ಮಡಿಕೇರಿ, ಆ. ೬: ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡಿಕೇರಿ ಮತ್ತು ಬಲ್ಯಮಂಡೂರು ಶಾಲೆಯ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪದ ರೋಟರಿ ಸಂಸ್ಥೆ ವತಿಯಿಂದ ಲೇಖನಿ ಸಾಮಗ್ರಿ ವಿತರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇಯಂಡ ಜಯಂತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಶೀಲಾ, ರೋಟರಿ ಸಂಸ್ಥೆ ಅಧ್ಯಕ್ಷರಾದ ವಿಜಯ್, ಕಾರ್ಯದರ್ಶಿ ಪ್ರಮೋದ್ ಕಾಮತ್, ಸಹಾಯಕ ರಾಜ್ಯಪಾಲರಾದ ದಿಲನ್ ಚಂಗಪ್ಪ ಹಾಜರಿದ್ದರು.
ವೈದ್ಯರಾದ ಚಂದ್ರಶೇಖರ್ ಅವರು ಮಾತನಾಡಿ, ಮಕ್ಕಳು ಲೇಖನಿ ಸಾಮಗ್ರಿಗಳ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಬಲ್ಯಮಂಡೂರು ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಪಿ. ಪವಿತ್ರ, ತೂಚಮಕೇರಿ ಶಾಲೆಯ ಮುಖ್ಯ ಶಿಕ್ಷಕರಾದ ಸುಬ್ರಮಣ್ಯ, ನಡಿಕೇರಿ ಶಾಲೆಯ ಮುಖ್ಯ ಶಿಕ್ಷಕಿ ಎ.ಎನ್. ದಿವ್ಯ, ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಹಸೀನಾ, ರೇಖಾ, ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಪದ್ಮ ಎಂ.ಕೆ., ಸಹಾಯಕಿ ಸೌಮ್ಯ, ಗ್ರಾಮಸ್ಥರಾದ ಪ್ರೇಮ, ಸುನೋಜಮ್ಮ ಹಾಜರಿದ್ದರು.