ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದೆ. ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಆಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ದಿಂದ ೧೯೯೧ರಲ್ಲಿ Wಊಔ, ಮತ್ತು UಓIಅಇಈ, WಃW ಸಹಯೋಗದಲ್ಲಿ ಸ್ತನ್ಯಪಾನ ಸಪ್ತಾಹ ಆರಂಭಿಸಲಾಯಿತು. ಪ್ರತಿ ವರ್ಷ ಆಗಸ್ಟ್ ೧ ರಿಂದ ೭ ರವರೆಗೆ ಸಪ್ತಾಹದೊಂದಿಗೆ ಈ ಕುರಿತು ತಾಯಂದಿರಿಗೆ ಹೆಚ್ಚಿನ ಅರಿವು ಮೂಡಿಸುವ ಜಾಗೃತಿ ಕಾರ್ಯ ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತಿದೆ.
ಇತ್ತೀಚೆಗೆ ಆಧುನಿಕ ಯುಗದಲ್ಲಿ ಮಹಿಳೆಯರಲ್ಲಿ ತಪ್ಪು ಕಲ್ಪನೆಗಳಿಂದ, ಉದ್ಯೋಗಸ್ಥ ಮಹಿಳೆಯರಿಗೆ ಸಮಯದ ಅಭಾವದಿಂದಲೋ ಅಥವಾ ಯುವತಿಯರ ಎದೆಯ ಚೌಕಟ್ಟು ಅಥವಾ ಸೌಂದರ್ಯ ಕೆಡುತ್ತದೆಂಬ ತಪ್ಪು ತಿಳುವಳಿಕೆಯಿಂದ ಆದಷ್ಟು ಬೇಗ ಮಗುವಿಗೆ ಎದೆ ಹಾಲು ಬಿಡಿಸಿ ಬಾಟಲಿ ಹಾಲನ್ನು ನೀಡಲು ಮುಂದಾಗುತ್ತಿರುವುದು ವಿಷದಾನೀಯ. ಜೀವನ ಮಟ್ಟ ಕಡಿಮೆ ಇರುವ, ಶಿಕ್ಷಣ ಮಟ್ಟ ಕಡಿಮೆ ಇರುವುದು, ಎದೆಹಾಲು ಕೊಡುವ ಬಗ್ಗೆ ಶುಚಿತ್ವಕ್ಕೆ ಗಮನಹರಿಸದೆ ಇರುವ ಕುಟುಂಬಗಳಲ್ಲಿ ಮತ್ತು ಮೂಢನಂಬಿಕೆಗಳ ಕಾರಣದಿಂದ ಮಗು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ.
ಈ ಬಾರಿಯ ಘೋಷವಾಕ್ಯ: ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ” ಎಂಬುದಾಗಿದ್ದು ಪ್ರತಿಯೊಂದು ಮಗುವಿಗೂ ಎದೆಹಾಲು ನೀಡುವ ಪ್ರಜ್ಞಾವಂತಿಕೆ ತಾಯಂದಿರಲ್ಲಿ ಬರಬೇಕಾಗಿದೆ. ಮಗು ಹುಟ್ಟಿದ ತಕ್ಷಣವೇ ಎದೆಹಾಲನ್ನು ಕುಡಿಸುವುದರಿಂದ ಗಿಣ್ಣುಹಾಲಿನಲ್ಲಿ ಹಳದಿ ಬಣ್ಣದ ಕೊಲಸ್ಟçಮ್ ಎಂಬ ಅಂಶವಿದ್ದು ಪ್ರತಿಸಲ ಮಗುವಿಗೆ ಶಕ್ತಿ ನೀಡುವ ಜೊತೆಗೆ ಬಾಯಿತುಂಬಾ ಉಪಕಾರಕವಾದ ಬ್ಯಾಕ್ಟೀರಿಯಾಗಳನ್ನು ಕೂಡ ಮಗುವಿಗೆ ಕೊಡುಗೆಯಾಗಿ ನೀಡುತ್ತದೆ. ಅಷ್ಟೇ ಅಲ್ಲ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಾಗಲು ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಸಿಯಂ, ವಿಟಮಿನ್ ಎ, ಕೊಬ್ಬು, ಸಕ್ಕರೆ, ನೀರು ಮತ್ತು ಪ್ರೊಟೀನ್ ಸಮತೋಲನ ಹೊಂದಲು ಕಾರಣವಾಗುತ್ತದೆ. ಎದೆಹಾಲು ಹಾರ್ಮೋನು, ಬೆಳವಣಿಗೆಯ ಅಂಶಗಳು ಮತ್ತು ಪ್ರತಿರಕ್ಷಾ ವಸ್ತುಗಳನ್ನು ಶಿಶುಗಳಿಗೆ ಉಸಿರಾಟದ, ಕಿವಿ ಮತ್ತು ಮೂತ್ರದ ಸೋಂಕು, ಅತಿಸಾರ, ಮಲಬದ್ದತೆ ಮತ್ತು ಜಠರ ಕರುಳಿನ ಸಮಸ್ಯೆಗಳು ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ರಕ್ಷಿಸಲು ಸ್ತನ್ಯಪಾನವು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ.
