ಕಡಂಗ, ಆ. ೫ : ಪಾರಾಣೆ ಯೂತ್ ಕ್ರಿಕೆಟರ್ಸ್ ವತಿಯಿಂದ ಮೊದಲನೇ ವರ್ಷದ ಕೆಸರುಗದ್ದೆ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ದಿ. ಮುಕ್ಕಾಟಿರ ಪೊನ್ನಪ್ಪನವರ ಮತ್ತು ದೇರಣ್ಣರವರ ಗದ್ದೆಯಲ್ಲಿ ಕ್ರೀಡೆಯನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟದ ಉದ್ಘಾಟನೆಯನ್ನು ಕೂತಂಡ ಬೋಪಯ್ಯ ಹಾಗೂ ಇಗ್ಗುಡ ಭೀಮಯ್ಯ ನೆರವೇರಿಸಿದರು.
ಕ್ರೀಡಾಕೂಟಕ್ಕೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಶುಭ ಕೋರಿದರು. ಕ್ರಿಕೆಟ್ ಪಂದ್ಯಾಟದಲ್ಲ್ಲಿ ೩೫ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಗೋಣಿಕೊಪ್ಪಲುವಿನ ಆಶಿಶ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ಬೆಟ್ಟಗೇರಿ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು.
ಹಗ್ಗಜಗ್ಗಾಟ ಕ್ರೀಡಾಕೂಟ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರೀಡೆ ಆಯೋಜಿಸಲಾಯಿತು.
ಚಡಾವಿನ ಆದರ್ಶ್ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕಗ್ಗೊಡ್ಲು ಫ್ರೆಂಡ್ಸ್ ತಂಡ ತಮ್ಮದಾಗಿಸಿಕೊಂಡಿತು.
ಮಹಿಳೆಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಮಹಾದೇವಾ ಸ್ಪೋರ್ಟ್ಸ್ ಕ್ಲಬ್ ಬಲಮುರಿ ಮೊದಲ ಸ್ಥಾನ ಪಡೆದರೆ, ಹಾತೂರು ಫ್ರೆಂಡ್ಸ್ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಬಟ್ಟಕಾಳಂಡ ರಾಜಾ ದಿನೇಶ್, ಕೂತಂಡ ಅಯ್ಯಪ್ಪ, ಇಗ್ಗುಡ ಲಾಲು ಚಿಣ್ಣಪ್ಪ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