ಮಡಿಕೇರಿ, ಆ. ೭ : ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಇದೀಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ವಾಕ್ಸಮರ ತಾರಕ್ಕಕೇರಿದ್ದು, ಎರಡು ಗುಂಪುಗಳು ಪ್ರತ್ಯೇಕ ಸಭೆ ನಡೆಸಿರುವ ಬೆಳವಣಿಗೆ ನಡೆದಿದೆ.
ಶನಿವಾರ ಮಡಿಕೇರಿ ನಗರದ ಹೊರವಲಯದ ರೆಸಾರ್ಟ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದಲ್ಲಿ ೯೯ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು.ಸಭೆಯಲ್ಲಿ
೪೦ ರಿಂದ ೫೦ ಮಂದಿ ಭಾಗವಹಿಸಿದ್ದರು. ಸಭೆಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಇಬ್ಬರು ಆಕಾಂಕ್ಷಿಗಳಾದ ಅದಪೊಳೆ ಮೊಹಮ್ಮದ್ ಹಾಜಿ ಕುಂಜಿಲ ಹಾಗೂ ಮಡಿಕೇರಿ ನಗರದ ಕಲೀಲ್ ಪಾಷ ಭಾಗವಹಿಸಿದ್ದರು. ಸಭೆಯ ತೀರ್ಮಾನದಂತೆ ಇಬ್ಬರು ಆಕಾಂಕ್ಷಿಗಳ ಹೆಸರನ್ನು ಮಾಡಿ ಶಾಸಕರಿಗೆ ಪಟ್ಟಿ ನೀಡುವಂತೆ ತೀರ್ಮಾನಿಸಲಾಗಿತ್ತು.ಆದರೆ ಸಭೆಯ ಮಾಹಿತಿ ತಿಳಿಯುತ್ತಿದ್ದಂತೆ ಸಭೆಗೆ ಆಹ್ವಾನವಿಲ್ಲದ ಹಾಗೂ ಸಭೆಯ ಬಗ್ಗೆ ಮಾಹಿತಿಯಿಲ್ಲದ ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಸಭೆ ನಡೆಸಿದ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.ಕಾಂಗ್ರೆಸ್ ಹಿರಿಯ ಮುಖಂಡ ಎಡಪಾಲ ಶಾಫಿ ಅವರು ವಕ್ಫ್ ಬೋರ್ಡ್ ಪ್ರಬಲ ಆಕಾಂಕ್ಷಿಯಾಗಿದ್ದರು, ಆದರೆ ಅವರು ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಗೈರು ಹಾಜರಾಗಿದ್ದರು.
ಅವರ ಹೆಸರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸದೆ ಸಭೆಯಲ್ಲಿ ಹಾಜರಿದ್ದ ಆಕಾಂಕ್ಷಿಗಳ ಹೆಸರನ್ನು ಮಾತ್ರ ಅಂತಮ ಮಾಡಿದ್ದು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಮತ್ತು ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಮತ್ತೋರ್ವ ಆಕಾಂಕ್ಷಿ ಡಿಸಿಸಿ ಸದಸ್ಯ ಖಾಲಿದ್ ಹಾಕತ್ತೂರು ಅವರು ಕೂಡ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಖಾಲಿದ್ ಅವರ ಹೆಸರನ್ನು ಕೂಡ ಆಕಾಂಕ್ಷಿಗಳ ಪಟ್ಟಿಯಿಂದ ಕೈಬಿಟ್ಟಿದ್ದರು. ಶನಿವಾರ ಸಭೆಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರು ತಮಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ ವ್ಯಾಟ್ಸಾö್ಯಪ್ ಗ್ರೂಪ್‌ಗಳಲ್ಲಿ ಅಸಮಾಧಾನ ಕಂಡುಬAದಿದೆ.
ವೀರಾಜಪೇಟೆಯಲ್ಲಿ ಸಭೆ
ಶನಿವಾರ ಮಡಿಕೇರಿ ನಗರದ ಹೊರವಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದ ಸಭೆಗೆ ಆಹ್ವಾನವಿದ್ದರೂ ಕೂಡ ಸಭೆಗೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ವೀರಾಜಪೇಟೆಯಲ್ಲಿ ಭಾನುವಾರ ಸಭೆ ಸೇರಿದ್ದರು.
(ಮೊದಲ ಪುಟದಿಂದ) ವಿಶೇಷವೇನೆಂದರೆ ಶನಿವಾರ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಅಲ್ಪಸಂಖ್ಯಾತ ಘಟಕದ ನಾಯಕರೊಬ್ಬರು ವೀರಾಜಪೇಟೆ ಸಭೆಯಲ್ಲೂ ಭಾಗವಹಿಸಿದ್ದರು.
ವೀರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗಿತ್ತು.
ಹಿರಿಯ ಅಲ್ಪಸಂಖ್ಯಾತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷರಿಗೆ ಬೇಕಾದವರನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಅಸಮಾಧಾನ ಹೊರಹಾಕಿದರು.
ಪಿ.ಎ ಹನೀಫ್ ಅವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಕಾಂಗ್ರೆಸ್ ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ದೂರು ನೀಡಲು ಕೂಡ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕೆಲವು ಧಾರ್ಮಿಕ ಮುಖಂಡರ ಪತ್ರ ಶಿಫಾರಸ್ಸು ತೆಗೆದುಕೊಂಡು ಬರುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಬಾರÀದು. ಗುಂಪುಗಾರಿಕೆ ಮತ್ತು ಪಂಗಡಗಳಿಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅವಕಾಶ ನೀಡಬಾರದೆಂದು ವೀರಾಜಪೇಟೆ ಪುರಸಭೆ ಸದಸ್ಯ ಮತೀನ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ನಡೆದ ಸಭೆಯಲ್ಲಿ ಒಂದು ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ಹೆಚ್ಚು ಆಹ್ವಾನ ನೀಡಿದ್ದಾರೆ ಎಂಬ ಆರೋಪ ಕೂಡ ಪಿ.ಎ ಹನೀಫ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.
ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದವರು ಮೊಹಮ್ಮದ್ ಹಾಜಿ ಕುಂಜಿಲ ಅವರನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೇರಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ವಲಯದಲ್ಲಿ ಕೇಳಿಬರುತ್ತಿದೆ.
ಭಾನುವಾರ ವೀರಾಜಪೇಟೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಚ್.ಎಂ ಅಬ್ದುರೆಹಮಾನ್ ನಾಪೋಕ್ಲು ಅವರು ವಹಿಸಿದ್ದರು.
ಸಭೆಯಲ್ಲಿ ಶಾಫಿ ಎಡಪಾಲ ಅವರ ಹೆಸರನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಶಾಸಕರಿಗೆ ಶಿಫಾರಸು ಮಾಡುವಂತೆ ತೀರ್ಮಾನಿಸಿದ್ದಾರೆ.
ವೀರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರುಗಳಾದ ಎಂ.ಎ. ಉಸ್ಮಾನ್ ಸುಂಟಿಕೊಪ್ಪ, ಎ.ಕೆ ಹಾರಿಸ್ ಕೊಳಕೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್,
ವೀರಾಜಪೇಟೆ ಪುರಸಭೆ ಸದಸ್ಯರಾದ ಶಾಫಿ, ಮತೀನ್, ನೆಲ್ಲಿಹುದಿಕೇರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವೂಫ್ ಮಡಿಕೇರಿ, ಸುಂಟಿಕೊಪ್ಪದ ಇಸ್ಹಾಕ್ ಖಾನ್,ರಫೀಕ್ ಖಾನ್, ಶರೀಫ್, ಕರೀಂ ಗದ್ದೆಹಳ್ಳ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಶೀರ್ ನೆಲ್ಲಿಹುದಿಕೇರಿ, ಶುಕೂರ್ ಸಿದ್ದಾಪುರ ಸೇರಿ ೭೦ ಕ್ಕೂ ಅಧಿಕ ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿದ್ದರು.
ಶನಿವಾರ ಪಿ.ಎ ಹನೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಹ್ವಾನವಿದ್ದರೂ ಕೂಡ ಪ್ರಮುಖ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಸಭೆಗೆ ಗೈರಾಗಿದ್ದರು. ಆದರೆ ಶನಿವಾರ ನಡೆದ ಸಭೆಗೆ ಗೈರಾದವರು ಭಾನುವಾರ ವೀರಾಜಪೇಟೆಯಲ್ಲಿ ನಡೆದ ಸಭೆಯ ನೇತೃತ್ವವನ್ನು ವಹಿಸಿದ್ದು ವಿಶೇಷವಾಗಿತ್ತು.
ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಅಧ್ಯಕ್ಷ!
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದಲ್ಲಿ ಶನಿವಾರ ಮಡಿಕೇರಿಯಲ್ಲಿ ನಡೆದ ಸಭೆಯ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಹಾಗೂ ಭಾನುವಾರ ವೀರಾಜಪೇಟೆಯಲ್ಲಿ ಅಲ್ಪಸಂಖ್ಯಾತ ಮುಖಂಡರು ಸಭೆಯ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅಧ್ಯಕ್ಷರಾದ ಪಿ.ಎ ಹನೀಫ್ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.ಶನಿವಾರ ನಡೆದ ಸಭೆಗೆ ಗೈರುಹಾಜರಾಗಿದ್ದ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್, ಹಿರಿಯ ಕಾಂಗ್ರೆಸ್ ಮುಖಂಡ ಎರ್ಮು ಹಾಜಿ ಅವರನ್ನು ಭೇಟಿಯಾಗಿ ಶನಿವಾರ ನಡೆದ ಸಭೆ ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಹಂಚಿಕೊAಡಿದ್ದಾರೆ.
ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಕುಂಜಿಲದ ಮೊಹಮ್ಮದ್ ಹಾಜಿ ಅವರು ಮಾತ್ರ ಸೂಕ್ತ ಎಂಬAತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಒಂದು ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರು ಬಿಂಬಿಸುತ್ತಿದ್ದಾರೆ. ಅದಲ್ಲದೇ ಮೊಹಮ್ಮದ್ ಹಾಜಿ ಅವರ ಪರವಾಗಿ ಪಿ.ಎ ಹನೀಫ್ ತೆರೆಮರೆಯಲ್ಲಿ ಬೆಂಬಲ ಸೂಚಿಸುತ್ತಿರುವ ಬಗ್ಗೆ ಕೂಡ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷರಾಗುವವರಿಗೆ ಧಾರ್ಮಿಕ ವಿಷಯದ ಬಗ್ಗೆ ಅರಿವು ಇರಬೇಕು ಅಂತಹವರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬರಹಗಳು ವ್ಯಾಟ್ಸ್ ಗ್ರೂಪ್ ಗಳಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದವರು ಶೇರ್ ಮಾಡುತ್ತಿದ್ದರು.ವಿಶೇಷವಾಗಿ ಕುಂಜಿಲ ಮೊಹಮ್ಮದ್ ಹಾಜಿ ಅವರಿಗೆ ಮಾತ್ರ ಧಾರ್ಮಿಕ ವಿಷಯದ ಬಗ್ಗೆ ಗೊತ್ತಿರುವುದು ಉಳಿದವರಿಗೆ ಏನೂ ಗೊತ್ತೇ ಇಲ್ಲ ಎಂಬAತೆ ಇದೀಗ ಬಿಂಬಿಸಿರುವ ಬಗ್ಗೆ ಬಹಿರಂಗವಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಎರಡು ಗುಂಪುಗಳು ರಚನೆಗೊಂಡಿದ್ದು, ಬಣಗಳ ಬಡಿದಾಟದಲ್ಲಿ ಯಾರಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಕಾದುನೋಡಬೇಕಾಗಿದೆ.
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.ಶನಿವಾರ ನಡೆದ ಸಭೆಗೆ ಗೈರುಹಾಜರಾಗಿದ್ದ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್, ಹಿರಿಯ ಕಾಂಗ್ರೆಸ್ ಮುಖಂಡ ಎರ್ಮು ಹಾಜಿ ಅವರನ್ನು ಭೇಟಿಯಾಗಿ ಶನಿವಾರ ನಡೆದ ಸಭೆ ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಹಂಚಿಕೊAಡಿದ್ದಾರೆ.
ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಕುಂಜಿಲದ ಮೊಹಮ್ಮದ್ ಹಾಜಿ ಅವರು ಮಾತ್ರ ಸೂಕ್ತ ಎಂಬAತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಒಂದು ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರು ಬಿಂಬಿಸುತ್ತಿದ್ದಾರೆ. ಅದಲ್ಲದೇ ಮೊಹಮ್ಮದ್ ಹಾಜಿ ಅವರ ಪರವಾಗಿ ಪಿ.ಎ ಹನೀಫ್ ತೆರೆಮರೆಯಲ್ಲಿ ಬೆಂಬಲ ಸೂಚಿಸುತ್ತಿರುವ ಬಗ್ಗೆ ಕೂಡ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷರಾಗುವವರಿಗೆ ಧಾರ್ಮಿಕ ವಿಷಯದ ಬಗ್ಗೆ ಅರಿವು ಇರಬೇಕು ಅಂತಹವರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬರಹಗಳು ವ್ಯಾಟ್ಸ್ ಗ್ರೂಪ್ ಗಳಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದವರು ಶೇರ್ ಮಾಡುತ್ತಿದ್ದರು.ವಿಶೇಷವಾಗಿ ಕುಂಜಿಲ ಮೊಹಮ್ಮದ್ ಹಾಜಿ ಅವರಿಗೆ ಮಾತ್ರ ಧಾರ್ಮಿಕ ವಿಷಯದ ಬಗ್ಗೆ ಗೊತ್ತಿರುವುದು ಉಳಿದವರಿಗೆ ಏನೂ ಗೊತ್ತೇ ಇಲ್ಲ ಎಂಬAತೆ ಇದೀಗ ಬಿಂಬಿಸಿರುವ ಬಗ್ಗೆ ಬಹಿರಂಗವಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಎರಡು ಗುಂಪುಗಳು ರಚನೆಗೊಂಡಿದ್ದು, ಬಣಗಳ ಬಡಿದಾಟದಲ್ಲಿ ಯಾರಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಕಾದುನೋಡಬೇಕಾಗಿದೆ. -ಕೆ.ಎಂ ಇಸ್ಮಾಯಿಲ್ ಕಂಡಕರೆ