ದೆಹ್ರಾಡೂನ್, ಆ.೫: ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿಯ ಬಳಿ ಹಠಾತ್ ಮೇಘಸ್ಫೋಟದಿಂದ ಉಂಟಾದ ಭಾರಿ ಪ್ರವಾಹವು ಇಡೀ ಪ್ರದೇಶದಲ್ಲಿ ವಿನಾಶವನ್ನುಂಟುಮಾಡಿದೆ.
ಇಂದು ಬೆಳಿಗ್ಗೆ ಸಂಭವಿಸಿದ ಈ ನೈಸರ್ಗಿಕ ವಿಕೋಪವು ಧರಾಲಿ ಗ್ರಾಮವನ್ನೇ ನಿರ್ನಾಮ ಮಾಡಿದೆ. ಬಲವಾದ ಪ್ರವಾಹದಿಂದಾಗಿ ಹಾಗೂ ಅಲ್ಲಲ್ಲಿ ಬೆಟ್ಟ ಪ್ರದೇಶದಿಂದ ವೇಗವಾಗಿ ಹರಿದು ಬಂದ ಕೆಸರು ಮಣ್ಣಿನ ಇಂದು ಬೆಳಿಗ್ಗೆ ಸಂಭವಿಸಿದ ಈ ನೈಸರ್ಗಿಕ ವಿಕೋಪವು ಧರಾಲಿ ಗ್ರಾಮವನ್ನೇ ನಿರ್ನಾಮ ಮಾಡಿದೆ. ಬಲವಾದ ಪ್ರವಾಹದಿಂದಾಗಿ ಹಾಗೂ ಅಲ್ಲಲ್ಲಿ ಬೆಟ್ಟ ಪ್ರದೇಶದಿಂದ ವೇಗವಾಗಿ ಹರಿದು ಬಂದ ಕೆಸರು ಮಣ್ಣಿನ ಹೊಳೆಗಳಿಂದಾಗಿ ಅಂಗಡಿಗಳು, ವಾಹನಗಳು ಮತ್ತು ಮನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಹದ ಸ್ಥಳವು ತುಂಬಾ ಭಯಾನಕವಾಗಿದ್ದು, ಜನರು ಏನಾಗುತ್ತಿದೆ ಎಂಬುದು ಅರ್ಥಮಾಡಿಕೊಳ್ಳುವ ಮೊದಲೇ ವಿನಾಶ ಸೃಷ್ಟಿಯಾಯಿತು. ನೀರಿನ ಹರಿವು ಎಷ್ಟು ವೇಗವಾಗಿತ್ತೆಂದರೆ ದೊಡ್ಡ ಕಲ್ಲುಗಳು ಮತ್ತು ಅವಶೇಷಗಳು ಸಹ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿವೆ. ಅದರಲ್ಲಿ ಎಷ್ಟು ಜನರು ಕೊಚ್ಚಿಹೋಗಿದ್ದಾರೆ ಎಂಬುದರ ಕುರಿತು ಇನ್ನೂ ಯಾವುದೇ ಅಂಕಿ-ಅAಶ ಬಹಿರಂಗವಾಗಿಲ್ಲ.
ಪ್ರಸಕ್ತ ವರದಿ ಪ್ರಕಾರ ಇಡೀ ಧರಾಲೀ ಗ್ರಾಮವೇ ಮೇಘ ಸ್ಫೋಟದಿಂದ ಸಂಭವಿಸಿದ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ನೂರಾರು ಮಂದಿ ಸಾವಿಗೀಡಾಗಿರಬಹುದಾಗಿ ಅಂದಾಜಿಸಲಾಗಿದೆ. ಅನೇಕರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಮನೆಗಳೂ, ವಾಣಿಜ್ಯೋದ್ಯಮ ಕಟ್ಟಡಗಳು, ಬಂಗಲೆಗಳು ಪ್ರವಾಹದ ಅಲೆಗೆ ಸಿಲುಕಿ ನಿರ್ನಾಮಗೊಂಡಿವೆ. ಪ್ರತಿಕೂಲ ಹವಾಮಾನದಿಂದಾಗಿ ಈಗಿನ ಸ್ಥಿತಿಯಲ್ಲಿ ಅಳಿದುಳಿದವನ್ನು ರಕ್ಷಿಸುವ ಕಾರ್ಯವೂ ಕಷ್ಟ ಸಾಧ್ಯವಾಗಿದೆ ಎಂದು ಕೇಳಿಬಂದಿದೆ. ಈ ದುರ್ಘಟನೆಯ ಬಗ್ಗೆ ಲಭ್ಯವಾದ ವೀಡಿಯೋವೊಂದರಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಪ್ರಾಣ ರಕ್ಷಣೆಗಾಗಿ ಆರ್ತನಾದ ಮಾಡುತ್ತ ಬೊಬ್ಬೆ ಹಾಕುತ್ತಿದ್ದು ಕ್ಷಣಾರ್ಧದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಹೃದಯ ವಿದ್ರಾವಕವೆನಿಸಿದೆ. ಪ್ರಾಣ ರಕ್ಷಣೆಗಾಗಿ ಜನರು ಸಿಕ್ಕಸಿಕ್ಕಲ್ಲಿ ಓಡುತ್ತಿದ್ದರೂ ಪ್ರವಾಹದ ರಭಸದಲ್ಲಿ ಕೊಚ್ಚಿಹೋಗುತ್ತಿದ್ದ ದಾರುಣ ಸನ್ನಿವೇಶ ಕಂಡುಬAದಿದೆ.
