ಕುಶಾಲನಗರ, ಆ. ೪: ಕುಶಾಲನಗರ ಗುಂಡುರಾವ್ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೈಟೆಕ್ ಆಸ್ಪತ್ರೆ ಸಂಬAಧ ಸಾಧಕ ಬಾಧಕಗಳ ಬಗ್ಗೆ ಕುಶಾಲನಗರ ನಾಗರಿಕರ ಪರವಾಗಿ ಗಣಪತಿ ದೇವಾಲಯ ಸಮಿತಿ ಪ್ರಮುಖರು ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಂಘ-ಸAಸ್ಥೆಗಳ ಪ್ರಮುಖರ ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಈ ಬಗ್ಗೆ ಪರಿಶೀಲನೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಊರಿನ ಜಾತ್ರೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಗುರುತಿಸಲಾದ ಸ್ಥಳವನ್ನು ತಕ್ಷಣ ಪುರಸಭೆ ಮೂಲಕ ಮೀಸಲಿಸಿಕೊಳ್ಳಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚನೆ ನೀಡಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷರಾದ ಎಂ.ಕೆ ದಿನೇಶ್ ಪ್ರಮುಖರಾದ ವಿ.ಪಿ ಶಶಿಧರ್, ಶರವಣಕುಮಾರ್ ಕೆ.ಎನ್ ದೇವರಾಜ್ ಮತ್ತಿತರರು ಇದ್ದರು.