ತಾಯಿಗೂ ಪ್ರಯೋಜನ : ಎದೆಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ; ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ತಾಯಿ ಮಗುವಿನ ನಡುವಿನ ಸಂಬAಧವನ್ನು ಬಲಪಡಿಸುತ್ತದೆ, ಇದರಿಂದ ಭಾವನಾತ್ಮಕವಾಗಿ ಮಗುವಿನ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಮತ್ತು ಪ್ರೀತಿ ಬೆಳೆಯುತ್ತದೆ.
ತಾಯಿಗೆ ಪ್ರಸವದ ನಂತರದ ರಕ್ತ ಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ ಮತ್ತು ಋತುಚಕ್ರವು ನಿಧಾನವಾಗಿ ಆಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಧನಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲು ಉಣಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಮಾನಸಿಕ ನೆಮ್ಮದಿ ಸಿಗಲು ಸಾಕಷ್ಟು ಸಹಾಯ ಮಾಡುತ್ತದೆ. ಒಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಮಹಿಳೆಯರಲ್ಲಿನ ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರನ್ನು ಸುಲಭವಾಗಿ ತಡೆಗಟ್ಟಬಹುದು. ಎದೆ ಹಾಲು ನೈಸರ್ಗಿಕವಾಗಿ ಸಿಗುವುದರಿಂದ ಯಾವುದೇ ರೀತಿಯ ಹಾಲಿಗಾಗಿ ದುಂದುವೆಚ್ಚ ಮಾಡಬೇಕಾಗಿಲ್ಲ. ಅತಿಸಾರ ಮತ್ತು ನ್ಯೂಮೊನಿಯಾದಂತಹ ರೋಗಗಳಲ್ಲಿ ಎಳೆಯ ಕಂದಮ್ಮಗಳು ಅತ್ಯಂತ ಅಪಾಯಕ್ಕೊಳಪಡುತ್ತಾರೆ. ಇದರಿಂದ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗುವುದು.
