ವೀರಾಜಪೇಟೆ, ಆ. ೪: ಜಿಲ್ಲೆಯ ಶ್ರೀಮಂತ ಸಂಸ್ಕöÈತಿಯನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಆಯೋಜಿಸಿದ್ದ ಕಕ್ಕಡ ಪದಿನೆಟ್ ನಮ್ಮೆ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಖಿಲ ಕೊಡವ ಸಮಾಜ ಎನ್ನುವುದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿದೆ.
ಹಿAದೆ ಈ ಕಕ್ಕಡ ಪದಿನೆಟ್ ಹಬ್ಬದ ಆಚರಣೆಯ ಮಹತ್ವ ಕೊಡವರಿಗೆ ಮಾತ್ರ ಅರಿವಿತ್ತು. ಆದರೆ ಇಂದು ಕೊಡಗಿನಲ್ಲಿ ಎಲ್ಲಾ ಜನಾಂಗದವರು ಈ ಆಚರಣೆ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಬಹುತೇಕ ಯುವ ಜನರು ಉದ್ಯೋಗ ನಿಮಿತ್ತ ಜಿಲ್ಲೆಯಿಂದ ಹೊರಗೆ ಉಳಿದಿದ್ದು ಇಲ್ಲಿರುವ ವಯೋವೃದ್ಧರು ಈ ಆಚರಣೆಯನ್ನು ಮುಂದುವರೆಸಿದ್ದಾರೆ. ಈ ವಿಶಿಷ್ಠ ಆಚರಣೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರಲ್ಲದೆ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸಬೇಕು. ಕೊಡವ ಜನಾಂಗದವರಲ್ಲಿ ಮದ್ಯ ಸೇವನೆಯೂ ಒಂದು ಸಂಸ್ಕೃತಿಯ ಭಾಗವೆಂದು ಬಿಂಬಿಸಿ ಅದನ್ನೇ ಒಂದು ಚಟವಾಗಿ ಬೆಳಸಿಕೊಳ್ಳಬಾರದು. ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಇಂದು ವೈದ್ಯಕೀಯ ವೆಚ್ಚ ಕೈಗೆಟಕದಂತಹ ಸ್ಥಿತಿಯಲ್ಲಿದೆ ಎಂಬುದನ್ನು ಮನ ಗಾಣಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲೆ ಮತ್ತು ಚಲನಚಿತ್ರ ನಿರ್ದೇಶಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ ಈ ಕಕ್ಕಡ ಪದಿನೆಟ್ ಆಚರಣೆ ಅತ್ಯಂತ ವಿಶಿಷ್ಠವಾಗಿದ್ದು ಅಂದಿನ ಕಾಲಘಟ್ಟದಲ್ಲಿ ಆ ಆಚರಣೆಗೆ ಅದರದ್ದೆ ಮಹತ್ವ ಮತ್ತು ಹಿನ್ನಲೆ ಇತ್ತು. ನಮ್ಮ ಉಡುಪು, ಆಚಾರ, ಪದ್ಧತಿ ಸಂಸ್ಕೃತಿ ಹಬ್ಬಗಳ ಆಚರಣೆಗೆ ತನ್ನದೆಯಾದ ವಿಶಿಷ್ಠತೆ ಇದ್ದು, ಇದನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ಮಾತನಾಡಿ ನಮ್ಮ ಯುವ ಜನತೆಗೆ ಕೃಷಿ ಚಟುವಟಿಕೆ ಬಗ್ಗೆ ಯಾವುದೆ ಅರಿವಿಲ್ಲ. ಹೆಣ್ಣು ಮಕ್ಕಳಲ್ಲಿ ಅನಾವಶ್ಯಕ ವಿಚ್ಚೇದನ ಪ್ರವೃತ್ತಿ ಕಂಡು ಬರುತ್ತಿದೆ, ಅದಕ್ಕೆ ಪೋಷಕರು ಬೆಂಬಲ ನೀಡುತ್ತಿರುವುದನ್ನೂ ಕಾಣುತ್ತಿದ್ದೇವೆ. ಮತ್ತೊಂದು ಕಡೆ ವಯಸ್ಸಾದ ಪೋಷಕರನ್ನು ಮಕ್ಕಳಿಗೆ ಬೇಡ ಎಂದು ಆಶ್ರಮಕ್ಕೆ ಸೇರಿಸುವುದನ್ನೂ ಕಾಣುತಿದ್ದೇವೆ. ಇದು ನಮ್ಮ ವಿಶಿಷ್ಟ ಸಂಸ್ಸೃತಿಗೆ ಆಚಾರ ವಿಚಾರಗಳಿಗೆ ವಿರುದ್ಧವಾಗಿದ್ದು ಈ ಲೋಪಗಳನ್ನು ಸರಿಪಡಿಸುವ ಕೆಲಸ ಸಮಾಜದಿಂದ, ಪ್ರಮುಖರಿಂದ ಆಗಬೇಕೆಂದರು.
ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದಿನ ಮಳೆ ಗಾಳಿಯ ಕಕ್ಕಡ ಇದೀಗ ಕಾಣುತ್ತಿಲ್ಲ, ಸುಮಾರು ಐವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆ, ಇತ್ತೀಚಿನ ವರ್ಷಗಳ ಪರಿಸ್ಥಿತಿ ಬೇರೆ ಜನರು ಬದಲಾದಂತೆ ಪ್ರಕೃತಿಯಲ್ಲಿಯೂ ಬದಲಾವಣೆಯಾಗಿದೆ. ದೇಹದ ಉಷ್ಣಾಂಶವನ್ನು ಸಮತೋಲನವಾಗಿಟ್ಟುಕೊಳ್ಳಲು ನಮ್ಮ ಪೂರ್ವಿಕರು ಕಂಡುಕೊAಡ ಉಪಾಯ ಈ ಕಕ್ಕಡದ ಹಲವು ತಿನಿಸುಗಳು ಎಂದರು. ಅಖಿಲ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ ಮುಖ್ಯ ಅತಿಥಿಗಳಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜ ಸೇವಕಿ ಕೊಣಿಯಂಡ ಬೋಜಮ್ಮ ಕಕ್ಕಡ ಹಬ್ಬದ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಮದ್ದು ಸೊಪ್ಪು ವಿಶೇಷ ಗುಣಗಳುಳ್ಳ ಗಿಡವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮದ್ದು ಸೊಪ್ಪಿನ ಗಿಡಗಳನ್ನು ಹುಡುಕುವ ಪರಿಸ್ಥಿತಿಗೆ ನಾವುಗಳು ಬಂದು ತಲುಪಿದ್ದೇವೆ. ಪ್ರತಿ ಮನೆಯಲ್ಲಿ ಹಾಗೂ ತೋಟಗಳಲ್ಲಿ ಈ ಅಪರೂಪದ ಸೊಪ್ಪುಗಳನ್ನು ಬೆಳೆಯುವ ಮೂಲಕ ಮುಂದಿನ ಪೀಳಿಗೆಗೆ ಸೊಪ್ಪಿನ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ ಎಂದರು.
ಕಕ್ಕಡ ಪಾಯಸ, ಮದ್‌ಪುಟ್ಟ್ ಹೀಗೆ ಹಲವಾರು ಕೊಡಗಿನ ವಿಶಿಷ್ಟ ಖಾದ್ಯಗಳ ಊಟೋಪಚಾರ ಏರ್ಪಡಿಸಲಾಗಿತ್ತು. ಮನರಂಜನಾ ಕಾರ್ಯಕ್ರಮ ನಡೆಯಿತು. ಕೂಟದ ನಿರ್ದೇಶಕಿ ಬಲ್ಲಚಂಡ ಆರತಿ ಚಂಗಪ್ಪ ಸ್ವಾಗತಿಸಿ, ನಿರ್ದೇಶಕಿ ತೀತಿರ ಊರ್ಮಿಳ ನಿರೂಪಿಸಿ, ಮನ್ನೆರ ಸರಸ್ವತಿ ವಂದಿಸಿದರು. -ಈಶಾನ್ವಿ