ಗೋಣಿಕೊಪ್ಪಲು, ಆ. ೭: ಜಿಲ್ಲೆಯ ವಿವಿಧೆಡೆ ಆನೆ - ಮಾನವ ಸಂಘರ್ಷ ಮುಂದುವರೆಯುತ್ತಿದ್ದು ಕಾಡಾನೆಯ ದಾಳಿಗೆ ಅಮಾಯಕ ರೈತರು ಬಲಿಯಾಗುತ್ತಿದ್ದಾರೆ. ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು, ಜನಪ್ರತಿನಿಧಿಗಳು ಕಾಡಾನೆಯ ನಿಯಂತ್ರಣಕ್ಕೆ ಹಲವು ಸಭೆಗಳನ್ನು ನಡೆಸಿ ಹಲವು ರೀತಿಯ ರೂಪು ರೇಷೆಗಳ ಪ್ರಯತ್ನ ಮುಂದುವರೆಸುತ್ತಿದ್ದರೂ ಜಿಲ್ಲೆಯ ಹಲವೆಡೆ ಅಮಾಯಕ ಕಾರ್ಮಿಕರು, ರೈತರು ಕಾಡಾನೆ ದಾಳಿಗೆ ಸಿಲುಕಿ ಮೃತಪಡುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಗ್ರಾಮದ ರೈತ ಕೊಪ್ಪದ ಶಿವಪ್ಪ (೭೨) ಎಂಬವರು ತಮ್ಮ ಮನೆಯ ಬಳಿ ರಾತ್ರಿ ೮.೩೦ರ ಸುಮಾರಿಗೆ ಜೋರಾಗಿ ಸದ್ದಾಗುತ್ತಿರುವುದನ್ನು ಗಮನಿಸಿ ಮನೆಯ ಹೊರ ಭಾಗಕ್ಕೆ ಆಗಮಿಸಿ ಸುಮಾರು ೩೦ ಅಡಿ ದೂರದಲ್ಲಿ ತೆರಳಿ ವೀಕ್ಷಣೆ ಮಾಡುತ್ತಿದ್ದಂತೆಯೇ ಮನೆಯ ಬಳಿ ಇದ್ದ ಪುಂಡಾನೆಯೊAದು ಶಿವಪ್ಪನವರ ಮೇಲೆ ದಿಢೀರ್ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಶಿವಪ್ಪನವರು ಜೋರಾಗಿ ಕಿರುಚಿಕೊಂಡ ಸಂದರ್ಭ ಮನೆಯವರು ಬಂದು ನೋಡಿದಾಗ ಗಾಯಗೊಂಡ ಶಿವಪ್ಪನವರು ಅಂಗಾತ ಬಿದ್ದಿದ್ದರು.
ಗಂಭೀರ ಗಾಯಗೊಂಡಿದ್ದ ಶಿವಪ್ಪನವರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ
(ಮೊದಲ ಪುಟದಿಂದ) ಸಾಗಿಸುವ ಪ್ರಯತ್ನ ನಡೆಸಲಾಯಿ ತಾದರೂ ಆದರೆ ಮಾರ್ಗದಲ್ಲಿಯೇ ಶಿವಪ್ಪನವರು ಅಸುನೀಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಡಾನೆ ಉಪಟಳದ ಬಗ್ಗೆ ಗ್ರಾಮಸ್ಥರು ತಮ್ಮ ಆಕ್ರೋಶ ಹಾಗೂ ಅಸಮಾಧಾನವನ್ನು ಹೊರ ಹಾಕಿದರು.
ಗ್ರಾಮದಲ್ಲಿ ಪುಂಡಾನೆಯೊAದು ಓಡಾಡುತ್ತಿದ್ದು ಆಗಿಂದ್ದಾಗೆ ನಾಗರಿಕರಿಗೆ ತೊಂದರೆ ನೀಡುತ್ತಿದೆ. ಗ್ರಾಮದಲ್ಲಿ ಭಯದ ವಾತಾವರಣವಿದೆ. ಕಾಡಾನೆ ಸೆರೆಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇಲ್ಲಿಯ ತನಕ ಪ್ರಯೋಜನವಾಗಿಲ್ಲ. ಇದೀಗ ಅಮಾಯಕರು ಕಾಡಾನೆ ದಾಳಿಗೆ ತಮ್ಮ ಜೀವ ಕಳೆದುಕೊಳ್ಳುವಂತಾಗಿದೆ. ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುವಂತೆ ಆಗ್ರಹಿಸಿದರು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಕೇತ್ ಪೂವಯ್ಯ ಗ್ರಾಮದಲ್ಲಿ ತೊಂದರೆ ನೀಡುತ್ತಿರುವ ಪುಂಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಕೂಡಲೇ ಕೈಗೆತ್ತಿಕೊಳ್ಳಬೇಕು. ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು. ಭೇಟಿಯ ವೇಳೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಪ್ರಮುಖರುಗಳಾದ ಸೂರಜ್ ಹೊಸೂರು,ಗ್ರಾಮ ಪಂಚಾಯಿತಿ ಸದಸ್ಯರಾದ ಆದಮ್‌ಕುಂಞÂ, ಪಧ್ಮನಾಭ ಮಂಗಳಪಾರೆ, ರಘುನಾಥ್ ಮಾಲಂಭಿ, ವಿನಯ್ ಮಾಣಿಕಲ್ಲು, ಕೊಪ್ಪದ ಶಿವರಾಮ್, ಭುವನೇಶ್ವರ, ವಲಯ ಅರಣ್ಯಾಧಿಕಾರಿಗಳು, ಆಸ್ಪತ್ರೆ ವೈದ್ಯರು ಹಾಜರಿದ್ದರು. ಮೃತರು ಪತ್ನಿ, ಐವರು ಪುತ್ರಿಯರನ್ನು ಅಗಲಿದ್ದಾರೆ.
-ಹೆಚ್.ಕೆ. ಜಗದೀಶ್/
ಗಿರೀಶ್ ಪೆರಾಜೆ