ಮಡಿಕೇರಿ, ಆ. ೫: ಮೇಕೇರಿಯ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, ಕೃತ್ಯವೆಸಗಿದ ಅದೇ ರೆಸಾರ್ಟ್ ಸಿಬ್ಬಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರಪೇಟೆ ನಿವಾಸಿ ಎ.ಐ. ಮುಸ್ತಾಫ ಬಂದಿತ ಆರೋಪಿ. ಕಳೆದ ತಾ. ೧ ರಂದು ೧೫ ಬಗ್ಗಿ ವಾಹನದ ೭೬ ಹಳೆಯ ಹಾಗೂ ೬ ಹೊಸ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಮುಸ್ತಾಫನನ್ನು ಬಂಧಿಸಿ ೮೦ ಸಾವಿರ ಹಣ, ೨ ಎಲೆಕ್ಟಿçಕ್ ಬ್ಯಾಟರಿ, ಮೊಬೈಲ್ ಹಾಗೂ ಮೋಟಾರ್ ಸೈಕಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ತಂಡ, ಅಪರಾಧ ಪತ್ತೆದಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.