ಗೋಣಿಕೊಪ್ಪ ವರದಿ, ಆ. ೬: ಕ್ಯಾಲ್ಸ್ ಶಾಲೆ ಮತ್ತು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗು ಮತ್ತು ಮೈಸೂರು ವಲಯದ ಸುಮಾರು ೨೪೫ ಕ್ರೀಡಾಪಟುಗಳು ಭಾಗವಹಿಸಿದ್ದರು.
೧೪, ೧೭ ಮತ್ತು ೧೯ ವಯೋಮಿತಿಯ ವಿಭಾಗದಲ್ಲಿ ೬೯ ವಿಭಾಗದ ಸ್ಪರ್ಧೆ ನಡೆಯಿತು. ವಿಜೇತರು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಾದೇಶಿಕ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡರು.