ ಕೊಡಗಿನ ಒಬ್ಬರಲ್ಲಾ ಒಬ್ಬ ಆಟಗಾರ ಭಾರತ ಹಾಕಿ ತಂಡದಲ್ಲಿ ಗುರುತಿಸಲ್ಪಡುತ್ತಿದ್ದರು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊಡಗು ಜಿಲ್ಲೆಯ ಯಾರೊಬ್ಬರೂ ಭಾರತ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಚಂದೂರ ಪೂವಣ್ಣ ಆಸ್ಟೆçÃಲಿಯಾ ಪ್ರವಾಸ ಕೈಗೊಳ್ಳುತ್ತಿರುವ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಾಕಿ ಇಂಡಿಯಾ ಇಂದು ಆಸ್ಟೆçÃಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ತಂಡವನ್ನು ಪ್ರಕಟಿಸಿದೆ. ಕರ್ನಾಟಕ ರಾಜ್ಯದಿಂದ ತಂಡದಲ್ಲಿ ಪೂವಣ್ಣ ಅವರು ಮಾತ್ರ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಪೂವಣ್ಣ ಯೂರೋಪ್ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೂನಿಯರ್ ಇಂಡಿಯಾ ತಂಡವನ್ನು ಈ ಹಿಂದೆ ಪ್ರತಿನಿಧಿಸಿದ್ದರು.
ಭಾರತ ಹಾಕಿ ತಂಡಕ್ಕೆ ಚಂದೂರ ಪೂವಣ್ಣ
(ಮೊದಲ ಪುಟದಿಂದ) ಪೂವಣ್ಣ ಮೂಲತಃ ಕಂಡAಗಾಲದ ನಿವಾಸಿ ಚಂದೂರ ಎಸ್ ಪ್ರಭು (ಬಾಬಿ ) ಹಾಗೂ ಅನಿಲ (ತಾಮನೆ - ಮಲ್ಲೇಂಗಡ) ದಂಪತಿಯ ಪುತ್ರ.
ಈ ಬಗ್ಗೆ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿರುವ ಮಾಜಿ ಒಲಂಪಿಯನ್ ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ಅವರು ಭಾರತ ಮುಖ್ಯ ತಂಡದಲ್ಲಿ ಅನೇಕ ವರ್ಷಗಳ ಬಳಿಕ ಕೊಡಗಿನವರಾಗಿ ಪೂವಣ್ಣ ಅವರು ಆಯ್ಕೆಗೊಂಡಿರುವುದು ಸಂತಸದ ವಿಚಾರವಾಗಿದೆ. ಇವರು ಪ್ರತಿಭಾನ್ವಿತ ಆಟಗಾರರಾಗಿದ್ದು ಭವಿಷ್ಯದಲ್ಲಿ ಒಲಂಪಿಕ್ಸ್ನಲ್ಲಿ ಆಡುವಂತಾಗಬೇಕು ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಇದಕ್ಕೆ ದೃಢ ಚಿತ್ತದಿಂದ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ. ಭಾರತ ತಂಡ ತಾ. ೭ ರಂದು ಆಸ್ಟೆçÃಲಿಯಾಕ್ಕೆ ಪ್ರಯಾಣ ಬೆಳೆಸಲಿದೆ.