ಸೋಮವಾರಪೇಟೆ, ಆ. ೬: ಲಯನ್ಸ್ ಕ್ಲಬ್ ಸೋಮವಾರಪೇಟೆ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ರಾಮಶೆಟ್ಟಿ, ಕಾರ್ಯದರ್ಶಿಯಾಗಿ ಮಂಜುನಾಥ್ ಚೌಟ ಹಾಗೂ ಖಜಾಂಚಿಯಾಗಿ ಕೆ.ಎನ್. ತೇಜಸ್ವಿ ಆಯ್ಕೆಯಾಗಿದ್ದು, ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಎಸ್. ಮಂಜುನಾಥ ಮೂರ್ತಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ಅವರು ಮಾತನಾಡಿ, ಲಯನ್ಸ್ ಒಂದು ಸೇವಾ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯAತ ೨೦೦ಕ್ಕೂ ಹೆಚ್ಚು ದೇಶಗಳಲ್ಲಿ ೧.೪ ದಶಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಲಯನ್ಸ್ ಕ್ಲಬ್‌ಗಳು ಸಮುದಾಯದ ಅಗತ್ಯಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು. ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ರಾಮಶೆಟ್ಟಿ, ವಲಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಕ್ಲಬ್‌ನ ಮಾಜಿ ಅಧ್ಯಕ್ಷ ಸಿ.ಕೆ. ಶಿವಕುಮಾರ್, ಕಾರ್ಯದರ್ಶಿ ಪದ್ಮಾಕರರಾಜೇ ಅರಸ್, ಖಜಾಂಚಿ ಜಗತ್ ಪ್ರಧಾನ್ ಇದ್ದರು.
ಲಯನ್ಸ್ ಮಾಜಿ ಅಧ್ಯಕ್ಷ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಎ.ಆರ್. ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.