ಮಡಿಕೇರಿ, ಆ. ೯: ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ವಾರ್ಡ್ ಸಭೆ ತಾ. ೧೨ ಹಾಗೂ ೧೩ ರಂದು ನಡೆಯಲಿದೆ.

ಕೆದಮುಳ್ಳೂರು ತೋಮರ ವಾರ್ಡ್ ಸಭೆ ತಾ. ೧೨ ರಂದು ಬೆಳಿಗ್ಗೆ ೧೦.೩೦ಕ್ಕೆ ತೋಮರ ಸಮುದಾಯ ಭವನದಲ್ಲಿ ಎಂ.ಬಿ. ಮೀನಾಕ್ಷಿ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೨ ಗಂಟೆಗೆ ನಡಿಕೇರಿಯಂಡ ಶೀಲಾ ಅಧ್ಯಕ್ಷತೆಯಲ್ಲಿ ಪಾಲಂಗಾಲ ಅಂಗನವಾಡಿ ಕೇಂದ್ರದಲ್ಲಿ, ತಾ. ೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಎಂ.ಎA. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಕೊಟ್ಟೋಳಿ ಅಂಗನವಾಡಿ ಕೇಂದ್ರದಲ್ಲಿ, ಮಾಳೇಟಿರ ಸಾಬ ಮುತ್ತಪ್ಪ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ, ಮಧ್ಯಾಹ್ನ ೨ ಗಂಟೆಗೆ ಕೋರಿಯಾರು ತಾಯಮ್ಮ ಅಧ್ಯಕ್ಷತೆಯಲ್ಲಿ ಪುತ್ತಮಕ್ಕಿ ಶಾಲೆಯಲ್ಲಿ ವಾರ್ಡ್ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.