ಮಡಿಕೇರಿ, ಆ. ೬: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರು, ಸಾರ್ವಜನಿಕರಿಗೆ ಫೋಟೋ, ವೀಡಿಯೋ, ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ತಿಳಿಸಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಬಿ.ಜಿ. ಅನಂತ ಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ ಸ್ಪರ್ಧೆಗಾಗಿ ಸ್ಪರ್ಧಿಗಳು ಗರಿಷ್ಠ ೩ ಫೋಟೋಗಳನ್ನು ಕಳುಹಿಸಬಹುದು. ಪತ್ರಕರ್ತರು ಸುದ್ದಿ ಚಿತ್ರಕ್ಕೆ (ನ್ಯೂಸ್ ಫೋಟೋ) ವಿಷಯಕ್ಕೆ ಸಂಬAಧಿಸಿದAತೆ ಗರಿಷ್ಠ ೩ ಫೋಟೋಗಳನ್ನು ಕಳುಹಿಸಬಹುದು.

ಜಲಲ ಜಲಧಾರೆ ಎಂಬ ವಿಷಯಕ್ಕೆ ಸಂಬAಧಿಸಿದAತೆ ಪತ್ರಕರ್ತರು ೧ ನಿಮಿಷ ಕಾಲಾವಧಿಯ ಹಿನ್ನೆಲೆ ದ್ವನಿಯಿಲ್ಲದ, ಸುದ್ದಿ ಅಲ್ಲದ, ವಿಡಿಯೋಕ್ಕೆ ಆದ್ಯತೆ ನೀಡಿರುವ ೧ ವೀಡಿಯೋವನ್ನು ಕಳುಹಿಸಬಹುದು.

ಸಾರ್ವಜನಿಕರು ಮಳೆಗಾಲದ ಸಂಕಷ್ಟ (ಫನ್ನಿ ಸೈಡ್, ಹಾಸ್ಯವಾಗಿ) ವಿಷಯಕ್ಕೆ ಸಂಬAಧಿಸಿದAತೆ ೧ ನಿಮಿಷ ಕಾಲಮಿತಿಯಲ್ಲಿರುವ ಗರಿಷ್ಠ ೩ ರೀಲ್ಸ್ನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ.

ಎಲ್ಲಾ ವಿಭಾಗದ ಸ್ಪರ್ಧಿಗಳು ತಮ್ಮ ಫೋಟೋ, ವೀಡಿಯೋ, ರೀಲ್ಸ್ಗಳನ್ನು ಆಗಸ್ಟ್ ೧೪ರೊಳಗಾಗಿ ೯೪೪೯೨೯೦೭೧೮ ಸಂಖ್ಯೆಗೆ ವಾಟ್ಸಾö್ಯಪ್ ಮೂಲಕ ಕಳುಹಿಸಬೇಕು. ವಾಟ್ಸಾö್ಯಪ್‌ನಲ್ಲಿಯೇ ತಮ್ಮ ಹೆಸರು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕಳುಹಿಸಬೇಕು. ಸ್ಪರ್ಧೆ ಸಂಬAಧಿತ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ - ೯೪೪೯೨೯೦೭೧೮.