ಮಡಿಕೇರಿ, ಆ. ೪: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಡಿಕೇರಿ ಗ್ರಾಮದ ಮಾಣಿಪಂಡ ಸಜಿ ಅವರಲ್ಲಿ ಟ್ರಾö್ಯಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಬಲ್ಯಮುಂಡೂರಿನ ಮೆಲ್ಟಿನ್ ಎಂಬವರು ಜು. ೨೯ ರಿಂದ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಜೆಸ್ಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸಲು ಪೊಲೀಸ್ ಪ್ರಕಟಣೆ ಕೋರಿದೆ. (೨೨೯೦೦೦, ೨೪೬೨೪೬)