ಗಾಯಗೊಂಡವರಿಗಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಆಶ್ರಯ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಈ ಘಟನೆಯಿಂದ ಚಾರ್ ಧಾಮ್ ಯಾತ್ರೆಗೆ ತೆರಳಿದವರೂ ಅಪಾಯಕ್ಕೊಳಗಾಗಿರಬಹುದು ಎಂದು ಹೇಳಲಾಗಿದೆ. ಬದರೀನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ನೂರಕ್ಕೂ ಅಧಿಕ ಜನರು ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಹೇಳಲಾಗಿದೆ. ಸುಮಾರು ೨೦ ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉತ್ತರಾಖಂಡ್‌ನ ಮುಖ್ಯಮಂತ್ರಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.‘‘ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ೧೫೦ ಮಂದಿ ಯೋಧರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸ್ಥಳೀಯ ಆಡಳಿತ, ಪೊಲೀಸರು ಮತ್ತು ಗ್ರಾಮಸ್ಥರು ಸಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ’’ ಎಂದರು.
‘‘ಅತಿಯಾದ ಮಳೆಯಿಂದಾಗಿ ಉತ್ತರಾಖಂಡ್À ಜಿಲ್ಲೆಯ ಹರ್ಷಿಲ್ ಪ್ರದೇಶದ ಅಡಿಯಲ್ಲಿರುವ ಖಿರ್ ಗಡ್ನ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಧರಾಲಿ ಪಟ್ಟಣದಲ್ಲಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಅಧಿಕೃತವಾಗಿ, ಧರಾಲಿ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರೀ ಹಾನಿಯ ಸುದ್ದಿ ತುಂಬಾ ದುಃಖಕರ ಮತ್ತು ನೋವಿನಿಂದ ಕೂಡಿದೆ” ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಜಿಲ್ಲಾಡಳಿತ ಮತ್ತು ಇತರ ಸಂಬAಧಿತ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಯುದ್ಧೋಪಾದಿಯಲ್ಲಿ ತೊಡಗಿಸಿಕೊಂಡಿವೆ. “ನಾನು ನಿರಂತರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿ ಯನ್ನು ಸೂಕ್ಷö್ಮವಾಗಿ ಗಮನಿಸಲಾಗುತ್ತಿದೆ. ಎಲ್ಲರ ಸುರಕ್ಷತೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ’’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. (ಮೊದಲ ಪುಟದಿಂದ) ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸಂತಾಪ ಸೂಚಿಸಿದ್ದು ರಕ್ಷಣಾ ಕಾರ್ಯದಲ್ಲಿ ಕೇಂದ್ರದ ರಕ್ಷಣಾ ತಂಡಗಳು ಶೀಘ್ರ ಕಾರ್ಯೋನ್ಮುಖವಾಗುವಂತೆ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿಯ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಿದ್ದಾರೆ. ಗಾಯಾಳುಗಳನ್ನು ಉಳಿಸಲು ತಾತ್ಕಾಲಿಕ ಆಸ್ಪತ್ರೆೆಗಳನ್ನು ತೆರೆಯಲಾಗಿದೆ. ಆಶ್ರಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಧರಾಲಿ ಗ್ರಾಮಕ್ಕೆ ತೆರಳುವ ರಸ್ತೆ ಹಾನಿಗೀಡಾಗಿ ಸಂಚಾರಕ್ಕೆ ಅಸಾಧ್ಯವೆನಿಸಿದೆ. ಅಂತೂ ಜೀವಂತವಾಗಿರುವವರನ್ನು ಗ್ರಾಮದಿಂದ ತೆರವುಗೊಳಿಸಿ ರಕ್ಷಿಸಲಾಗುತ್ತಿದೆ. ಉತ್ತರಾಖಂಡ ಪ್ರಾಕೃತಿಕ ಸಂಪನ್ಮೂಲಗಳಿAದ ತುಂಬಿ ತುಳುಕುತ್ತಿರುವ ರಾಜ್ಯ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಭಾರತದ ಆಧ್ಯಾತ್ಮದೊಂದಿಗೆ ಬೆರೆತಿದೆ. ಆದರೆ ಈ ರಾಜ್ಯ ಪದೇ ಪದೇ ಪ್ರಾಕೃತಿಕ ವಿಕೋಪಕ್ಕೂ ಗುರಿಯಾಗುತ್ತಿದ್ದು, ಮೇಘಸ್ಫೋಟ, ಭೂಕಂಪ, ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳು ಉತ್ತರಾಖಂಡ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಕಳೆದ ಜೂನ್‌ನಲ್ಲಿ ಇಲ್ಲಿನ ಬಾಲಿಘರ್ನಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಏಕಾಏಕಿ ಉಂಟಾದ ಪ್ರವಾಹದಿಂದ ಜನರು ಭಯಭೀತರಾಗಿದ್ದು, ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳತ್ತ ವಲಸೆ ಹೋಗಲಾರಂಭಿಸಿದ್ದಾರೆ. ಹವಾಮಾನ ಇಲಾಖೆಯು ಆಗಸ್ಟ್ ೧೦ರವರೆಗೆ ಉತ್ತರಕಾಶಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ನಿರ್ದೇಶಕ ರೋಹಿತ್ ಥಪ್ಲಿಯಾಲ್, "ರಾಜ್ಯದಲ್ಲಿ ಆಗಸ್ಟ್ ೧೦ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಜನರು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಬೇಕು" ಎಂದು ತಿಳಿಸಿದ್ದಾರೆ. ಡೆಹ್ರಾಡೂನ್, ಪೌರಿ, ಟಿಹ್ರಿ ಮತ್ತು ಹರಿದ್ವಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಮುನೋತ್ರಿ ಹೆದ್ದಾರಿಯಲ್ಲಿ ರಸ್ತೆ ಕುಸಿತದಿಂದಾಗಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಯಮುನೋತ್ರಿ ಹೆದ್ದಾರಿಯಲ್ಲಿ ಎರಡನೇ ದಿನವೂ ಸಂಚಾರ ಆರಂಭವಾಗಿಲ್ಲ. ಸ್ಯಾನಾ ಚಟ್ಟಿ ಬಳಿ ರಸ್ತೆಯು ಕುಸಿದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯುAಟಾಗಿದೆ. ಹೆದ್ದಾರಿಯನ್ನು ಸರಿಪಡಿಸಲು ಪ್ರಯತ್ನಗಳು ಮುಂದುವರೆದಿವೆಯಾದರೂ, ನಿರಂತರ ಮಳೆ ಇದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಮಳೆಯಾಗುತ್ತಿದೆ. ಸ್ಯಾನಾಚಟ್ಟಿ ಬಳಿ ಯಮುನೋತ್ರಿ ಹೆದ್ದಾರಿಯ ಸುಮಾರು ೨೫ ಮೀಟರ್ ಭಾಗ ಕುಸಿದಿದೆ. ಓಜ್ರಿ ಡಾಬರ್ಕೋಟ್ನಲ್ಲೂ ಭಾರೀ ಮಳೆಯ ಪರಿಣಾಮಗಳು ಗೋಚರವಾಗುತ್ತಿವೆ. ಸ್ಯಾನಾಚಟ್ಟಿಯ ಒಂದು ಬದಿಯಲ್ಲಿರುವ ಬೆಟ್ಟದಿಂದ ಬಂಡೆಗಳು ಉರುಳುತ್ತಿದ್ದು, ವಾಹನ ಸಂಚಾರಕ್ಕೆ ಭಾರೀ ಅಪಾಯ ತಂದೊಡ್ಡಿದೆ. ಅದೇ ರೀತಿ ಗಂಗೋತ್ರಿ ಹೆದ್ದಾರಿಯಲ್ಲಿಯೂ ಸಹ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇನ್ನು ಭಾರೀ ಮಳೆ ಮತ್ತು ಮೇಘಸ್ಫೋಟದಿಂದಾಗಿ, ಚಾರ್ಧಾಮ್ ಯಾತ್ರೆಗೆ ತೊಂದರೆಯಾಗಿದೆ. ಯಮುನೋತ್ರಿ ಹೆದ್ದಾರಿ ಎರಡನೇ ದಿನವೂ ತೆರೆದಿಲ್ಲವಾದ್ದರಿಂದ ಚಾರ್ಧಾಮ್ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. "ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ಸಣ್ಣ ವಾಹನಗಳನ್ನು ಸಾಗಿಸಲು ಪ್ರಯತ್ನಿಸಲಾಗುವುದು" ಎಂದು ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ) ಮಾಹಿತಿ ನೀಡಿದೆ.