ಸೋಮವಾರಪೇಟೆ, ಆ. ೪: ಕೃಷಿಕರ ನೆಮ್ಮದಿ ಕೆಡಿಸಿರುವ ಸೆಕ್ಷನ್-೪ ಮತ್ತು ಸಿ. ಹಾಗೂ ಡಿ. ಜಾಗ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದನ್ನು ಖಂಡಿಸಿ, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ರೈತಪರ ಸಂಘಟನೆಗಳು, ಸಾರ್ವಜನಿಕರ ಸಹಕಾರದೊಂದಿಗೆ ತಾ. ೧೧ರಂದು ಸೋಮವಾರಪೇಟೆ ತಾಲೂಕು ಬಂದ್ಗೆ ನಿರ್ಧರಿಸಲಾಗಿದೆ.
ಇಲ್ಲಿನ ರೈತ ಹೋರಾಟ ಸಮಿತಿಯ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್-೪ ವಿಷಯಗಳ ಬಗ್ಗೆ ಈವರೆಗೆ ನಡೆಸಿದ ಹೋರಾಟ, ಕಾನೂನು ಪ್ರಕ್ರಿಯೆಗಳ ಬಗ್ಗೆ ಅಧ್ಯಕ್ಷ ಕೆ.ಬಿ.ಸುರೇಶ್ ವಿವರಣೆ ನೀಡಿದರು.
ಸರ್ಕಾರ ಕೃಷಿ ಭೂಮಿಯನ್ನು ನಿಗೂಢವಾಗಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ನಮ್ಮ ಸಮಿತಿಯ ವತಿಯಿಂದ ಸಿ ಮತ್ತು ಡಿ ಜಾಗ, ಅರಣ್ಯ ಇಲಾಖೆಯ ಸೆಕ್ಷನ್ ೪, ಸೆಕ್ಷನ್-೫ಗೆ ಸಂಬAಧಿಸಿದAತೆ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದು, ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಾನೂನಿನ ಮೂಲಕವು ಹೋರಾಟವನ್ನು ಮುಂದುವರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈವರೆಗೆ ಶಾಂತ ರೀತಿಯಲ್ಲಿ ಮೌನ ಪ್ರತಿಭಟನೆ ಮಾಡಲಾಗಿದೆ. ಸಂಬAಧಿಸಿದ ಅಧಿಕಾರಿಗಳು, ಮುಖ್ಯಮಂತ್ರಿಗಳು, ಸಚಿವರಿಗೆ ಮನವಿ ಸಲ್ಲಿಸಿ, ಸಮಸ್ಯೆಯ ಗಂಭೀರತೆ ವಿವರಿಸಲಾಗಿದೆ. ಆದರೂ ಸಕಾರಾತ್ಮಕ ಸ್ಪಂದನ ಲಭಿಸಿಲ್ಲ. ಈ ಹಿನ್ನೆಲೆ ಮುಂದಿನ ನಿಲುವು ಹೋರಾಟವಾಗಿದೆ. ತಾ. ೧೧ರ ಸೋಮವಾರ ಸೋಮವಾರಪೇಟೆ ತಾಲೂಕು ಬಂದ್ಗೆ ನಿರ್ಧರಿಸಲಾಗಿದ್ದು, ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಇರಲಿದೆ ಎಂದು ತಿಳಿಸಿದರು. ಬಂದ್ನ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು. ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು. ರೈತರ ಅಳಿವು ಹಾಗೂ ಉಳಿವಿನ ಪ್ರಶ್ನೆಯಾಗಿರುವ ಸಿ ಮತ್ತು ಡಿ ಜಾಗ, ಸೆಕ್ಷನ್-೪ ಹಾಗೂ ಸೆಕ್ಷನ್-೫ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳು ವವರೆಗೂ ಹೋರಾಟ ನಡೆಸಲಾಗುವುದು. ಈ ಬಗ್ಗೆ ಎಲ್ಲ ಗ್ರಾಮದ ಪ್ರತಿಯೋ ರ್ವರೂ ಕೈಜೋಡಿಸಿ ಮುಂದಿನ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು.
ಈ ಸಂದರ್ಭ ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಮಿಥುನ್ ಹರಗ, ದಿವಾಕರ್ ಕೂತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಚೌಡ್ಲು ಪ್ಯಾಕ್ಸ್ ಅಧ್ಯಕ್ಷ ಕೆ.ಟಿ. ಪರಮೇಶ್, ಗೌಡಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಭರತ್ಕುಮಾರ್, ನಂದಕುಮಾರ್ ಸೇರಿದಂತೆ ಇತರರು ಇದ್ದರು.