x

ಮಡಿಕೇರಿ, ಆ. ೬: ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರಂಭಿಸಲಾದ ಇಂಟರಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷೆಯಾಗಿ ಕೆ.ಎಸ್. ಆಶಿಕ, ಕಾರ್ಯದರ್ಶಿಯಾಗಿ ಕೆ.ವಿ. ಸೋನಲ್, ಖಜಾಂಚಿಯಾಗಿ ಬಿ.ಎಸ್. ಶಮಿಕ, ಉಪಾಧ್ಯಕ್ಷೆಯಾಗಿ ಎಂ.ಎಸ್. ಸನ ನೇಮಕಗೊಂಡರು. ಪದಗ್ರಹಣ ನೆರವೇರಿಸಿ ರೋಟರಿ ಹಾಗೂ ಇಂಟರಾಕ್ಟ್ ಚಟುವಟಿಕೆಗಳ ಕುರಿತು ಎನ್.ಕೆ. ಮೋಹನ್ ಪ್ರಭು ಮಾತನಾಡಿದರು. ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತ ಶಯನ, ಸ್ವಾಮಿ ವಿವೇಕಾನಂದರ ಸೇವೆಯ ಕುರಿತು ಹೇಳಿದ ಮಾತನ್ನು ಸ್ಮರಿಸಿದರು. ಶಾಲಾ ಪ್ರಾಂಶುಪಾಲೆ ಬಿ.ಎಂ. ಶಾರದ, ಇಂಟರಾಕ್ಟ್ ಕ್ಲಬ್ ಸದಸ್ಯರು ತಮ್ಮ ಕಾರ್ಯವೈಖರಿ ಮೂಲಕ ಮಾದರಿಯಾಗಬೇಕೆಂದು ಕರೆ ನೀಡಿದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ ರೈ ಮಾತನಾಡಿ, ಕ್ಲಬ್ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜಮುಖಿ ಚಿಂತನೆ ಹೆಚ್ಚಿಸಿ ಬದಲಾವಣೆ ತರಬೇಕೆಂದರು. ಕೆ.ಎಸ್. ಶೋಭಾ, ಟಿ.ಜೆ. ಸ್ಮಿತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರುಗಳಾದ ಕಲ್ಯಾಟಂಡ ಪೂಣಚ್ಚ, ಬಿದ್ದಾಟಂಡ ಮುತ್ತಣ್ಣ, ರೋಟರಿ ಸಂಸ್ಥೆಯ ಎಸ್.ಎಸ್. ಪೂವಯ್ಯ, ಬಿ.ಕೆ. ಕಾರ್ಯಪ್ಪ, ರತನ್ ಪೊನ್ನಣ್ಣ, ಇಂಟರಾಕ್ಟ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಪಿ.ವೈ. ಹಸ್ನ ಹಾಜರಿದ್ದರು. ಶಮಿಕ, ಶ್ರಾವ್ಯ, ನಿಯ ಚಂಗಪ್ಪ ಪ್ರಾರ್ಥಿಸಿ, ದನ್ವಿನ್ ಸಾತ್ವಿಕ್ ಸ್ವಾಗತಿಸಿ, ಫಾತಿಮ ನಿಶ ನಿರೂಪಿಸಿ, ಟಿ.ಎಸ್. ಶಮಿಕ ವಂದಿಸಿದರು.