*ಗೋಣಿಕೊಪ್ಪ, ಆ. ೬: ಗಣೇಶೋತ್ಸವ ಆಚರಣೆ ಸೌಹಾರ್ಧತೆ ಯನ್ನು ಬಿಂಬಿಸುವAತಿರಲಿ, ಪ್ರತಿಷ್ಠೆ ಸವಾಲುಗಳ ಆಚರಣೆಯಾಗದಿರಲಿ ಎಂದು ವೀರಾಜಪೇಟೆ ತಾಲೂಕು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್ ತಿಳಿಸಿದರು.
ಅರುವತ್ತೊಕ್ಲು ಗ್ರಾ.ಪಂ. ಮುಂಭಾಗದ ಭರಣಿ ಸಭಾಂಗಣದಲ್ಲಿ ನಡೆದ ಗಣೇಶ ವಿಸರ್ಜನೋತ್ಸವ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಬ್ಬವನ್ನು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ, ಶಿಸ್ತು ಮತ್ತು ಸಮಯ ಪರಿಪಾಲನೆಗಳೊಂದಿಗೆ ಆಚರಿಸಲು ಸಮಿತಿ ಮುಂದಾಗಬೇಕು ಎಂದರು.
ದೊಡ್ಡ ಆರ್ಚುಗಳನ್ನು, ಕಲಾಕೃತಿಗಳನ್ನು, ಅಳವಡಿಸಿಕೊಂಡು ಟ್ರಾಫಿಕ್ ಸಮಸ್ಯೆ ಹುಟ್ಟು ಹಾಕುವುದು, ಮತ್ತೊಂದು ಸಮಿತಿಯವರಿಗೆ ಜಾಗ ಬಿಡದೆ ದುರ್ವರ್ತನೆ ತೋರುವ ಮನಸ್ಥಿತಿಯನ್ನು ಕೈ ಬಿಟ್ಟು ಆಚರಣೆಯ ಉದ್ದೇಶ ಮನನÀ ಮಾಡಿಕೊಂಡು ಮಾದರಿಯಾಗಿ ಗಣೇಶ ವಿಸರ್ಜನೋತ್ಸವ ನಡೆಸುವಂತೆ ಮಾರ್ಗದರ್ಶನ ಮಾಡಿದರು.
ವೃತ್ತ ನಿರೀಕ್ಷಕ ಶಿವರಾಜ್ ಆರ್ ಮುಧೋಳ್ ಮಾತನಾಡಿ, ನೀಡಿರುವ ನಿಗದಿತ ಸಮಯದ ಒಳಗೆ ಗಣೇಶ ವಿಸರ್ಜನೋತ್ಸವಕ್ಕೆ ಸಮಿತಿಗಳು ಮುಂದಾಗಬೇಕು.
ಕಳೆದ ಬಾರಿ ಪೊನ್ನಂಪೇಟೆಯಲ್ಲಿ ಕೆಲವು ಗದ್ದಲದ ಘಟನೆಗಳು ನಡೆದಿವೆ. ಅಂತಹ ಯಾವುದೇ ಸಮಸ್ಯೆ ಉಂಟಾಗದAತೆ ಸಮಿತಿಯವರು ಜಾಗೃತಿ ವಹಿಸಬೇಕು. ಗೌರಿ ಗಣೇಶ ಪ್ರತಿಷ್ಠಾಪನ ಮತ್ತು ವಿಸರ್ಜನೋತ್ಸವ ಮೆರವಣಿಗೆಗೆ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಸೂಚಿಸಿದರು.
ಗೋಣಿಕೊಪ್ಪ ಠಾಣೆ ಉಪನಿರೀಕ್ಷಕ ಪ್ರದೀಪ್ಕುಮಾರ್ ಬಿ,ಕೆ, ಪೊನ್ನಂಪೇಟೆ ಠಾಣೆ ಉಪನಿರೀಕ್ಷಕ ನವೀನ್ ಹಾಗೂ ಸಿಬ್ಬಂದಿಗಳು, ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಇದ್ದರು.