ಹಾಲುಣಿಸುವ ಕ್ರಮ: ಹುಟ್ಟಿದ ಮಕ್ಕಳಿಗೆ ತಿಂಗಳವರೆಗೆ ದಿನಕ್ಕೆ ಕನಿಷ್ಟ ೮ ರಿಂದ ೧೨ ಬಾರಿ ಹಾಲುಣಿಸಬೇಕು ಮಗು ಪ್ರತಿ ಬಾರಿ ಅತ್ತಾಗಲೂ ಹಾಲು ಕುಡಿಸಬೇಕು. ಆರೋಗ್ಯವಂತ ಮಗುವಿಗೆ ೯೦ ನಿಮಿಷಕ್ಕೊಂದು ಬಾರಿ ಹಾಲುಣಿಸಬೇಕು. ಎದೆ ಹಾಲು ಬೇಗ ಜೀರ್ಣವಾಗುವ ಕಾರಣ ಮಗುವಿಗೆ ಬೇಗ ಹಸಿವಾಗುವುದರೊಂದಿಗೆ ಗಂಟಲು ಒಣಗುವ ಸಾದ್ಯತೆ ಇದ್ದು ಆಗಾಗ ಹಾಲು ಕುಡಿಸುತ್ತಿರಬೇಕು. ತಾಯಿಗೆ ಮೊದಲು ಹಾಲುಣಿಸುವ ವಿಧಾನ ಸರಿಯಾಗಿ ತಿಳಿಯದೆ ಎದೆತೊಟ್ಟು ಒಡೆದು ರಕ್ತ ಬರಬಹುದು ಹಾಲುಣಿಸುವಲ್ಲಿ ಕಷ್ಟಪಡಬಹುದು. ಎದೆಭಾಗ ಎದೆತೊಟ್ಟು ಶುಚಿಗೊಳಿಸುವುದು ತಿಳಿದಿರಬೇಕಾಗುತ್ತದೆ. ತೆರೆ ಮರೆಯಲ್ಲಿ ಮಗುವಿಗೆ ಹಾಲುಣಿಸಿದರೆ ಎದೆಹಾಲು ನಿರಾಳವಾಗಿ ಹೆಚ್ಚಾಗುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ಯಾವುದೇ ಚಿಂತೆ, ಯೋಚನೆಗಳಿರಬಾರದು, ಆಗ ಹಾಲು ವೃದ್ಧಿಸಿ ಮಗುವಿಗೆ ಸಾಕಷ್ಟು ಹಾಲು ದೊರೆಯುತ್ತದೆ. ಮಗುವಿಗೆ ಹಾಲುಣಿಸುವ ಕ್ರಮ ಮತ್ತು ಕೂರುವ ಬಗ್ಗೆ ತಿಳಿದಿರಬೇಕು.
ಈ ಸಮಯದಲ್ಲಿ ತಮ್ಮಲ್ಲೇ ಬೆಳೆಯುವ ದವಸಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಮತ್ತು ಕಾಯಿಪಲ್ಯಗಳನ್ನು ತಯಾರಿಸಿ ಸೇವಿಸುವ ಶಿಕ್ಷಣ ತಾಯಂದಿರಿಗೆ ತಿಳಿದಿರಬೇಕು. ಸಾಕಷ್ಟು ಪೌಷ್ಟಿಕ ಆಹಾರವನ್ನು ಮತ್ತು ಸಮತೋಲನ ಆಹಾರವನ್ನು ಹೆಚ್ಚಾಗಿ ಬಳಸಬೇಕು.
೬ ತಿಂಗಳು ಕಡ್ಡಾಯ : ಮಗುವಿಗೆ ತಾಯಿ ಹಾಲಿಗಿಂತ ಉತ್ತಮ ಆಹಾರ ಮತ್ತೊಂದಿಲ್ಲ. ಆದ್ದರಿಂದ ಮೊದಲ ೬ ತಿಂಗಳು ಕಡ್ಡಾಯವಾಗಿ ಎದೆಹಾಲು ನೀಡಬೇಕು. ೬ ತಿಂಗಳ ನಂತರ ೨ ವರ್ಷದವರೆಗೆ ಎದೆಹಾಲು ಮುಂದುವರೆಸುತ್ತಾ ಘನ ಆಹಾರ ನೀಡಲು ಆರಂಭಿಸಬೇಕು. ೨ ವರ್ಷದ ನಂತರವೂ ಎದೆಹಾಲು ನೀಡಲು ಮುಂದುವರೆಸಿದರೆ ಮಗುವಿಗೆ ಅನೇಕ ಪ್ರಯೋಜನಗಳು ಸಿಗಲಿವೆ.
-ಜಿ. ವಿ. ಶ್ರೀನಾಥ್ ಗಾವಡಗೆರೆ
ಹಿರಿಯ ಆರೋಗ್ಯ ನಿರೀಕ್ಷಕರು
ಮಡಿಕೇರಿ, ಮೊ: ೯೯೦೦೯೨೭೨೫೯