ಸೋಮವಾರಪೇಟೆ, ಆ. ೭: ಕೇರಳ ರಾಜ್ಯದ ಲಾಟರಿಗಳನ್ನು ಸೋಮವಾರಪೇಟೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ. ಬಂಧಿತರಿAದ ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಹಲವು ಸಮಯಗಳಿಂದ ಪಟ್ಟಣದಲ್ಲಿ ಹೊರರಾಜ್ಯದ ಲಾಟರಿ ಮಾರಾಟ ದಂಧೆ ನಿರಾತಂಕವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ನೇತೃತ್ವದಲ್ಲಿ ಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಯಿತು.
ಕ್ಲಬ್ ರಸ್ತೆಯ ಗೂಡಂಗಡಿ, ಖಾಸಗಿ ಬಸ್ ನಿಲ್ದಾಣದ ಕ್ಯಾಂಟೀನ್ ಹಾಗೂ ಮಡಿಕೇರಿ ರಸ್ತೆಯಲ್ಲಿ ಮೊಬೈಲ್ ಮೂಲಕ ಲಾಟರಿ ಮಾರಾಟ ಮಾಡುತಿದ್ದ ಮೂವರು ಆರೋಪಿಗಳಾದ ಶ್ರೀಕರ್, ಶಿವಕುಮಾರ್ ಮತ್ತು ಸುಜಿತ್ ಅವರುಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿ, ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ. ಬಂಧಿತ ಶಿವಕುಮಾರ್ನಿಂದ ೧೫,೮೫೦ ರೂ., ಶ್ರೀಕರನಿಂದ ೧೨೭೦, ಸುಜಿತನಿಂದ ೧೦೦೦ ರೂ. ನಗದು ಹಾಗೂ ಮೂವರ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಕೊಣನೂರಿನಿಂದ ವಾರಕ್ಕೊಮ್ಮೆ ಪಟ್ಟಣಕ್ಕೆ ಆಗಮಿಸಿ ಹೂ ಮಾರುವ ಮಹಿಳೆಯೋರ್ವರಿಗೆ ಲಾಟರಿ ಮೂಲಕ ೧೦ ಕೋಟಿ ರೂಪಾಯಿ ಬಂದಿದೆ ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡಿದ್ದು, ಲಾಟರಿ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು ಎನ್ನಲಾಗಿದೆ.
ವಾಟ್ಸಾö್ಯಪ್ ಮೂಲಕ ದಂಧೆ: ಕೇರಳ ರಾಜ್ಯದ ಲಾಟರಿಯನ್ನು ವಾಟ್ಸಾö್ಯಪ್ ಮೂಲಕವೇ ಫೋಟೋ ತರಿಸಿಕೊಂಡು, ಅದನ್ನು ಸ್ಥಳೀಯವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ನೇರವಾಗಿ ಟಿಕೆಟ್ ನೀಡುತ್ತಿರಲಿಲ್ಲ ಎಂದು ಇನ್ಸ್ಪೆಕ್ಟರ್ ಮುದ್ದುಮಾದೇವ ತಿಳಿಸಿದ್ದಾರೆ.